ಅಹಂಕಾರದ ಜಾಲ ( Ego Trap)

ಸುಪೀರಿಯಾರಿಟಿಯ (ಶ್ರೇಷ್ಠತೆ) ಭಾವನೆಗಳ ಬಗ್ಗೆ ಸದಾ ಎಚ್ಚರಿಕೆಯಿಂದಿರಿ. ನಾನು ಮಾಡಿದ್ದೇ ಸರಿ ಎನ್ನುವ ಸುಪೀರಿಯಾರಿಟಿ ಭಾವನೆ ನೀವು Ego Trap ನಲ್ಲಿದ್ದೀರಿ ಎನ್ನುವುದಕ್ಕೆ ಬಹಳ ದೊಡ್ಡ ಸುಳಿವು… । ಸಂಗ್ರಹಾನುವಾದ: ಚಿದಂಬರ ನರೇಂದ್ರ

  1. ಕೆಲಸಕ್ಕೆ ಹೋಗುವಾಗ ಬೈಕ್ ಬಳಸುವುದು ಅಥವಾ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸೋದು, ಸ್ವಂತ ಕಾರಿನಲ್ಲಿ ಕೆಲಸಕ್ಕೆ ಹೋಗೋದಕ್ಕಿಂತ ಹೆಚ್ಚು ಅಧ್ಯಾತ್ಮಿಕ ಎಂದು ತಿಳಿದುಕೊಂಡು ನೀವು ಕಾರ್ ನವರನ್ನು ಜಡ್ಜ್ ಮಾಡುತ್ತಿದ್ದೀರಾದರೆ ನೀವು Ego Trap ( ಅಹಂ ಜಾಲ) ನಲ್ಲಿ ಸಿಕ್ಕಿಬಿದ್ದಿದ್ದೀರಿ.
  2. ಟೆಲಿವಿಜನ್ ನೋಡೋದನ್ನ ನಿಲ್ಲಿಸೋದು ಹೆಚ್ಚು ಅಧ್ಯಾತ್ಮಿಕ ಏಕೆಂದರೆ ಅದು ನಿಮ್ಮ ಮೆದುಳನ್ನು ನಿಷ್ಕ್ರೀಯಗೊಳಿಸುತ್ತದೆ ಎಂದು ತಿಳಿದುಕೊಂಡು ನೀವು ಟೆಲಿವಿಜನ್ ನೋಡೋದು ನಿಲ್ಲಿಸಿಬಿಟ್ಟಿದ್ದೀರಿ. ಆದರೆ ನೀವು ಟೆಲಿವಿಜನ್ ನೋಡುವವರನ್ನ ಜಡ್ಜ್ ಮಾಡೋದನ್ನ ನಿಲ್ಲಿಸಿಲ್ಲ ಎಂದರೆ ನೀವು Ego Trap ನಲ್ಲಿದ್ದೀರಿ.
  3. ಗಾಸಿಪ್ ಮಾಡೋದು, ಟ್ಯಾಬೊಲೈಡ್ ಗಳನ್ನ ಓದೋದು, ಸಿನೇಮಾ ಮ್ಯಾಗಜಿನ್ ಗಳನ್ನ ಓದೋದು ಮನಸ್ಸನ್ನು ಹಾಳುಮಾಡುತ್ತದೆ , ಇವನ್ನು ನಿಲ್ಲಿಸುವುದು ಹೆಚ್ಚು ಅಧ್ಯಾತ್ಮಿಕ ಎಂದು ತಿಳಿದುಕೊಂಡು ನೀವು ಇವನ್ನೆಲ್ಲ ನಿಲ್ಲಿಸಿಬಿಟ್ಟಿದ್ದೀರಿ. ಆದರೆ ಹೀಗೆಲ್ಲ ಮಾಡುವುವವರನ್ನು ಜಡ್ಜ್ ಮಾಡುವುದನ್ನ ನೀವು ಇನ್ನೂ ನಿಲ್ಲಿಸಿಲ್ಲ ಎಂದರೆ ನೀವು Ego Trap ನಲ್ಲಿದ್ದೀರಿ.
  4. ಪಾಪ್ ಸಂಗೀತ, ಸಿನೇಮಾ ಹಾಡುಗಳನ್ನ ಕೇಳೋದಕ್ಕಿಂತ ಶಾಸ್ತ್ರೀಯ ಸಂಗೀತ ಕೇಳೋದು ಹೆಚ್ಚು ಅಧ್ಯಾತ್ಮಕ ಎಂದು ತಿಳಿದುಕೊಂಡು ನೀವು ಕೇವಲ ಶಾಸ್ತ್ರೀಯ ಸಂಗೀತ ಕೇಳುತ್ತಿದ್ದೀರಿ. ಆದರೆ ನೀವು ಪಾಪ್ ಮತ್ತು ಸಿನೆಮಾ ಸಂಗೀತ ಕೇಳುವವರನ್ನು ಜಡ್ಜ್ ಮಾಡುವುದನ್ನ ಮುಂದುವರೆಸಿದ್ದೀರಿ ಎಂದರೆ ನೀವು Ego Trap ನಲ್ಲಿದ್ದೀರಿ.
  5. ಯೋಗ ಮಾಡುವುದು, ಮೆಡಿಟೇಶನ್ ಮಾಡುವುದು, ರೇಕಿ ಪ್ರ್ಯಾಕ್ಟೀಸ್ ಮಾಡುವುದು, ಅಧ್ಯಾತ್ಮಿಕ ಸಾಹಿತ್ಯ ಓದುವುದು, ಸಾದಾ ಜೀವನ ನಡೆಸೋದು, ವೀಗನ್ ಆಗೋದು, ಆರ್ಗ್ಯಾನಿಕ್ ಆಹಾರ ಸೇವಿಸೋದು , ಹೀಲಿಂಗ್ ಹರಳು ಧರಿಸೋದು etc ಮಾಡೋದು ಹೆಚ್ಚು spiritual ಎಂದುಕೊಂಡು ನೀವು ಇವನ್ನೆಲ್ಲ ಮಾಡುತ್ತಿದ್ದೀರಿ. ಆದರೆ ಇವನ್ನೆಲ್ಲ ಯಾರು ಮಾಡುತ್ತಿಲ್ಲವೋ ಅವರನ್ನು ಜಡ್ಜ್ ಮಾಡೋದನ್ನ ಮುಂದುವರೆಸಿದ್ದೀರಿ ಎಂದರೆ ನೀವು Ego Trap ನಲ್ಲಿದ್ದೀರಿ.

ಈ ಸುಪೀರಿಯಾರಿಟಿಯ (ಶ್ರೇಷ್ಠತೆ) ಭಾವನೆಗಳ ಬಗ್ಗೆ ಸದಾ ಎಚ್ಚರಿಕೆಯಿಂದಿರಿ. ನಾನು ಮಾಡಿದ್ದೇ ಸರಿ ಎನ್ನುವ ಸುಪೀರಿಯಾರಿಟಿ ಭಾವನೆ ನೀವು Ego Trap ನಲ್ಲಿದ್ದೀರಿ ಎನ್ನುವುದಕ್ಕೆ ಬಹಳ ದೊಡ್ಡ ಸುಳಿವು. ನೆನಪಿಡಿ Ego ಹಿಂದಿನ ಬಾಗಿಲಿನಿಂದ ಒಂದು ಒಳ್ಳೆಯ ಐಡಿಯಾದ ಕೈ ಹಿಡಿದುಕೊಂಡು ನಿಮ್ಮೊಳಗೆ ಪ್ರವೇಶ ಮಾಡುತ್ತದೆ. ಉದಾಹರಣೆಗೆ ಯೋಗಾ ಮಾಡುವುದು, ಆದರೆ ನಿಮ್ಮ Ego ಯೋಗಾ ದ ಮೂಲ ಉದ್ದೇಶವನ್ನು ಹಿಂದಕ್ಕೆ ಸರಿಸಿ ನಿಮ್ಮೊಳಗೆ ಸುಪೀರಿಯಾರಿಟಿಯ ಭಾವನೆಯನ್ನು ತುಂಬಲು ಶುರು ಮಾಡುತ್ತದೆ. ಆಗ ನೀವು ಯೋಗ ಮಾಡದೇ ಇರುವವರನ್ನು, ವಿರೋಧಿಸುವವರನ್ನು ಅಧ್ಯಾತ್ಮಿಕ ಜನ ಅಲ್ಲ ಎಂದು ಜಡ್ಜ್ ಮಾಡಲು ಶುರು ಮಾಡುತ್ತೀರಿ, Ego Trap ಗೆ ಸಿಕ್ಕಿ ಬೀಳುತ್ತೀರಿ. ಶ್ರೇಷ್ಠತೆ, ಖಂಡನೆ ಮತ್ತು ಜಡ್ಜಮೆಂಟ್ Ego Trap ನ ಮೂರು ಮಹಾ ಆಯುಧಗಳು. ಇವುಗಳ ಬಗ್ಗೆ ಎಚ್ಚರಿಕೆಯಿಂದಿರಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.