ಜರ್ಮನಿಯ ವಿದ್ವಾಂಸರೊಬ್ಬರು ತಮ್ಮ ಬೇಂದ್ರೆ ಭೇಟಿಯ ಬಗ್ಗೆ ಅನಂತಮೂರ್ತಿಯವರ ಬಳಿ ಬಗ್ಗೆ ಹೇಳಿಕೊಂಡಿದ್ದು ಹೀಗೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಜರ್ಮನಿಯ ವಿದ್ವಾಂಸರೊಬ್ಬರು ಮೈಸೂರಿನಲ್ಲಿ ಅನಂತಮೂರ್ತಿಯವರನ್ನು ಭೇಟಿ ಮಾಡುತ್ತಾರೆ. ಅವರು ಮುಂದೆ ಧಾರವಾಡಕ್ಕೆ ಬೇಂದ್ರೆಯವರ ಭೇಟಿಗೆ ಹೋಗುವುದಿರುತ್ತದೆ. ಈ ವಿಷಯ ಗೊತ್ತಾದ ಕೂಡಲೆ ಅನಂತಮೂರ್ತಿ, ಅರವಿಂದ ರ ಬಗ್ಗೆ ಒಂದು ನಿರ್ದಿಷ್ಟ ಪ್ರಶ್ನೆ ಕೇಳುವಂತೆ ಜರ್ಮನಿಯ ವಿದ್ವಾಂಸರಿಗೆ ಹೇಳುತ್ತಾರೆ.
ಬೇಂದ್ರೆ ಭೇಟಿ ಮುಗಿಸಿ ಬಂದ ಜರ್ಮನಿಯ ವಿದ್ವಾಂಸರನ್ನು ಅನಂತಮೂರ್ತಿ, ಅರವಿಂದರ ಬಗ್ಗೆ ಬೇಂದ್ರೆ ಏನು ಹೇಳಿದರು ಎಂದು ಕೇಳುತ್ತಾರೆ.
“ ಅರವಿಂದರು ಮಹಾಯೋಗಿ, ತತ್ವಜ್ಞಾನಿ ಎಂದೆಲ್ಲ ಬೇಂದ್ರೆ ಹೊಗಳಿದರು. ನಿಮ್ಮಿಬ್ಬರ ಕಾವ್ಯದಲ್ಲಿ ಯಾರ ಕಾವ್ಯ ಶ್ರೇಷ್ಠ ? ಎಂದು ನಾನು ಬೇಂದ್ರೆಯವರನ್ನು ಕೇಳಿದೆ. ಬೇಂದ್ರೆ, Of course mine ಎಂದು ಬಿಟ್ಟರು”

