ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
2014 ರ ಸಿನೇಮಾ Happy New Year ದ ಶೂಟಿಂಗ್ ಸಮಯದಲ್ಲಿ, ನಟರಾದ ಅಭಿಷೇಕ್ ಬಚ್ಚನ್ ಮತ್ತು ವಿವಾನ್ ಶಾ, ನಿರ್ದೇಶಕಿ ಫರಾಹ್ ಖಾನ್ ರನ್ನ ಸಿಕ್ಕಾಪಟ್ಟೆ ಗೋಳು ಹೊಯ್ಕೊಕೊಳ್ತಿರ್ತಾರೆ. ಇವರ ಕಾಟ ತಡಿಲಾರ್ದೆ ಫರಾಹ್ ಇವರನ್ನು ಕರೆದು ಬುದ್ಧಿ ಹೇಳುವಂತೆ ಸಿನೇಮಾದ ನಿರ್ಮಾಪಕ ಶಾಹರುಖ್ ಖಾನ್ ಅವರನ್ನ ಕೇಳಿಕೊಳ್ತಾರೆ.
ಈ ನಟರಿಗೆ ಬುದ್ಧಿ ಹೇಳಬೇಕೆಂದು ಸಿದ್ಧರಾದ ಶಾಹರುಖ್, ಒಮ್ಮೆ ಯೋಚನೆ ಮಾಡ್ತಾರೆ. ಅಭಿಷೇಕ್ ಬಚ್ಚನ್ ನ ಅಪ್ಪ ಅಮಿತಾಭ ಬಚ್ಚನ್, ವಿವಾನ್ ಶಾ ನ ಅಪ್ಪ ನಸಿರುದ್ದೀನ್ ಶಾ. ಇಂಥ ದೊಡ್ಡ ಮನುಷ್ಯರೆ ತಮ್ಮ ಮಕ್ಕಳಿಗೆ ಬುದ್ಧಿ ಹೇಳಲಿಕ್ಕೆ ವಿಫಲರಾದ್ಮೇಲೆ ಇವರು ನನ್ನ ಮಾತು ಕೇಳೋದು ಸಾಧ್ಯವಿಲ್ಲದ ಮಾತು ಅಂತ ಶಾಹರುಖ್ ಖಾನ್ ಸುಮ್ಮನಾಗಿಬಿಡ್ತಾರೆ.

