ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
“ನಿಮ್ಮ ಗಂಡ ಜಾವೇದ್ ಎಂಥ ದೊಡ್ಡ ಪ್ರೇಮ ಕವಿ, ನಿಮ್ಮ ಮೇಲೆ ಅವರು ನೂರಾರು ಶಾಯರಿ ಬರೆದಿರಬೇಕಲ್ವಾ?” ಹುಡುಗಿಯರ ಗುಂಪೊಂದು ಶಬಾನಾ ಅವರನ್ನ ಪ್ರಶ್ನೆ ಮಾಡುತ್ತದೆ.
“ ಜಾವೇದ್ ನನ್ನ ಮೇಲೆ ಒಂದೂ ಲವ್ ಶಾಯರಿ ಬರೆದಿಲ್ಲ. ಜಾವೇದ್ ರ ಒಳಗೆ ಒಂದೇ ಒಂದು ರೋಮ್ಯಾಂಟಿಕ್ ಮೂಳೆ ಕೂಡ ಇಲ್ಲ” ಶಬಾನಾ ಉತ್ತರಿಸುತ್ತಾರೆ.
“ಯಾಕೆ ಹೀಗೆ ಜಾವೇದ್ ಸಾಬ್?” ಹುಡುಗಿಯರು ಜಾವೇದ್ ಅವರನ್ನ ಪ್ರಶ್ನೆ ಮಾಡಿದಾಗ, ಜಾವೇದ್ ಉತ್ತರಿಸುತ್ತಾರೆ ….
“ಸರ್ಕಸ್ ನಲ್ಲಿ ಅದ್ಭುತ ಕಸರತ್ತು ಮಾಡುವ trapeze artist ಮನೆಯಲ್ಲೂ ಉಲ್ಟಾ ನೇತಾಡಿಕೊಂಡಿರಬೇಕಾ?”

