ಬಸವಣ್ಣನವರ ಒಂದು ವಚನದ ಕುರಿತು ಮಾತನಾಡುತ್ತ ಸಾಹಿತಿ ಅ.ರಾ.ಮಿತ್ರ ಒಂದು ಕುತೂಹಲಕಾರಿ ಸಂಗತಿಯನ್ನು ಹಂಚಿಕೊಳ್ಳುತ್ತಾರೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
“ನುಡಿದರೆ ಮುತ್ತಿನ ಹಾರದಂತಿರ ಬೇಕು” ಅನ್ನೋ ವಚನ ಇದೆಯಲ್ಲ, ಅದರಲ್ಲಿ ಒಂದು ಮಾತು ಬರ್ತದೆ, “ನುಡಿದರೆ ಸ್ಫಟಿಕದ ಶಲಾಕೆಯಂತಿರ ಬೇಕು” ಅಂತ. ಈ ಸ್ಫಟಿಕದ ಶಲಾಕೆ ಅನ್ನೋದನ್ನ ನಾವು ಬಹಳ ಸ್ಪಷ್ಟ, ಪಾರದರ್ಶಕ ಅನ್ನೋ ಅರ್ಥದಲ್ಲಿ ಬಳಸ್ತಾ ಇದೀವಿ. ಅದ್ರೆ ನನಗೊಬ್ರು ಅದರ ಅರ್ಥ ಹೇಳಿದಾಗ ಮೈ ಝುಂ ಅಂದ್ಬಿಟ್ತು.
ಅದು ಏನಂದ್ರೆ ವಿಶ್ವಕರ್ಮ ಜನಾಂಗದವರು ಇದ್ದಾರಲ್ಲ ಅವರು, ವಿಗ್ರಹಗಳನ್ನ ಕಬ್ಬಿಣದ ಉಳಿಯಲ್ಲಿ ಕೆತ್ತುತ್ತಾ ಹೋಗುತ್ತಾರೆ. ಕಣ್ಣುಗಳನ್ನ ಮಾತ್ರ ಸ್ಫಟಿಕದಿಂದ ಬಿಡಿಸ್ತಾರಂತೆ. ಆದ್ದರಿಂದ ಸ್ಫಟಿಕದ ಶಲಾಕೆಯಂತಿರ ಬೇಕು ಅಂದ್ರೆ ನಮ್ಮ ಕಣ್ಣನ್ನ ತೆರೆಸೋ ಹಾಗಿರ ಬೇಕು ಅಂತ ಅರ್ಥ ಬರ್ತದೆ.


[…] ಹೊಳೆಯುವಂತೆ ಮಾಡಿದ್ದರು (ಲೇಖನದ ಕೊಂಡಿ: https://aralimara.com/2025/01/14/coffee-38/). ಅದನ್ನು ಓದಿ ಕ್ಷಣಾರ್ಧದಲ್ಲಿ ನನ್ನ ಮನಸು […]
LikeLike