ಅಖ್ತರ್ ಹೇಳಿದ ಗಾಲಿಬ್’ನಲ್ಲದ ಪದ್ಯ! : Coffeehouse ಕತೆಗಳು

ಗಾಲೀಬ್ ನ ಹೆಸರಲ್ಲಿ ಹಲವಾರು ಫೇಕ್ ಪದ್ಯದ ಸಾಲುಗಳು ಚಲಾವಣೆಯಲ್ಲಿವೆ. ಇದು ಗಾಲೀಬ್ ಬದುಕಿದ್ದಾಗ ಕೂಡ ನಡೆಯುತ್ತಿತ್ತು. ಈ ಕುರಿತ ಒಂದು ಸತ್ಯ ಘಟನೆಯನ್ನ ಜಾವೇದ್ ಅಖ್ತರ್ ನೆನಪಿಸಿಕೊಳ್ಳುತ್ತಾರೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ

ಒಂದು ದಿನ ಗಾಲೀಬ್ ನ ಬಳಿಗೆ ಬಂದ ವ್ಯಕ್ತಿ , ನಿನ್ನ ಈ ಶೇರ್ ನನಗೆ ಬಹಳ ಇಷ್ಟ ಎನ್ನುತ್ತ ಆ ಕವಿತೆಯ ಸಾಲುಗಳನ್ನ ಉಲ್ಲೇಖಿಸುತ್ತಾನೆ..

ಅಸದ್,
ಇಸ್ ಜಫಾ ಪರ್ ಭೀ
ತೂ ನೆ ವಫಾ ಕೀ,
ಮೇರೆ ಶೇರ್ ಶಾಭಾಶ್
ರೆಹಮತ್ ಖುದಾ ಕೀ

ಜಫಾ : ಕ್ರೌರ್ಯ, ವಫಾ : ನಿಯತ್ತು, ರೆಹಮತ್ : ಕರುಣೆ
ಅಸದ್ : ಗಾಲೀಬ್ ನ ಹಳೆಯ ಕಾವ್ಯನಾಮ
ಶೇರ್ : ಪದ್ಯದ ಸಾಲು, ಹುಲಿ, ಸಿಂಹ

ಇದಕ್ಕೆ ಉತ್ತರಿಸುತ್ತ ಗಾಲೀಬ್ ಹೇಳುತ್ತಾನೆ……

ಯೇ ಶೇರ್ ಅಗರ್ ಇಸ್ ಅಸದ್ ಕಾ ಹೈ
ತೋ ಲಾನತ್ ಖುದಾ ಕೀ,
ಆಗರ್ ಕಿಸೀ ಔರ್ ಅಸದ್ ಕಾ ಹೈ
ತೋ ರೆಹಮತ್ ಖುದಾ ಕೀ

ಈ ಶೇರ್
ಈ ಅಸದ್ ನದಾದರೆ
ಅದನ್ನು ದೇವರ ಶಾಪ ಎನ್ನಬೇಕು,
ಈ ಅಸದ್ ನದಲ್ಲವಾದರೆ
ಅದನ್ನು ದೇವರ ಕರುಣೆ ಎನ್ನಬೇಕು.

ಮುಂದುವರೆದು ಜಾವೇದ್ ಹೇಳುತ್ತಾರೆ,

ಜೀವನವಿಡೀ
ಅದೇ ತಪ್ಪು ಮಾಡುತ್ತಾ ಹೋದೆ ಗಾಲಿಬ್,
ಧೂಳು ಚೆಹರೆಯ ಮೇಲಿತ್ತು
ನಾನು ಕನ್ನಡಿಯ ಒರೆಸುತ್ತ ಹೋದೆ.

ಗಾಲೀಬ್ ನ ಹೆಸರಿನಲ್ಲಿ ಬಹಳ ಪ್ರಸಿದ್ದವಾಗಿರುವ ಈ ಶೇರ್ ಕೂಡ ಗಾಲೀಬ್ ನದಲ್ಲ!

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.