ಪೆಪ್ಸಿ ಕಂಪನಿಯ CEO ಇಂದಿರಾ ನೂಯಿ, ತಮ್ಮ ಮತ್ತು ತಮ್ಮಂಥ ಇತರ working woman ಗಳ ಸಮಸ್ಯೆಯ ಬಗ್ಗೆ ಮಾತನಾಡುತ್ತ ಹೀಗೆ ಹೇಳುತ್ತಾರೆ… । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ನಮ್ಮ ಅಂದರೆ working woman ಗಳ ಬಯೊಲೊಜಿಕಲ್ ಕ್ಲಾಕ್ ಮತ್ತು ಕರಿಯರ್ ಕ್ಲಾಕ್ ನಡುವೆ ದೊಡ್ಡ ಬಿಕ್ಕಟ್ಟು ಇದೆ. ಸಂಪೂರ್ಣ conflict.
ನಮಗೆ ಮಕ್ಕಳು ಬೇಕನಿಸುವಾಗ ನಮಗೆ ನಮ್ಮ ಕರಿಯರ್ ಕಟ್ಟಿಕೊಳ್ಳುವುದೂ ಮಹತ್ವದ್ದಾಗಿರುತ್ತದೆ.
ನಾವು ಮಿಡಲ್ ಮ್ಯಾನೇಜಮೆಂಟ್ ತಲುಪಿ ಕರಿಯರ್ ನಲ್ಲಿ ಒಂದು ನೆಲೆ ಕಂಡುಕೊಳ್ಳುತ್ತಿರುವಾಗ, ಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳಿಗೆ ನಮ್ಮ ಅತ್ಯಂತ ಹೆಚ್ಚಿನ ಅವಶ್ಯಕತೆ ಇರುತ್ತದೆ. ಇದೇ ಸಮಯಕ್ಕೆ ನಮ್ಮ ಗಂಡಂದಿರೂ ತಮ್ಮ ಎರಡನೇಯ ಹರೆಯಕ್ಕೆ ಮರಳುತ್ತಿರುತ್ತಾರೆ, ಅವರಿಗೂ ನಮ್ಮ ಅವಶ್ಯಕತೆ ಇರುತ್ತದೆ. ( ನಗು )
ನಾವು ನಮ್ಮ ಕರಿಯರ್ ನಲ್ಲಿ ಮುಂದೆ ಸಾಗುತ್ತಿದ್ದಾಗಲೇ, ನಮ್ಮ ತಾಯಿ ತಂದೆಗೆ, ಅತ್ತೆ ಮಾವಂದಿರಿಗೆ ವಯಸ್ಸಾಗುತ್ತಿದೆ. ಈಗ ಅವರಿಗೆ ನಮ್ಮ ಅವಶ್ಯಕತೆ ಹೆಚ್ಚು.
So we are screwed, We can not have it all
ಮನೆಯಲ್ಲಿದ್ದುಕೊಂಡು ತಾಯ್ತನದ ಜವಾಬ್ದಾರಿ ಹೊರುವುದು full time job.
ಒಂದು ಕಂಪನಿಯ CEO ಆಗಿದ್ದುಕೊಂಡು ತಾಯ್ತನದ ಜವಾಬ್ದಾರಿಯನ್ನೂ ನೋಡಿಕೊಳ್ಳುವುದು, ಒಂದರೊಳಗೆ ಸೇರಿಕೊಂಡ three full time job.
ಈ ಎಲ್ಲಕ್ಕೂ ನ್ಯಾಯ ಸಲ್ಲಿಸುವುದು ಹೇಗೆ?
ಈ ಎಲ್ಲದರ ನಡುವೆ ತುಂಬ ಘಾಸಿಗೊಳ್ಳುವುದು ನಮ್ಮ ಸಂಗಾತಿ. ಬೇರೆ ಪ್ರಶ್ನೆಯೇ ಇಲ್ಲ.
ನನ್ನ ಗಂಡ ರಾಜ್ ನ ಪ್ರಕಾರ ನನ್ನ ಪ್ರಯಾರಿಟಿ ಲಿಸ್ಟನಲ್ಲಿ Pepsi Co , Pepsi Co , Pepsi Co , ನಮ್ಮ ಎರಡು ಮಕ್ಕಳು, ನನ್ನ ಅಮ್ಮ ಮತ್ತು ಕೊನೆಯಲ್ಲಿ ಅವನು.
ಆಗ ನಾನು ಅವನಿಗೆ ಹೇಳುತ್ತೇನೆ, ಇದನ್ನ ನೀನು ಇನ್ನೊಂದು ರೀತಿಯಲ್ಲಿ ನೋಡಬಹುದು. ನನ್ನ ಲಿಸ್ಟ್ ನಲ್ಲಿ ನೀನು ಕೊನೆಪಕ್ಷ ಇದ್ದಿಯಲ್ಲಾ ಅದಕ್ಕಾಗಿಯಾದರೂ ನೀನು ಖುಶಿ ಪಡಬೇಕು. ( ನಗು )

