Mistaken identity ಯ ಒಂದು ಮಜಾ ಪ್ರಸಂಗವನ್ನ ಜಾವೇದ್ ಅಖ್ತರ್ ವಿವರಿಸುತ್ತಾರೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಒಮ್ಮೆ ನಮಗೆ ದಿಲ್ಲಿಗೆ ಹೋಗಬೇಕಾಗಿತ್ತು. ನಾನು ಮತ್ತು ಶಬಾನಾ ಏರ್ ಪೋರ್ಟ್ ಲಾಂಜ್ ಲ್ಲಿ ಕುಳಿತಿದ್ದೆವು. ಜೆಟ್ ಏರವೇಸ್ ನ ಹುಡುಗಿಯರು ಬಂದು ಶಬಾನಾ ನ್ನ ಮಾತನಾಡಿಸಿ ಅಟೋಗ್ರಾಫ್ ಎಲ್ಲ ತೆಗೆದುಕೊಂಡರು. ನಂತರ ಅವರು ನನ್ನ ನೋಡಿ ಮಾತನಾಡಿಸಿದರು,
ನಮಸ್ಕಾರ ಗುಲ್ಜಾರ್ ಸಾಬ್
ನಮಸ್ಕಾರ
ಏನು ಗುಲ್ಜಾರ್ ಸಾಹಬ್ ನೀವು ಇಲ್ಲಿ?
ಜಾವೇದ್ ಅಖ್ತರ್ ಸಾಬ್ ಬರಲಿದ್ದಾರೆ, ನಾನು ಅವರನ್ನು ರಿಸೀವ್ ಮಾಡಲಿಕ್ಕೆ ಬಂದೆ.
ಜಾವೇದ್ ಅಖ್ತರ್ ಅವರನ್ನ ?
ಹೌದು ನಾನು ಯಾವಾಗಲೂ ಜಾವೇದ್ ಅಖ್ತರ್ ಅವರನ್ನ ರಿಸೀವ್ ಮಾಡಲಿಕ್ಕೆ ಬರ್ತೀನಿ
( ಅವರ ಮುಖದ ಮೇಲಿನ ನಿರಾಶೆ ನೋಡಬೇಕಿತ್ತು ನೀವು. ಗುಲ್ಜಾರ್ ಅವರಂಥ ದೊಡ್ಡ ಮನುಷ್ಯ ಯಾರೋ ಜಾವೇದ್ ಅಖ್ತರ್ ನ ರಿಸೀವ್ ಮಾಡಲಿಕ್ಕೆ ಬಂದಿರುವುದನ್ನ ನಂಬಲಿಕ್ಕೆ ಆಗಲಿಲ್ಲ ಅವರಿಗೆ)
ಓಹ್ ಸರಿ ಬರ್ತೀವಿ ಗುಲ್ಜಾರ್ ಸಾಬ್ – ಅನ್ನುತ್ತ ಅವರು ತೀವ್ರ ನಿರಾಶೆಯಲ್ಲಿ ಅಲ್ಲಿಂದ ಹೊರಟು ಹೋದರು!

