ಸಂಗ್ರಹ – ನಿರೂಪಣೆ : ಚಿದಂಬರ ನರೇಂದ್ರ
ಗುಲ್ಜಾರ್ ಸಾಬ್ ಮತ್ತು ಅನುಪಮ ಖೇರ್ ನಡುವಿನ ಒಂದು ಕುತೂಹಲಕಾರಿ ಮಾತುಕತೆ ಹೀಗಿದೆ…
ಅನುಪಮ್ : ನಿಮ್ಮ ಬಗ್ಗೆ ಅಂತಲ್ಲ, ಒಬ್ಬ ವ್ಯಕ್ತಿ ಕವಿಯಾಗಬೇಕು ಅಂದ್ರೆ, ಅವನು ಬೇಸರದಲ್ಲಿರೋದು, ದುಃಖದಲ್ಲಿರೋದು ಅವಶ್ಯಕವೆ?
ಗುಲ್ಜಾರ್ : ಬೇಸರ, ದುಃಖ ಬಹಳ ಹೊತ್ತಿನವರೆಗೆ ಇರುತ್ತವೆ. ಖುಶಿ ಫ್ಲಾವರ್ ಪಾಟ್ ಒಮ್ಮೆ ಜಗಮಗಿಸಿ ಮಾಯವಾಗಿ ಬಿಡುತ್ತದೆ.
ಅನುಪಮ್ : ಎಷ್ಟು ಚಂದವಾಗಿ ಹೇಳಿದಿರಿ, ಅದಕ್ಕೇ ನೀವು ಕವಿ.
ಗುಲ್ಜಾರ್ : ಬೇಸರ, ದುಃಖ ಅಗರಬತ್ತಿಯ ಥರ. ಒಮ್ಮೆ ಹೊತ್ತಿಕೊಂಡರೆ ಬಹಳಷ್ಟು ಹೊತ್ತು ನಮ್ಮನ್ನು ಆವರಿಸಿಕೊಂಡಿರುತ್ತವೆ.
ಅನುಪಮ್ : ವಾಹ್ !
ಗುಲ್ಜಾರ್ : ಬೀಡಿ ಜಲಾಯಲೇ ಜಿಗರ್ ಸೇ ಪಿಯಾ, ಜಿಗರ್ ಮಾ ಬಡೀ ಆಗ್ ಹೈ…..
ಎದೆ ಯಲ್ಲಿ ಬೆಂಕಿಯೇನೋ ಬಹಳಷ್ಟಿದೆ, ಆದರೆ ದುಃಖ ಇಲ್ಲದಿದ್ದರೆ ಇದರಿಂದ ಬೀಡಿ ಮಾತ್ರ ಹೊತ್ತಿಸಿಕೊಳ್ಳಬಹುದು. ಒಲೆ ಹೊತ್ತಿಸಲಿಕ್ಕೆ ಇನ್ನೊಬ್ಬರ ಮನೆಯ ಒಲೆಯ ಬೆಂಕಿ ಬೇಕಾಗಬಹುದು.

