ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ
ಒಬ್ಬ ಹೆಂಗಸು ತನ್ನ ಪ್ರಿಯಕರನಿಗೆ ʻಐ ಲವ್ ಯೂʼ ಅಂದಳು.
ʻನಿನ್ನ ಪ್ರೀತಿಗೆ ಯೋಗ್ಯವಾದದ್ದು ನನ್ನ ಹೃದಯದಲ್ಲಿದೆ,ʼ ಅಂದ ಗಂಡಸು.
ʻನೀನು ನನ್ನ ಲವ್ ಮಾಡುತ್ತೀಯೋ ಇಲ್ಲವೋ ಅಷ್ಟು ಹೇಳು,ʼ ಅಂದಳು.
ಅವನು ಸುಮ್ಮನೆ ಅವಳನ್ನೇ ನೋಡುತ್ತಾ ನಿಂತ. ಒಂದೂ ಮಾತಾಡಲಿಲ್ಲ.
ಹೆಂಗಸು ಸಿಟ್ಟುಗೊಂಡಳು. ʻಐ ಹೇಟ್ ಯೂʼ ಎಂದು ಚೀರಿದಳು.
ʻನಿನ್ನ ದ್ವೇಷಕ್ಕೆ ತಕ್ಕದ್ದು ನನ್ನ ಹೃದಯದಲ್ಲೇ ಇದೆ,ʼ ಅಂದ ಗಂಡಸು.

