ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಆಂಖೇ ಭೀ ಕಮಾಲ್ ಕರತೀ ಹೈ
ಪರ್ಸನಲ್ ಸೀ ಸವಾಲ್ ಕರತೀ ಹೈ “ ಉದಾಹರಿಸುತ್ತಾ ಸಭಿಕರೊಬ್ಬರು ಕೇಳಿದ ಪ್ರಶ್ನೆ – “ಇತ್ತೀಚಿಗೆ ನಿಮ್ಮ ಲಿರಿಕ್ಸ್ ನಲ್ಲಿ ನೀವು ಇಂಗ್ಲೀಷ ವರ್ಡ್ಸ್ ಧಾರಾಳವಾಗಿ ಯೂಸ್ ಮಾಡ್ತೀರಿ, ಯಾಕೆ? “
ಅದಕ್ಕೆ ಗುಲ್ಜಾರ್ ಕೊಟ್ಟ ಉತ್ತರ –
ಏನು ಹೇಳಿದಿರಿ ನೀವು ?
“ಇತ್ತೀಚಿಗೆ ನಿಮ್ಮ ಲಿರಿಕ್ಸ್ ನಲ್ಲಿ ನೀವು ಇಂಗ್ಲೀಷ್ ವರ್ಡ್ಸ್ ಧಾರಾಳವಾಗಿ ಯೂಸ್ ಮಾಡ್ತೀರಿ, ಯಾಕೆ?” ಅಂತ ಅಲ್ವಾ ? ಇನ್ನೊಮ್ಮೆ ನಿಮ್ಮ ಪ್ರಶ್ನೆ ಗಮನಿಸಿ: “ಇತ್ತೀಚಿಗೆ ನಿಮ್ಮ ಲಿರಿಕ್ಸ್ ನಲ್ಲಿ ನೀವು ಇಂಗ್ಲೀಷ್ ವರ್ಡ್ಸ್ ಧಾರಾಳವಾಗಿ ಯೂಸ್ ಮಾಡ್ತೀರಿ, ಯಾಕೆ? “ ಅಲ್ವಾ ? ನಿಮ್ಮ ಪ್ರಶ್ನೆಯಲ್ಲೇ ನನ್ನ ಉತ್ತರ ಇದೆ. ನಾನು ಸಿನೇಮಾ ಕವಿಯಾಗಿ ಜನಗಳ ಭಾಷೆಯನ್ನ ಬಳಸಬೇಕಲ್ವೆ? ನಾನು ನಿಮ್ಮ ಭಾಷೆಯಲ್ಲೇ ಹಾಡು ಬರೆಯಬೇಕಲ್ವಾ ? ನಿಮ್ಮ ಭಾಷೆಯಲ್ಲಿ ತಾನೇ ನಾನು ಈ ಹಾಡು ಬರೆದಿರೋದು?

