ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಅದು ಮುಸ್ಲೀಂ ರು ಹೆಚ್ಚಾಗಿರೋ ಪ್ರದೇಶದ ಸಭೆ. ಕಾಮ್ರೇಡ್ ಕನ್ಹಯ್ಯ ಕುಮಾರ್ ಮಾತಾಡ್ತಿದಾನೆ.
ಕನ್ಹಯ್ಯ : ಅವ್ರು ನಿಮ್ಮನ್ನ ಪ್ರಶ್ನೆ ಮಾಡ್ತಾರೆ “ ನೀವು ದೇಶ ಭಕ್ತರಾ? “ ನೀವೇನ್ ಉತ್ರ ಕೊಡ್ತೀರಿ?
ಸಭಿಕರು : (ಜೋರಾಗಿ) ಹೌದು ನಾವು ದೇಶ ಭಕ್ತರು.
ಕನ್ಹಯ್ಯ : ಅವರ ಮುಂದಿನ ಪ್ರಶ್ನೆ “ ನಿಮಗೆ ಸಂವಿಧಾನದ ಬಗ್ಗೆ ಗೌರವ ಇದೆಯೇ? “ ನೀವೇನ್ ಉತ್ರ ಕೊಡ್ತೀರಿ?
ಸಭಿಕರು : (ಜೋರಾಗಿ) ಹೌದು, ನಮಗೆ ಗೌರವ ಇದೆ.
ಕನ್ಹಯ್ಯ : ಅವರು ಮತ್ತೆ ನಿಮ್ಮನ್ನ ಪ್ರಶ್ನೆ ಮಾಡ್ತಾರೆ “ ನೀವು ಸಂವಿಧಾನ ನಂಬ್ತೀರಾ ಅಥವಾ ಕುರಾನ್ ನಂಬ್ತೀರಾ ? “ ಆಗ ಏನ್ ಹೇಳ್ತೀರಾ?
ಇಡೀ ಸಭೆ ಸ್ಥಬ್ದ, ಪೂರ್ತಿ ನಿಶಬ್ದ.
ಕನ್ಹಯ್ಯ : ಆಗ ಅವರಿಗೆ ಹೇಳಿ, ನಮ್ಮ ಸಂವಿಧಾನ ನಮಗೆ ಕುರಾನ್ ನಂಬುವ ಹಕ್ಕು ನೀಡಿದೆ, ನಮ್ಮ ಸಂವಿಧಾನ ನಮ್ಮ ಧರ್ಮವನ್ನು ನಂಬುವ ನಮ್ಮ ಹಕ್ಕನ್ನು ರಕ್ಷಿಸುತ್ತದೆ.
ಇದು ಕಾಮ್ರೇಡ್ ಕನ್ಹಯ್ಯಾ ಕುಮಾರ್
ಫ್ಯಾಸಿಸಂ ವಿರುದ್ಧ ಹೋರಾಡೋದು ಅಂದ್ರೆ ಹೀಗೆ.
ಮುಸ್ಲೀಂ ವಿರೋಧಿ ಮನಸ್ಥಿತಿಯನ್ನು ವಿರೋಧಿಸುವುದು ಹೀಗೆ.

