ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಗ್ಲೌಸ್ ( Glove ) ಹೇಗೆ ತಯಾರು ಮಾಡಿರ್ತಾರೆ ಗೊತ್ತಾ? ಗ್ಲೌಸ್ ನ ನಮ್ಮ ಹಸ್ತದ ಇಮೇಜ್ ಗೆ, ನಮ್ಮ 5 ಕೈ ಬೆರಳುಗಳಿಗೆ ಸರಿಯಾಗಿ ಹೊಂದುವ ಹಾಗೆ ತಯಾರು ಮಾಡಿರ್ತಾರೆ. ಹಾಗಾಗಿ ನಮ್ಮ ಕೈ ಸರಿಯಾಗಿ ಗ್ಲೌಸ್ ಲ್ಲಿ ಫಿಟ್ ಆಗತ್ತೆ. ಗ್ಲೌಸ್ ಲ್ಲಿ ನಮ್ಮ ಕೈ ಇದ್ದಾಗ ಮಾತ್ರ ಅದು ಉಪಯೋಗಕ್ಕೆ ಬರುತ್ತದೆ. ನಮ್ಮ ಕೈ ಗ್ಲೌಸ್ ಒಳಗೆ ಇಲ್ಲದಿರುವಾಗ ಅದು ಯಾವ ಉಪಯೋಗಕ್ಕೂ ಬರುವುದಿಲ್ಲ. Does that make sense?
ಥೇಟ್ ಇದೇ ಥರ ನಾವು ಭಗವಂತನ ಇಮೇಜ್ ನಲ್ಲಿ ಸೃಷ್ಟಿಯಾಗಿದ್ದೇವೆ. So that ದೇವರು ನಮ್ಮೊಳಗೆ ಸರಿಯಾಗಿ ಫಿಟ್ ಆಗಲು ಸಾಧ್ಯವಾಗುವಂತೆ. ಥೇಟ್ ಗ್ಲೌಸ್ ನಲ್ಲಿ ನಮ್ಮ ಕೈ ಫಿಟ್ ಆಗುವಂತೆ. ದೇವರು ನಮ್ಮೊಳಗೆ ಇದ್ದಾಗ ಮಾತ್ರ ನಮಗೆ ಒಂದು ಉದ್ದೇಶವಿದೆ, ಜೀವಂತಿಕೆ ಇದೆ. ದೇವರ ಕಾರಣವಾಗಿಯೇ ನಮ್ಮೊಳಗೆ ಶಕ್ತಿ ಇದೆ ಸಾಮರ್ಥ್ಯವಿದೆ. ದೇವರ ಹೊರತಾಗಿ ನಾವು ಖಾಲೀ ಗ್ಲೌಸ್ ನಂತೆ, ಆಗ ನಮ್ಮಿಂದ ಯಾರಿಗೂ ಯಾವ ಉಪಯೋಗವೂ ಇಲ್ಲ.
ಆದ್ದರಿಂದಲೇ ನಮ್ಮನ್ನು ದೇವರ ಪ್ರತಿರೂಪದಂತೆ ಸೃಷ್ಟಿ ಮಾಡಲಾಗಿದೆ, ದೇವರು ನಮ್ಮೊಳಗೆ ಸರಿಯಾಗಿ ಫೀಟ್ ಆಗುವಂತೆ. ಮತ್ತು ದೇವರು ನಮ್ಮೊಳಗೆ ಇರುವ ಕಾರಣವಾಗಿಯೇ ನಮ್ಮ ಬದುಕಿಗೆ ಉದ್ದೇಶವಿದೆ, ನಮ್ನಿಂದ ಏನಾದರೂ ಸಾಧ್ಯವಾಗಬಹುದಾಗಿದೆ. ನೀವು ಬೇಕಾದರೆ ದೇವರು ಅನ್ನಿ, ಅಥವಾ ದೈವಿಕತೆ ಅನ್ನಿ ನಿಮ್ಮ ನಂಬಿಕೆಗೆ ಅನುಸಾರವಾಗಿ. ಆದರೆ ಅವನು ಅಥವಾ ಅದು ನಿಮ್ಮೊಳಗೆ ಸರಿಯಾಗಿ ಫಿಟ್ ಆಗಿದ್ದಾಗ ಮಾತ್ರ ನೀವು ಪ್ರಯೋಜನಕಾರಿ. ಈ ದೇವರು, ದೈವ ನಮ್ಮೊಳಗೆ ಇರದಿದ್ದಾಗ ನಾವು ಅಧ್ಯಾತ್ಮಿಕವಾಗಿ ಜೀವ ಕಳೆದುಕೊಂಡವರು, Spiritually dead.
(source: Youtube Channel)

