ಕವಿ ಜಾವೇದ್ ಅಖ್ತರ್ ಸೆಕ್ಯುಲರ್ ಸಂಪ್ರದಾಯಗಳ ಆಚರಣೆಯನ್ನು ಒತ್ತಿ ಹೇಳಿದ್ದು ಹೀಗೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ನಾನು ಯಾವಾಗಲೂ ಆದಾಬ್ ಶಬ್ದ ಬಳಸುತ್ತೇನೆ. ಲಖನೌ ಲ್ಲಿ ಆದಾಬ್ ಎನ್ನುತ್ತ ಜನರು ಪರಸ್ಪರ ಗ್ರೀಟ್ ಮಾಡುತ್ತಿದ್ದರು. ಯಾವ ಮುಸಲ್ಮಾನರೂ ಸಲಾಂ ವಾಲೇಕುಂ ಹೇಳುತ್ತಿರಲಿಲ್ಲ ಅಲ್ಲಿ. ಹಾಗಾದರೆ ಆದಾಬ್ ಮತ್ತು ಸಲಾಂ ವಾಲೇಕುಂ ಗಳ ನಡುವಿನ ವ್ಯತ್ಯಾಸ ಏನು?
ಸಲಾಂ ವಾಲೇಕುಂ ಒಂದು ಧಾರ್ಮಿಕ ಗ್ರೀಟಿಂಗ್ . ಹಾಗೆಂದರೆ ನಿಮ್ಮ ಮೇಲೆ ಅಲ್ಲಾಹ್ ನ ದಯೆ ಇರಲಿ ಅಂತ. ನನಗೆ ಯಾರಾದರೂ ಸಲಾಂ ವಾಲೇಕುಂ ಹೇಳಿದರೆ, ನಾನು ವಾಲೆಕುಂ ಸಲಾಂ ( ನಿಮ್ಮ ಮೇಲೂ ಅಲ್ಲಾಹನ ಕೃಪೆಯಿರಲಿ) ಎಂದು ಉತ್ತರಿಸುತ್ತಿದ್ದೆ ನಿಜ ಆದರೆ ಆದಾಬ್ ಒಂದು ಸೆಕ್ಯುಲರ್ ಗ್ರೀಟಿಂಗ್. ಆದಾಬ್ ಎಂದರೆ ನಾನು ನಿನ್ನ ಗೌರವಿಸುತ್ತೇನೆ, I respect you ಅಂತ.
ಲಖನೌ ನ ಎಲ್ಲ ವಿದ್ಯಾವಂತ ಹಿಂದೂ ಮುಸ್ಲೀಂ ರು ಆದಾಬ್ ಬಳಸುತ್ತಿದ್ದರು. ಆದಾಬ್ is a non religious secular greeting. ಇದು ಇನ್ನೂ ನನಗೆ ನೆನಪಿದೆ. ಲಖನೌ ನ ಜನ ಯಾವತ್ತೂ ಜೈಶ್ರೀರಾಂ ಹೇಳುತ್ತಿರಲಿಲ್ಲ, ಅವರು ಯಾವಾಗಲೂ ಹೇಳುತ್ತಿದ್ದದ್ದು ಜೈ ಸಿಯಾ ರಾಂ ಎಂದೇ.

