ಮಗುವಿನ ಹಾಗಿರಿ ( Be like a child ): ಓಶೋ 365 Day#21

ಮೇಲ್ಮೈಯಲ್ಲಿ ಮಾತ್ರ ನಾವು ಪ್ರತ್ಯೇಕವಾಗಿದ್ದೇವೆ ; ಆಳದಲ್ಲಿ ಯಾವುದೂ ಪ್ರತ್ಯೇಕವಾಗಿಲ್ಲ. ಕೇವಲ ಕಣ್ಣಿಗೆ ಕಾಣುವ ಭಾಗಗಳು ಮಾತ್ರ ಪ್ರತ್ಯೇಕ ; ಅಗೋಚರ ಭಾಗಗಳೆಲ್ಲ ಇನ್ನೂ ಒಂದಾಗಿಯೇ ಇವೆ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಬೆರಗು ಕಳೆದುಕೊಂಡವರು
ಧರ್ಮಕ್ಕೆ ಶರಣಾಗುತ್ತಾರೆ.
ಸ್ವಂತದ ಬಗ್ಗೆ ನಂಬಿಕೆಯಿಲ್ಲದವರು
ಅಧಿಕಾರವನ್ನು ಆಶ್ರಯಿಸುತ್ತಾರೆ.

ಆದ್ದರಿಂದಲೇ ಸಂತ
ಜನರಿಗೆ ಗೊಂದಲವಾಗದಿರಲೆಂದು
ಒಂದು ಹೆಜ್ಜೆ ಹಿಂದೆ ನಿಲ್ಲುತ್ತಾನೆ.
ಅವನು ಕಲಿಸುವ ರೀತಿ ಹೇಗೆಂದರೆ
ಜನರಿಗೆ
ಕಲಿಯುವ ಪ್ರಮೇಯವೇ ಇರುವುದಿಲ್ಲ.

~ ಲಾವೋತ್ಸೇ

ಉಪನಿಷತ್ತುಗಳ ಪ್ರಕಾರ, ಯಾರು ‘ಗೊತ್ತು’ ಎಂದು ತಿಳಿದುಕೊಂಡಿದ್ದಾರೆಯೋ ಅವರಿಗೆ ಏನೂ ಗೊತ್ತಿಲ್ಲ. ಏಕೆಂದರೆ ‘ಗೊತ್ತು’ ಎನ್ನುವ ವಿಚಾರವೇ ಗೊತ್ತುಮಾಡಿಕೊಳ್ಳಲು ನಿಮಗೆ ಅವಕಾಶ ಮಾಡಿ ಕೊಡುವುದಿಲ್ಲ. ಗೊತ್ತಿಲ್ಲ ಎನ್ನುವ ಐಡಿಯಾ ನಿಮ್ಮನ್ನು vulnerable ಆಗಿಸುತ್ತದೆ, ಗೊತ್ತು ಮಾಡಿಕೊಳ್ಳಲು ಮುಕ್ತರನ್ನಾಗಿಸುತ್ತದೆ. ಆಗ ನಿಮ್ಮ ಕಣ್ಣುಗಳು ಮಗುವಿನ ಹಾಗೆ ಬೆರಗಿನಿಂದ ತುಂಬಿಕೊಳ್ಳುತ್ತವೆ. ಆಗ ಯಾವುದು ನಿಮ್ಮ ವಿಚಾರ, ಯಾವುದು ಹೊರಗಿನಿಂದ ನಿಮ್ಮೊಳಗೆ ಪ್ರವೇಶ ಮಾಡಿದೆ ಎನ್ನುವುದನ್ನ ಬೇರ್ಪಡಿಸುವುದು ಕಠಿಣವಾಗುತ್ತದೆ, ಏಕೆಂದರೆ ನೀವು ಎಲ್ಲ ಹತೋಟಿಗಳಿಂದ ಮುಕ್ತರಾಗಿದ್ದೀರಿ. ಆದರೆ ಇದಕ್ಕಾಗಿ ಚಿಂತೆ ಮಾಡುವ ಕಾರಣವಿಲ್ಲ, ಏಕೆಂದರೆ ಮೈಂಡ್ ಎನ್ನುವುದು, ಒಂದು, ಅದು ಯೂನಿವರ್ಸಲ್ ಮೈಂಡ್. ಇದನ್ನು ಬೇಕಾದರೆ ದೇವರು ಎನ್ನಿ ಅಥವಾ collective unconscious ಎನ್ನಿ.

ನಾವು ಪ್ರತ್ಯೇಕವಾಗಿರುವುದು ಮೈಲ್ಮೈಯಲ್ಲಿ ಮಾತ್ರ, ಆಳದಲ್ಲಿ ನಾವು ಪ್ರತ್ಯೇಕವಾಗಿಲ್ಲ. ಕೇವಲ ಕಣ್ಣಿಗೆ ಕಾಣುವ ಭಾಗಗಳು ಮಾತ್ರ ಪ್ರತ್ಯೇಕ ; ಅಗೋಚರ ಭಾಗಗಳೆಲ್ಲ ಇನ್ನೂ ಒಂದಾಗಿಯೇ ಇವೆ. ಆದ್ದರಿಂದ ಯಾವಾಗ ನೀವು ರಿಲ್ಯಾಕ್ಸ್ ಆಗಿ ಮೌನವನ್ನು ಧರಿಸುತ್ತೀರೋ, ಹೆಚ್ಚು ಹೆಚ್ಚು ವಿನಯವಂತರಾಗುತ್ತೀರೋ, ಹೆಚ್ಚು ಹೆಚ್ಚು ಮಗುವಿನ ಹಾಗೆ ಮುಗ್ಧರಾಗುತ್ತೀರೋ ಆಗ ಯಾವ ವಿಚಾರ ನಿಮ್ಮದು, ಯಾವ ವಿಚಾರ ಎಲ್ಲಿಂದಲೋ ಬಂದು ನಿಮ್ಮನ್ನು ಸೇರಿಕೊಳ್ಳುತ್ತಿದೆ, ಅಥವಾ ಯಾರೋ ಮೇಸೇಜ್ ಕಳಿಸುತ್ತಿದ್ದಾರೆ ನೀವು ಕೇವಲ ಸ್ವೀಕರಿಸುತ್ತಿದ್ದೀರ ಎನ್ನುವುದನ್ನ ಶುರುವಾತಿನಲ್ಲಿ ಗೊತ್ತುಮಾಡಿಕೊಳ್ಳುವುದು ಕಠಿಣವಾಗಿರುತ್ತದೆ. ಖಂಡಿತ ಈ ವಿಚಾರಗಳು ಎಲ್ಲಿಂದಲೂ ಬಂದು ನಿಮ್ಮನ್ನು ಸೇರುತ್ತಿವೆ, ಬಹುತೇಕ ಅವು ಬರುತ್ತಿರುವುದು ನಿಮ್ಮ ಅಸ್ತಿತ್ವದ ಆಳದಿಂದ ಮತ್ತು ಈ ಅಸ್ತಿತ್ವದ ಆಳ ಎಲ್ಲರದೂ ಒಂದೇ ಆಗಿದೆ. ಇಲ್ಲಿ ಯಾವ ಪ್ರತ್ಯೇಕತೆ ಇಲ್ಲ.

ಆದ್ದರಿಂದ ಅತ್ಯಂತ ಓರಿಜಿನಲ್ ಥಾಟ್ ಮೇಲೆ ಯಾರ ಸಹಿಯೂ ಇರುವುದಿಲ್ಲ. ಅದು ತಾನಾಗಿಯೇ ಇದೆ. ಅದು ಬಂದಿರುವುದು ಕಲೆಕ್ಟಿವ್ ಮೂಲಕ, ಯೂನಿವರ್ಸಲ್ ಮೂಲಕ, ಒಂದು ಮೈಂಡ್ ಮೂಲಕ,mind with capital M. ಯಾವಾಗ ವೈಯಕ್ತಿಕ ಮೈಂಡ್, ಈಗೋ ಮೈಂಡ್ ರಿಲ್ಯಾಕ್ಸ್ ಆಗುತ್ತವೆಯೋ ಆಗ ಯೂನಿವರ್ಸಲ್ ಮೈಂಡ್ ನಿಮ್ಮನ್ನು ತನ್ನ ಪ್ರವಾಹದ ತೆಕ್ಕೆಗೆ ತೆಗೆದುಕೊಳ್ಳುತ್ತದೆ.

ಒಮ್ಮೆ, ಒಬ್ಬ ವಯಸ್ಸಾದ ಮನುಷ್ಯ ಸಮುದ್ರದ ದಂಡೆಯ ಮೇಲೆ ಓಡಾಡುತ್ತಿದ್ದಾಗ ಸಾವಿರಾರು ಸಂಖ್ಯೆಯಲ್ಲಿ ನಕ್ಷತ್ರ ಮೀನುಗಳು ತೀರದಲ್ಲಿ ಚಡಪಡಿಸುವುದನ್ನ ಕಂಡ.
ದೂರದಲ್ಲಿ ಒಬ್ಬ ಹುಡುಗಿ ಒಂದೊಂದಾಗಿ ಮೀನುಗಳನ್ನು ಎತ್ತಿ ವಾಪಸ್ ಸಮುದ್ರಕ್ಕೆ ಎಸೆಯುತ್ತಿದ್ದಳು. ಈ ದೃಶ್ಯವನ್ನು ನೋಡಿ ಆಶ್ಚರ್ಯಚಕಿತನಾದ ಮನುಷ್ಯ ಹತ್ತಿರ ಹೋಗಿ ಆ ಹುಡುಗಿಯನ್ನು ಮಾತಾಡಿಸಿದ.

“ ಹುಡುಗಿ, ಏನು ಮಾಡುತ್ತಿದಿ? “
“ ಈ ಮೀನುಗಳನ್ನು ಕಾಪಾಡುತ್ತಿದ್ದೇನೆ “ ಉತ್ತರಿಸಿದಳು ಹುಡುಗಿ. “ ನಾನು ಈ ಮೀನುಗಳನ್ನ ವಾಪಸ್ ಸಮುದ್ರಕ್ಕೆ ಬಿಡದಿದ್ದರೆ, ಅವು ಸತ್ತು ಹೋಗುತ್ತವೆ “
ಹುಚ್ಚು ಹುಡುಗಿ, ಆ ಮನುಷ್ಯ ಒಳಗೊಳಗೆ ನಕ್ಕ.
“ ಇರುವುದು ನೀನೊಬ್ಬಳೇ, ಮೀನುಗಳೋ ಸಾವಿರ ಸಾವಿರ. ಹೇಳು ಹೇಗೆ ಸಾಧ್ಯ ಈ ಕೆಲಸ ನಿನ್ನಿಂದ? “
ಹುಡುಗಿ ಬಾಗಿ ಒಂದು ಮೀನನ್ನು ಕೈಗೆತ್ತಿಕೊಂಡು ಆ ಮೀನನ್ನು ಒಮ್ಮೆ, ಆ ಮನುಷ್ಯನನ್ನು ಒಮ್ಮೆ ನೋಡಿದಳು.
“ನೋಡು ಹೀಗೆ” ಎನ್ನುತ್ತಾ
ಮೀನನ್ನು ಬೀಸಿ ಸಮುದ್ರದಲ್ಲಿ ಎಸೆದಳು.


ನೆನ್ನೆಯ ಕಂತು ಇಲ್ಲಿ ಓದಿ: https://aralimara.com/2025/02/07/osho-463/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ