ನಮ್ಮನ್ನು ತಿದ್ದುವವರು ಜೊತೆಗಿರಬೇಕು: Coffeehouse ಕತೆಗಳು

ಸಚಿನ್ ತೆಂಡೂಲ್ಕರ್ ಕಲಿತ ಪಾಠ, ಅವರದೇ ಮಾತುಗಳಲ್ಲಿ… । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ

ಯಾವ ಕಾರಣವೋ ಏನೋ ಲಕ್ಷ್ಮಣ ಮೂರನೇ ರನ್ ರಿಫ್ಯೂಸ್ ಮಾಡಿದ. ಆದರೆ ಅಷ್ಟೊತ್ತಿಗಾಗಲೇ ನಾನು ಅರ್ಧ ಪಿಚ್ ವರೆಗೂ ಬಂದುಬಿಟ್ಟಿದ್ದೆ. ನಾನು ತಿರುಗಿ ವಾಪಸ್ ಹೋಗುವ ಹಾಗಿರಲಿಲ್ಲ. ಬಹಳ ಕೆಟ್ಟದಾಗಿ ರನ್ ಔಟ್ ಆದೆ. ನನಗೆ ಕೆಟ್ಟ ಸಿಟ್ಟು ಬಂತು. ನಾನು ಅಲ್ಲಿಯೇ ನನ್ನ ಅತೃಪ್ತಿಯನ್ನ ಹೊರಗೆ ಹಾಕಿದೆ. ನಮ್ಮ ಪಾರ್ಟನರ್ ಶಿಪ್ ಚೆನ್ನಾಗಿ ಹೋಗ್ತಾ ಇತ್ತು, ಇಂಡಿಯಾಕ್ಕೆ ರನ್ ಗಳ ಅವಶ್ಯಕತೆ ಇತ್ತು. ಅಂಥ ಸಮಯದಲ್ಲಿ ಲಕ್ಷ್ಮಣನ ರಾಂಗ್ ಕಾಲ್ ನನ್ನನ್ನು ತುಂಬಾ ಸಿಟ್ಟಿಗೆಬ್ಬಿಸಿತ್ತು.

ಅಂದು ರಾತ್ರಿ ನಾನು ವಾಪಸ್ ಮನೆಗೆ ಹೋದಾಗ ಅಣ್ಣ ಅಜೀತ್ ನನ್ನನ್ನು ಹಾಲ್ ನಲ್ಲಿ ಎದುರು ಕೂರಿಸಿಕೊಂಡು ಹೇಳಿದ. ಫೀಲ್ಡ್ ಲ್ಲಿ ನಿನ್ನ ಬಿಹೇವಿಯರ್ ತುಂಬ ಕೆಟ್ಟದಾಗಿತ್ತು. ನೀನೇನೋ ಔಟ್ ಆಗಿಬಿಟ್ಟೆ, ಆದರೆ ಲಕ್ಷ್ಮಣ ಇನ್ನೂ ಆಡುತ್ತಿದ್ದಾನೆ, ಅವನ ಮೇಲೆ ನಿನ್ನ ಬಿಹೇವಿಯರ್ ಎಂಥ ಕೆಟ್ಚ ಪರಿಣಾಮ ಬೀರಬಹುದು ಯೋಚನೆ ಮಾಡಿದ್ದೀಯ ಅಂತ ಅಜೀತ್ ನನಗೆ ಬೈದು ಬುದ್ಧಿ ಹೇಳಿದ. ಇದು ನನಗೆ ದೊಡ್ಡ ಪಾಠವಾಯಿತು. ನಮ್ಮನ್ನು ತಿದ್ದುವವರು ಯಾರಾದರೂ ಇರಬೇಕು, ಅದು ಮನೆಯಲ್ಲಿ ಅಣ್ಣ, ಹೆಂಡತಿ ಹೊರಗೆ ಕೋಚ್, ಗೆಳೆಯರು. ಹೀಗೆ ನಮ್ಮನ್ನು ತಿದ್ದುವವರನ್ನ ಯಾವಾಗಲೂ ನಾವು ನಮ್ಮ ಜೊತೆ ಇರುವಂತೆ ನೋಡಿಕೊಳ್ಳಬೇಕು.

ಆದರೂ ನನ್ನ ಅಭಿಮಾನಕ್ಕೆ ಅಡ್ಡಿಯಾಗದಂತೆ ನಾನು ಮರುದಿನ ಲಕ್ಷ್ಮಣ್ ಗೆ ಹೇಳಿದೆ, ನೋಡು ಲಚ್ಚಿ ನಿನ್ನಿಂದಾಗಿ ನಾನು ಅಣ್ಣನ ಹತ್ರ ಬೈಸ್ಕೋಬೇಕಾಯ್ತು. ಇನ್ನು ಮುಂದೆ ಯಾವತ್ತೂ ರಾಂಗ್ ಕಾಲ್ ಮಾಡಬೇಡ ಅಂತ.


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.