ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಪ್ರಸಿದ್ಧ stand up ಕಾಮೆಡಿಯನ್ ಬಿಸ್ವಾ, ಜಾವೇದ್ ಅಖ್ತರ್ ರನ್ನ ಸಂದರ್ಶನ ಮಾಡುತ್ತ ಒಂದು ಪ್ರಶ್ನೆ ಕೇಳುತ್ತಾರೆ…..
ಕಾಮೆಡಿಯಲ್ಲಿ ಹೆಚ್ಚುತ್ತಿರುವ ಬೈಗುಳಳ ಬಳಕೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ನೋಡಿ ಬಿಹಾರ್, ಓಡಿಸಾ, ಮೆಕ್ಸಿಕೋ ಜಗತ್ತಿನ ಎಲ್ಲ ಭಾಗಗಳಲ್ಲಿ ಎಲ್ಲಿ ಬಡತನ ಹೆಚ್ಚು ಇದೆಯೋ ಅಲ್ಲಿ ಜನ ತಮ್ಮ ಊಟ ಉಪಹಾರಗಳಲ್ಲಿ ಹೆಚ್ಚು ಚಿಲ್ಲಿ ಬಳಸುತ್ತಾರೆ, ಏಕೆಂದರೆ ಅಲ್ಲಿಯ ಆಹಾರ ಸಪ್ಪಗಾಗಿರುತ್ತದೆ. ಊಟ ರುಚಿಯಾಗಬೇಕೆಂದು ಅಲ್ಲಿಯ ಜನ ಚಿಲ್ಲಿ ಬಳಸುತ್ತಾರೆ. ಬೈಗುಳ ಏನಿದೆಯಲ್ಲಾ ಅದು chilly of language. ನಿಮಗೆ ರುಚಿಕಟ್ಟಾಗಿ ಭಾಷೆಯನ್ನು ಬಳಸುವುದು ಗೊತ್ತಿದ್ದರೆ, ನಿಮ್ಮ ಮಾತಿನಲ್ಲಿಯೇ ವಿನೋದ ಪ್ರಜ್ಞೆ ಹಾಸುಹೊಕ್ಕಾಗಿದ್ದರೆ ನಿಮಗೆ ಈ ಬೈಗುಳ ಎನ್ನುವ ಚಿಲ್ಲಿಯ ಅವಶ್ಯಕತೆ ಇಲ್ಲ. ನಿಮ್ಮ ಮಾತುಗಳೇ ಸಪ್ಪಗಾಗಿದ್ದಾಗ ನಿಮಗೆ ಬೈಗುಳಳ ಅವಶ್ಯಕತೆ ಬೀಳಬಹುದು.
ಎಷ್ಟು ಕಾವ್ಯಾತ್ಮಕವಾಗಿ ಈಗಿನ ಎಲ್ಲ stand up comedian ಗಳನ್ನು ಅಪಮಾನ ಮಾಡಿದಿರಿ ಸರ್. ನಿಮ್ಮ ಈ ಮಾತು ಕೇಳಿದಾಗ ಬೇಸರವೂ ಆಯಿತು ಆದರೆ ಸ್ವಲ್ಪ ಖುಶಿಯೂ ಆಯಿತು.

