ನಿಮ್ಮ ನೋಟದಲ್ಲಿ ಗೌರವವಿದೆಯಾದರೆ, ನಿಮ್ಮ ಉತ್ಸಾಹದಲ್ಲಿ ಸೌಂದರ್ಯವಿದೆಯಾದರೆ, ಘನತೆಯಿದಾದರೆ ಆಗ ಎಲ್ಲವೂ ಸುಂದರ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾರೊಬ್ಬರೂ ಇನ್ನೊಬ್ಬರ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ. ಹಾಗೆ ನೋಡುವುದನ್ನ ತಪ್ಪು, ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇನ್ನೊಬ್ಬರ ಸುಂದರ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಬೇಕೆಂದು ನೀವು ಎಷ್ಟೇ ಬಯಸಿದರೂ, ಹಾಗೆ ಮೂರು ಸೆಕೆಂಡುಗಳಿಗಿಂತ ಹೆಚ್ಚು ನೋಡುವುದನ್ನ ಆಕ್ರಮಣಕಾರಿ ವರ್ತನೆ ಎಂದು ತಿಳಿಯಲಾಗುತ್ತದೆ.
ಬಹುಶಃ ಈ ಎಲ್ಲಕ್ಕೂ ಕಾರಣವಿರಬೇಕು : ಇನ್ನೊಬ್ಬರ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುವುದು ಹೇಗೆಂದು ವಿಮಗೆ ಗೊತ್ತಿಲ್ಲ. ಹಾಗೆ ಘನತೆಯಿಂದ ನೋಡುವುದು ಹೇಗೆನ್ನುವುಗರ ಬಗ್ಗೆ ನಿಮಗೆ ತಿಳುವಳಿಕೆಯಿಲ್ಲ. ಬಹುಶಃ ನಿಮ್ಮ ನೋಟದಲ್ಲಿ ಕುರೂಪಿತನ ತುಂಬಿಕೊಂಡಿದೆ. ಏಕೆಂದರೆ ನೀವು ನಿಮ್ಮ ನೋಟದಲ್ಲಿ, ನಿಮ್ಮೊಳಗೆ ಹತ್ತಿಕ್ತಿಕೊಂಡಿರುವ ಲೈಂಗಿಕ ಭಾವನೆಗಳನ್ನು ತುಂಬಿಕೊಂಡಿರುವಿರಿ. ನಿಮ್ಮ ನೋಟ pornographic ಆಗಿರಬಹುದು.
ನಿಮ್ಮ ಕಲ್ಪನೆಯ ಆಳದಲ್ಲಿ, ನೀವು ನೋಡುತ್ತಿರುವ ಹೆಂಗಸನ್ನ ನೀವು ಬೆತ್ತಲಾಗಿಸುತ್ತಿದ್ದರೆ, ಖಂಡಿತ ಅದು ಆ ಹೆಂಗಸಿನ ಅನುಭವಕ್ಕೆ ಬರುತ್ತದೆ ಮತ್ತು ಸಹಜವಾಗಿ ಆಕೆಗೆ ಇದು ಮುಜುಗರವನ್ನುಂಟು ಮಾಡುತ್ತದೆ ಮತ್ತು ಆಕೆ ಇಂಥ ನೋಟದಿಂದ ಅಸಹ್ಯವನ್ನು ಅನುಭವಿಸುತ್ತ ಸಿಟ್ಚಿಗೇಳುತ್ತಾಳೆ. ನಿಮ್ಮ ಕಲ್ಪನೆಯಲ್ಲೂ ಅವಳನ್ನು ಬೆತ್ತಲಾಗಿಸುವ ಹಕ್ಕನ್ನು ನಿಮಗೆ ಯಾರು ಕೊಟ್ಚರು? ನಿಮ್ಮ ಇಂಥ ನೋಟವೇ ಕುರೂಪಿತನದಿಂದ ತುಂಬಿಕೊಂಡಿದೆ ; ನಿಮ್ಮ ನೋಟ ಅವಳ ಅಸ್ತಿತ್ವವನ್ನು penetrate ಮಾಡುತ್ತಿರುವ ಹಾಗಿದೆ, ನಿಮ್ಮ ನೋಟವನ್ನು ನೀವು ಲೈಂಗಿಕ penetration ಗೆ ಪರ್ಯಾಯದಂತೆ ಬಳಸಿಕೊಳ್ಳುತ್ತಿದ್ದೀರ. ನೀವು ಅವಳನ್ನು ಭೋಗದ ವಸ್ತುವಿನ ಮಟ್ಟಕ್ಕೆ ಇಳಿಸುತ್ತಿದ್ದೀರ, ಇದನ್ನು ಯಾರೂ ಇಷ್ಟಪಡುವುದಿಲ್ಲ. ನಿಮ್ಮ ನೋಟದಲ್ಲಿ ಗೌರವ, ಘನತೆಯಿಲ್ಲ.
ನಿಮ್ಮ ನೋಟದಲ್ಲಿ ಗೌರವವಿದೆಯಾದರೆ, ನಿಮ್ಮ ಉತ್ಸಾಹದಲ್ಲಿ ಸೌಂದರ್ಯವಿದೆಯಾದರೆ, ಘನತೆಯಿದಾದರೆ ಆಗ ಎಲ್ಲವೂ ಸುಂದರ.
ಒಂದು ದಿನ ಸುಝೂಕಿ ರೋಶಿ ಅವರ ಶಿಷ್ಯೆ, ಅವರ ಹತ್ತಿರ ಬಂದು ತನ್ನ ಮನಸ್ಸಿನ ತಳಮಳವನ್ನು ನಿವೇದಿಸಿಕೊಂಡಳು.
“ ಮಾಸ್ಟರ್, ಯಾಕೋ ಗೊತ್ತಿಲ್ಲ ನಿಮ್ಮ ಮೇಲೆ ನನಗೆ ವಿಪರೀತ ಪ್ರೇಮ ಉಕ್ಕಿ ಬರುತ್ತಿದೆ. ಕೂತಲ್ಲಿ, ನಿಂತಲ್ಲಿ ಸದಾ ನಿಮ್ಮ ಯೋಚನೆ. ಇದು ತಪ್ಪೋ ಸರಿಯೋ ಗೊತ್ತಿಲ್ಲ, ತುಂಬ ಗೊಂದಲವಾಗುತ್ತಿದೆ. “
ಮಾಸ್ಟರ್ ರೋಶಿ ಉತ್ತರಿಸಿದರು, “ ಹುಡುಗಿ, ಇದು ತಪ್ಪು ಒಪ್ಪಿನ ಪ್ರಶ್ನೆ ಅಲ್ಲ. ನಿನ್ನ ಗುರುವಿನ ಬಗ್ಗೆ ಯಾವ ಭಾವನೆ ಹೊಂದಲೂ ನೀನು ಸ್ವತಂತ್ರಳು. ಭಾವನೆಗಳನ್ನು ಹತ್ತಿಕ್ಕಬೇಡ, ಮುಕ್ತವಾಗಿ ವ್ಯಕ್ತಪಡಿಸು “
ಹುಡುಗಿ ಆಶ್ಚರ್ಯಚಕಿತಳಾಗಿ ಮಾಸ್ಟರ್ ರೋಶಿಯನ್ನೇ ನೋಡತೊಡಗಿದಳು “
ಮಾಸ್ಟರ್ ರೋಶಿ ಅವಳ ತಲೆ ಮೇಲೆ ಕೈಯಿಟ್ಟು ಹೇಳಿದರು.
~ öshö / The Spiritually Incorrect Buddha

