ಒಂದು ಸಭೆಯಲ್ಲಿ ಜಾವೇದ್ ಸಾಬ್ ಹೆಣ್ಣುಮಕ್ಕಳನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ … । ಸಂಗ್ರಹ – ನಿರೂಪಣೆ : ಚಿದಂಬರ ನರೇಂದ್ರ
ನಿಮಗೆ ತಲೆಯಲ್ಲಿ ಬುದ್ಧಿ ಇದೆಯಾ ಇಲ್ವಾ ? ನೀವು ಗಂಡಸರಿಗಿಂತ ಹೆಚ್ಚು ಧರ್ಮಗಳನ್ನ ಆಚರಿಸ್ತೀರಿ. ಜಗತ್ತಿನ ಪ್ರತಿಯೊಂದು ಧರ್ಮ anti- woman ಆಗಿದೆ. ಅದು ಹೆಂಗಸರನ್ನ ದ್ವಿತಿಯ ದರ್ಜೆಯವರಂತೆ ನೋಡುತ್ತದೆ.
ಚೈನಾದಲ್ಲಿ ಒಂದು ಡಿಶ್ ಪ್ರಿಪೇರ್ ಮಾಡ್ತಾರೆ. ಮೊಟ್ಟೆಯೊಡೆದು ಕೋಳಿಮರಿ ಹೊರಬಂದದ್ದೇ ತಡ ಅದನ್ನ ಒಂದು ಪುಟ್ಟ ಕಟ್ಟಿಗೆಯ ಬಾಕ್ಸ್ ಲ್ಲಿ ಕೂಡಿ ಹಾಕಿ ಆಹಾರ ಕೊಡಲಾಗುತ್ತದೆ. ಕೋಳಿ ಬೆಳೆದಂತೆಲ್ಲ ಬಾಕ್ಸ್ ನ ಕೂಡ ಬದಲಾಯಿಸುತ್ತ ಹೋಗುತ್ತಾರೆ. ಆದರೆ ಕೋಳಿಗೆ ನಡೆದಾಡುವ ಅವಕಾಶವನ್ನೇ ಮಾಡಿಕೊಡಲಾಗುವುದಿಲ್ಲ. ಕೊನೆಗೆ ಕೋಳಿ ಬೆಳೆದು ಪೂರ್ತಿ ದೊಡ್ಡದಾದಾಗ ಅದನ್ನ ಕತ್ತರಿಸಿ ವಿಶೇಷ ಡಿಶ್ ಪ್ರಿಪೇರ್ ಮಾಡಲಾಗುತ್ತದೆ. ಅದರಲ್ಲಿ ಒಂದು ಮೂಳೆಯೂ ಇರುವುದಿಲ್ಲ. ನಾವು ನಮ್ಮ ಹೆಣ್ಣು ಮಕ್ಕಳನ್ನು ಬೆಳೆಸುವುದು ಹೀಗೆ. ನಾವು ಹೆಣ್ಣುಮಕ್ಕಳ ಮೂಳೆ ಡೆವಲಪ್ ಆಗಲು ಅವಕಾಶವನ್ನೇ ಮಾಡಿಕೊಡುವುದಿಲ್ಲ.
ಮದುವೆ ಆದಾಗ… ಮಗಳೇ ಈಗ ನೀನು ನಿನ್ನ ಗಂಡನ ಮನೆಗೆ ಸೇರಿದವಳು ಅಂತೀವಿ …… ಯಾಕೆ ಆಕೆ ಬೇರೆ ಮನೆಯವಳು? ಸ್ವಲ್ಪ ಕೂಡ ತೊಂದರೆ ಆದರೂ ವಾಪಸ್ ಬಾ……ಅಂತ ಯಾಕೆ ಹೇಳೋದಿಲ್ಲ ?
ಪ್ರತೀ ಧರ್ಮದಲ್ಲೂ ಹೆಣ್ಣನ್ನು ಸಹಾಯಕ ಪಾತ್ರದಲ್ಲಿ ನೋಡಲಾಗುತ್ತದೆ, ಇದನ್ನೇ ನೀವು ನಿಮ್ಮ ಮಕ್ಕಳಿಗೆ ಹೇಳಿಕೊಡ್ತಾ ಇದೀರಾ ? ಮತ್ತೆ ನಮಗೆ ಸಮಾನತೆ ಬೇಕು ಅಂತ ಹೇಳ್ತೀರಾ, ಎಲ್ಲಿಂದ ಬರತ್ತೆ ಸಮಾನತೆ ?

