ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
3 Idiot ಸಿನೇಮಾದ ಜನಪ್ರೀಯ ಡೈಲಾಗ್ “All is well” ನ ಕಾನ್ಸೆಪ್ಟ್ ನ ಹುಟ್ಟಿನ ಬಗ್ಗೆ ನಿರ್ದೇಶಕ ರಾಜಕುಮಾರ್ ಹಿರಾನಿ ಹೀಗೆ ಹೇಳುತ್ತಾರೆ……
Wayne Dyer ನನ್ನ ಅಚ್ಚುಮೆಚ್ಚಿನ ಲೇಖಕ. ಅವನ ಪ್ರಕಾರ ಎರಡು ಮನುಷ್ಯ ಭಾವನೆಗಳು ನಿರರ್ಥಕವಾದವು. ಒಂದು ಅಪರಾಧಿ ಭಾವ ( guilt) ಮತ್ತೊಂದು ಚಿಂತೆ (worry). ಅಪರಾಧಿ ಭಾವ ಹಿಂದೆ ಯಾವಾಗಲೋ ಆಗಿ ಹೋಗಿದ್ದಕ್ಕೆ ಸಂಬಂಧಿಸಿದ್ದು ಮತ್ತು ಚಿಂತೆ ಮುಂದೆ ಯಾವಾಗಲೋ ಆಗಬಹುದಾದ ಸಂಗತಿಗಾಗಿ. ಆದರೆ ಈ ಎರಡೂ ನಿರರ್ಥಕ ಭಾವಗಳು ನಿಮ್ಮ ವರ್ತಮಾನವನ್ನು ಪ್ರಭಾವಿಸುತ್ತಿವೆ. ಹಾಗಾಗಿ ಈ ಎರಡೂ ಎಮೋಷನ್ ಗಳಿಗೆ ನೀವು ಮೋಸ ಮಾಡಿದಾಗ ಮಾತ್ರ ನಿಮ್ಮ ವರ್ತಮಾನ ಸುಖವಾಗಿರಬಲ್ಲದು.
ಹಿಂದೆ ಅಂಥದ್ದೇನೂ ಆಗಬಾರದ್ದು ಆಗಿಲ್ಲ, ಮುಂದೆಯೂ ಅಂಥ ಆಗಬಾರದ್ದು ಆಗುವುದಿಲ್ಲ. ಇಷ್ಟೆಲ್ಲ ತಿಳುವಳಿಕೆಯನ್ನ ನಾನು ಸಿನೇಮಾದ ನಾಯಕನ ಬಾಯಲ್ಲಿ ಬಹಳ ಸರಳವಾಗಿ ಹೇಳಿಸಬೇಕಿತ್ತು. ಆಗ ಹುಟ್ಟಿದ್ದೆ “all is well”

