ಖಾಲಿ ಬಟ್ಟಲಿಗೆ ಗೆರೆ ಎಳೆಯೋದು ಹ್ಯಾಗೆ? : Coffeehouse ಕತೆಗಳು

ಮನುಷ್ಯ ಸಂಬಂಧಗಳು ಎಂತಹ fluid state ನಲ್ಲಿರುತ್ತವೆ ಎಂದರೆ ಅಲ್ಲಿ ಈ ಕ್ಷಣ ಮಾಡಿದ ಒಂದು ತೀರ್ಮಾನ ಅಥವಾ ತೀರ್ಪು ಮುಂದಿನ ಕ್ಷಣದಲ್ಲಿ ತಪ್ಪಾಗಿರುತ್ತದೆ. ಈ ಕುರಿತು ಲೇಖಕ L C ನಾಗರಾಜ್, ಖಲೀಲ್ ಜಿಬ್ರಾನ್ ನ ಬದುಕಿನ ಪ್ರಸಂಗವನ್ನು ನೆನಪುಸಿಕೊಳ್ಳುತ್ತಾರೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ

ಖಲೀಲ್ ಗಿಬ್ರಾನ್ ನ ಜೀವನ ಕತೆ ಓದ್ತಿದ್ದೆ . ಅವನಿಗೆ ಬಾರ್ಬಾರ ಎಂಬ ಗೆಳತಿ ಇದ್ದಳು , ಅದು ಸಮಾಜದ ಯಾವುದೇ ಚೌಕಟ್ಟು/ ಸಿದ್ಧ ಮಾದರಿಗಳಾಚೆಗಿನ ಸಂಬಂಧ .

ಯಥಾ ಪ್ರಕಾರ ಗಿಬ್ರಾನ್ ಎಲ್ಲ ಕವಿ ಕಲಾವಿದರಂತೆ ಬಡವ , ಬಾರ್ಬಾರ ಅವನ ಕಲಾಕೃತಿಗಳ ಪ್ರದರ್ಶನಕ್ಕೆ ನೆರವಾಗುತ್ತಿದ್ದಳು

ಒಂದು ದಿನ ಬಾರ್ಬಾರ ಗಿಬ್ರಾನ್ ನ ಮನೆಗೆ ಬರುತ್ತಾಳೆ , ಇಬ್ಬರೂ ಕೂಡಿ ಗಂಜಿ ತಯಾರಿಸುತ್ತಾರೆ . ಒಂದೇ ಬಟ್ಟಲಿಗೆ ತುಂಬಿ ತಿನ್ನಲು ಕೂರುತ್ತಾರೆ

ಬಾರ್ಬಾರ ಬಟ್ಡಲಿನಲ್ಲಿದ್ದ ದ್ರವರೂಪದ ಗಂಜಿಯ ಮೇಲೆ ಒಂದು ಗೆರೆ ಎಳೆದು ” ಅತ್ತ ಕಡೆ ನಿನ್ನದು ಇತ್ತ ಕಡೆ ನನ್ನದು ಎನ್ನುತ್ತಾಳೆ ; ದ್ರವರೂಪದ ಆಹಾರದಲ್ಲಿ ಅತ್ತ ಕಡೆ , ಇತ್ತ ಕಡೆ ಯಾವುದು ! ಗಿಬ್ರಾನ್ ನಕ್ಕು ಗೆರೆಯಿಂದೀಚಿನದನ್ನ ಮಾತ್ರ ತಿನ್ನತೊಡಗುತ್ತಾನೆ

ಇದು ಇಣುಕಿ ನೋಡುವವರಿಗೆ ಟೀ ಅಂಗಡಿ ಮುಂದೆ ಕುಂತು ಬೋಳೆ ಮಾತು ಆಡಲು ಒಂದು ವಸ್ತುವಾಗಬಹುದಷ್ಟೇ.

ಬಾರ್ಬಾರ ದ್ರವರೂಪದ ಗಂಜಿಯ ಮೇಲೆ ಎಳೆದ ಗೆರೆ , ಗಿಬ್ರಾನ್ ನ ಮುಗುಳ್ನಗೆಯನ್ನ ನಮ್ಮ ಕಾಲದ ಸಮಾಜವಾದ, ಎಡಪಂಥ , ಗಾಂಧಿವಾದ ಇತ್ಯಾಧಿಗಳಿಗೆ ಸುಮ್ಮನೆ ಅನ್ವಯಿಸಿ ನೋಡಿ ; ಗೆರೆ ಎಳೆಯಲು ಇಲ್ಲಿ ಈಗ ನಮ್ಮ ಬಟ್ಟಲುಗಳಲ್ಲಿ ಗಂಜಿ ಕೂಡ ಇಲ್ಲ.

ನಮ್ಮ ಬಟ್ಟಲುಗಳಿಗೆ ಗಂಜಿ ತುಂಬಿದ ನಂತರ ಯಾರ ಪಾಲು ಎತ್ತ ಕಡೆ ಅಂತಾ ಗೆರೆ ಎಳೆಯಬಹುದು ; ಖಾಲಿ ಬಟ್ಟಲಿಗೆ ಗೆರೆ ಎಳೆಯೋದು ಹ್ಯಾಗೆ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.