ಜಗತ್ತಿನ ಅತ್ಯುತ್ತಮ ಕಲಾವಿದೆಯರಲ್ಲಿ ಒಬ್ಬರಾದ ಮೇರಿಲ್ ಸ್ಟ್ರೀಪ್, ಆಗಿನ ಅಮೇರಿಕದ ಅಧ್ಯಕ್ಷ ಟ್ರಂಪ್ ನನ್ನು ಭರ್ತಿ ಸಭೆಯೊಂದರಲ್ಲಿ ತರಾಟೆಗೆ ತೆಗೆದುಕೊಂಡಿದ್ದು ಹೀಗೆ… | ಚಿದಂಬರ ನರೇಂದ್ರ
ಅಗೌರವ, ಅಗೌರವವನ್ನು ಆಹ್ವಾನಿಸುತ್ತದೆ.
ಹಿಂಸೆ, ಹಿಂಸೆಗೆ ಪ್ರಚೋದನೆ ನೀಡುತ್ತದೆ
ಯಾವಾಗ ಶಕ್ತಿಶಾಲಿಗಳು ತಮ್ಮ ಅಧಿಕಾರವನ್ನು ಇತರರನ್ನು ಪೀಡಿಸಲು ಬಳಸುತ್ತಾರೋ ಆಗ, ನಾವೆಲ್ಲರೂ ನಮ್ಮ ಘನತೆಯನ್ನು ಕಳೆದುಕೊಳ್ಳುತ್ತೇವೆ.
ಅದು ಅಂಥದೊಂದು ಕ್ಷಣವಾಗಿತ್ತು. ನಮ್ಮ ದೇಶದ ಅತ್ಯಂತ ಗೌರವಯುತ ಸ್ಥಾನದಲ್ಲಿ ಕುಳಿತುಕೊಳ್ಳಲು ನಾವು ಯಾರನ್ನ ಆಯ್ಕೆ ಮಾಡಿದ್ದೇವೆಯೋ ಆ ವ್ಯಕ್ತಿ, ತನಗಿಂತ ಅಧಿಕಾರ, ಪ್ರಿವಿಲೇಜ್ ಮತ್ತು ಶಕ್ತಿಯಲ್ಲಿ ತುಂಬ ಹಿಂದೆ ಇರುವ, ಯಾರಿಗೆ ತನ್ನ ವಿರುದ್ಧ ಫೈಟ್ ಬ್ಯಾಕ್ ಮಾಡುವ ಶಕ್ತಿಯಿಲ್ಲವೋ ಅಂಥ ಒಬ್ಬ disabled reporter ನ ಅಣಕಿಸಿದ್ದು.
ಇದನ್ನು ನೋಡಿ ನನ್ನ ಹೃದಯ ಒಡೆದು ಚೂರು ಚೂರಾಯಿತು. ನನಗೆ ಇನ್ನೂ ಆ ದೃಶ್ಯವನ್ನು ಮರೆಯಲಾಗುತ್ತಿಲ್ಲ ಏಕೆಂದರೆ ಅದೇನೂ ಸಿನೇಮಾದ ದೃಶ್ಯವಲ್ಲ, ಅದು ವಾಸ್ತವಿಕ ಬದುಕಿನ ಘಟನೆ.
ಒಬ್ಬ ಅಧಿಕಾರದಲ್ಲಿರುವ ವ್ಯಕ್ತಿ ಹೀಗೆ ಮಾಡಿದಾಗ, ಎಲ್ಲರಿಗೂ ಹೀಗೆ ಅಮಾನವೀಯವಾಗಿ ನಡೆದುಕೊಳ್ಳುವ ಅನುಮತಿ ಸಿಕ್ಕ ಹಾಗುತ್ತದೆ. ಇಂಥದನ್ನ ನಾವೆಲ್ಲರೂ ಎಲ್ಲ ವೇದಿಕೆಗಳಲ್ಲಿ ಕಟುವಾಗಿ ಖಂಡಿಸಬೇಕು.

