ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಕಾರ್ಯಕ್ರಮವೊಂದರಲ್ಲಿ ಪ್ರಸಿದ್ಧ stand up comedian ಝಾಕಿರ್ ಖಾನ್ ಅವರನ್ನ, ಒಬ್ಬರು ಪ್ರಶ್ನೆ ಮಾಡುತ್ತಾರೆ…..
“ ಎಷ್ಟೂ ಅಂತ ನೀವು ಮಾಮೂಲಿ ಜೋಕ್ ಮಾಡ್ಕೊಂಡು ಇರ್ತೀರಿ. ನಿಮಗೆ ಒಳ್ಳೆ ಟ್ಯಾಲೆಂಟ್ ಇದೆ, ನಿಮ್ಮಗೆ ಒಳ್ಳೆ ಫಾಲೋವರ್ಸ್ ಇದಾರೆ, ಯಾಕೆ ನೀವು political satire ಜೋಕ್ಸ್ ಮಾಡಬಾರದು?”
“ನಾನು political satire ಜೋಕ್ಸ್ ಮಾಡಿದರೆ ನಿಮಗೆ ಇಷ್ಟ ಆಗತ್ತಾ? ನೀವು ಅದನ್ನ ಎಂಜಾಯ್ ಮಾಡ್ತೀರಾ?” ಝಾಕಿರ್ ಖಾನ್ ಪ್ರಶ್ನೆ ಮಾಡ್ತಾರೆ.
“ಹೌದು ಖಂಡಿತ ಎಂಜಾಯ್ ಮಾಡ್ತೀವಿ” ಸಭಿಕರಿಂದ ಒಕ್ಕೊರಲಿನ ಉತ್ತರ.
“ನಿಮ್ಮ enjoyment ಸಲುವಾಗಿ ನಾನು ನನ್ನ ಕರಿಯರ್ ಹಾಳು ಮಾಡ್ಕೊಳ್ಳಾ ಹಾಗಾದ್ರೆ ?”
ಝಾಕಿರ್ ಪ್ರಶ್ನೆ ಮಾಡಿದಾಗ, ಸಭೆ ನಗುವಿನಿಂದ ತುಂಬಿಕೊಳ್ಳುತ್ತದೆ.

