ಖಲೀಲ್ ಗಿಬ್ರಾನನ ಕತೆಗಳು#36: ಕನಸುಗಳು

ಮೂಲ: ಖಲೀಲ್ ಗಿಬ್ರಾನ್ (‘ಅಲೆಮಾರಿ’ ಕೃತಿಯಿಂದ) । ಕನ್ನಡಕ್ಕೆ: ಓ.ಎಲ್.ನಾಗಭೂಷಣ ಸ್ವಾಮಿ

ಒಬ್ಬಾತ ಕನಸು ಕಂಡ. ಎಚ್ಚರವಾದ. ಸತ್ಯವನ್ನು ನುಡಿಯುವ ಪ್ರವಾದಿಯ ಹತ್ತಿರಕ್ಕೆ ಹೋದ. ʻನನಗೆ ಬಿದ್ದ ಕನಸಿನ ಅರ್ಥ ವಿವರಿಸು,ʼ ಎಂದು ಬೇಡಿದ.
ಆಗ ಮಂತ್ರವಾದಿ, ʻನೀನು ಎಚ್ಚರವಾಗಿದ್ದಾಗ ಕಂಡ ಕನಸಿನ ಅರ್ಥ ಕೇಳುವುದಾದರೆ ನನ್ನ ಹತ್ತಿರ ಬಾ, ಆ ಕನಸಿನ ಅರ್ಥ ಹೇಳುತ್ತೇನೆ. ನಿನ್ನ ನಿದ್ದೆಯಲ್ಲಿ ನೀನು ಕಾಣುವ ಕನಸು ನನ್ನ ವಿವೇಕಕ್ಕೂ ಸಂಬಂಧಪಟ್ಟಿಲ್ಲ, ನಿನ್ನ ಕಲ್ಪನೆಯೂ ಅಲ್ಲ,ʼ ಅಂದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.