ಆಯ್ಕೆಗಳಿವೆ, ಕ್ರೂರವಾಗಿವೆ… Coffeehouse ಕತೆಗಳು

ಆಧುನಿಕ ತತ್ವಶಾಸ್ತ್ರಜ್ಞ ಝಿಝೆಕ್, ಆಧುನಿಕೋತ್ತರ ಕಾಲದಲ್ಲಿ ಇರುವ ಮುಕ್ತ ಆಯ್ಕೆಗಳ ಬಗ್ಗೆ ಮಾತನಾಡುತ್ತ, ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ

ಕಲ್ಪನೆ ಮಾಡಿಕೊಳ್ಳಿ ನೀವು 8 ವರ್ಷದ ಬಾಲಕ ಅಥವಾ ಬಾಲಕಿ. ಒಂದು ರವಿವಾರದ ಮಧ್ಯಾಹ್ನ ನಿಮ್ಮ ಅಪ್ಪ, ನೀವು ನಿಮ್ಮ ಅಜ್ಜಿಯ ಹೋಗಿ ಬರಬೇಕು ಅಂತ ಹೇಳ್ತಾನೆ.

ಅಕಸ್ಮಾತ್ ನಿಮ್ಮ ಅಪ್ಪ ಹಳೆಯ ಕಾಲದ ಅಥಾರಿಟೇರಿಯನ್ ಅಪ್ಪ ಆಗಿದ್ರೆ, “ ನಿನ್ನ ಇಚ್ಛೆ ಏನಿದೆಯೋ ನನಗೆ ಗೊತ್ತಿಲ್ಲ, ನಿನ್ನ ಡ್ಯೂಟಿ ನೀನು ಮಾಡು, ಮುಚ್ಕೊಂಡು ಅಜ್ಜಿ ಮನೆಗೆ ಹೋಗು, ಅಲ್ಲಿ ಎಲ್ಲರೊಂದಿಗೆ ಚೆನ್ನಾಗಿ ಬಿಹೇವ್ ಮಾಡು” ಅಂತ ಆರ್ಡರ್ ಮಾಡುತ್ತಾನೆ. ಇದು ಪರ್ಫೆಕ್ಟ್, ನನಗೆ ಇದರಲ್ಲಿ ಏನೂ ತೊಂದರೆ ಕಾಣಿಸೋದಿಲ್ಲ. ಇಲ್ಲಿ ನಿಮಗೆ, ನಿಮ್ಮ inner freedom ಉಳಿಸಿಕೊಳ್ಳುವ, ನಿಮ್ಮ ಅಪ್ಪನ ಮೇಲೆ ಸಿಟ್ಟಾಗುವ ಅವಕಾಶವಿದೆ. ಇದು ನಿಮ್ಮ ಲಾಂಗ್ ಟರ್ಮ್ ಫ್ರೀಡಂ ಗೆ ಸಹಾಯಕಾರಿ.

ಅಕಸ್ಮಾತ್ ನಿಮ್ಮ ಅಪ್ಪ post modern ಧಾರಾಳಿ ಅಪ್ಪ ಆಗಿದ್ರೆ ಅವ ಹೇಗೆ ಇದನ್ನ ನಿಭಾಯಿಸಬಹುದು? ಅವ ನಿಮಗೆ ಆರ್ಡರ್ ಮಾಡಲು ಹೋಗುವುದಿಲ್ಲ, ಅವ ನಿಮಗೆ ಹೀಗೆ ಹೇಳಬಹುದು, “ನಿನಗೆ ಮನಸ್ಸಿದ್ದರೆ ಮಾತ್ರ ನೀನು ಅಜ್ಜಿಯ ಮನೆಗೆ ಹೋಗು. ಆದರೆ ನಿನಗೆ ನೆನಪಿರಲಿ ಅಜ್ಜಿ ನಿನ್ನ ಎಷ್ಟು ಪ್ರೀತಿಸುತ್ತಾಳೆ ಎನ್ನುವುದು”.

ಮಗು ಅಷ್ಟು ಇಡಿಯಟ್ ಅಲ್ಲ. ಈ ಆರ್ಡರ್ ನ ಅರ್ಥ ಏನು ಎನ್ನುವುದು ಅದಕ್ಕೆ ಚೆನ್ನಾಗಿ ಗೊತ್ತು. ಅಜ್ಜಿಯ ಮನೆಗೆ ಹೋಗುವ, ಹೋಗದಿರುವ ಆಯ್ಕೆ ನಿನಗೆ ಇದೆ ಹೇಳುತ್ತಲೇ, ಆಯ್ಕೆಗಳನ್ನ ಕ್ರೂರಗೊಳಿಸಲಾಗುತ್ತದೆ, ಆರ್ಡರ್ ನ ಇನ್ನಷ್ಟು ಕಠೋರ ಮಾಡಲಾಗುತ್ತದೆ. ಈ ಆರ್ಡರ್ ನ ಅರ್ಥ ಏನೆಂದರೆ, ನೀನು ಅಜ್ಜಿಯ ಮನೆಗೆ ಹೋಗಲೇಬೇಕು ಮತ್ತು ಮನಸಾರೆ ಹೋಗಬೇಕು ( ನಿನ್ನ ಇಚ್ಛೆ ಅದೇನೇ ಇದ್ದರೂ ) ಎನ್ನುವುದು.

ಈ ಪೋಸ್ಟ್ ಮಾಡರ್ನ್ ಕಾಲದಲ್ಲಿ ನಮಗೆ ಮುಕ್ತ ಆಯ್ಕೆಗಳಿವೆ ಎಂದು ಹೇಳುತ್ತಲೇ, ಆ ಆಯ್ಕೆಗಳನ್ನು ಸಾಧ್ಯವಾದಷ್ಟು ಕ್ರೂರ ಗೊಳಿಸಲಾಗುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.