ಕತೆಯನ್ನು ಸಜೀವ ಸೃಷ್ಟಿಯಂತೆ ಕಾಣುತ್ತಿದ್ದ ಇಬ್ಬರು ಮಹನೀಯರ ನಡುವಿನ ಮಾತುಕತೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ನಿಮ್ಮ ಗೌಡರ ಮಲ್ಲಿ ಕಥೆಯ ಬಗ್ಗೆ ಒಂದು ಆಪಾದನೆ ಇದೆ. ಅದರ ಬಗ್ಗೆ ನಾನು ಕೇಳಬಾರದು ಆದರೂ ಕೇಳ್ತಾ ಇದ್ದೀನಿ. ನಿಮ್ಮ ಗೌಡರ ಮಲ್ಲಿ ಕಥೆಯಲ್ಲಿ ಮಲ್ಲಿ ಗೆ ಒಂದು ಮಗು ಆಯ್ತು ಆದರೆ ಅದು ಸತ್ತು ಹೋಯ್ತು ಅಂತ ಹೇಳ್ತೀರಿ. ಆ ಮಗು ಬದುಕಿದ್ದರೆ ಅದಕ್ಕೇನಾದರೂ ತೊಂದರೆ ಆಗತ್ತೆ ನಿಮಗೆ ಅನಿಸಿತ್ತೆ?”
“ಏನೂ ತೊಂದರೆ ಆಗ್ತಿರ್ಲಿಲ್ವಲ್ಲ ಪಾಪ, ನಮ್ಮ ಹಿಂದಿನ ಜೀವನವನ್ನ ಬಲ್ಲವರಿಗೆ ಮಗುವಿಗೆ ಏನೂ ತೊಂದರೆ ಆಗ್ತಿರ್ಲಿಲ್ಲ ಅಂತ ಗೊತ್ತಾಗ್ತದೆ. ನಮ್ಮ ಹಳ್ಳಿಗಳಲ್ಲಿ ಮಲ್ಲಿಯಂತ ಹೆಣ್ಣುಮಕ್ಕಳು ಪಡೆದ ಮಕ್ಕಳು ಸುಖವಾಗಿ ಜೀವಿಸಿದ್ದಾರೆ, ಬಾಳಿದ್ದಾರೆ ಅವರಿಗೆ ಅಲ್ಲಿ ಕೆಡಕಿನ ಜಾಗ ಏನೂ ಇರಲಿಲ್ಲವಲ್ಲ.”
“ಧರ್ಮ, ಸಮಾಜ ಆ ಮಕ್ಕಳನ್ನ ಕೆಟ್ಟದಾಗಿ ನಡೆಸಿಕೊಳ್ಳಬಹುದು ಎನ್ನುವ ಭಯದಿಂದ ನೀವು ಆ ಮಗು ಸತ್ತು ಹೋಗುವಂತೆ ಮಾಡಿದೀರಿ ಎಂದು ಹೇಳೋದು ತಪ್ಪಾಗತ್ತೆ ಹಾಗಾದ್ರೆ.”
“ನಾನು ಹಾಗೆ ಮಾಡ್ತೀನೆಯೇ ಮಹಾರಾಯರೆ, ಮಲ್ಲಿ ನನ್ನ ಮಗಳ ಹಾಗೆ , ಅವಳು ಹೆತ್ತ ಮಗು ನನ್ನ ಮೊಮ್ಮಗು ಅಲ್ವೇ?”
“ತುಂಬಾ ಸಂತೋಷ ಆಯ್ತು ನಿಮ್ಮ ಮಾತು ಕೇಳಿ.”
ಈ ಮಾತುಕತೆ ನಡೆದದ್ದು ವಿ. ಸಿ ಮತ್ತು ಮಾಸ್ತಿಯವರ ನಡುವೆ.

