ಜಾದೂ ಕೀ ಝಪ್ಪಿಯ ( ಗಾಢ ಆಲಿಂಗನದ ) ಮಹತ್ವವನ್ನು ಪ್ರಸಿದ್ಧ ನ್ಯೂರೋ ಸೈಂಟಿಸ್ಟ್ ಡಾ. ಸಿದ್ ವಾರಿಯರ್ ಹೀಗೆ ವಿವರಿಸುತ್ತಾರೆ… । ಸಂಗ್ರಹ ಮತ್ತು ಅನುವಾಡ: ಚಿದಂಬರ ನರೇಂದ್ರ
ಯಾಕೆ ಯಾರನ್ನಾದರೂ ಅಪ್ಪಿಕೊಂಡಾಗ ನಿಮಗೆ ಸಮಾಧಾನವಾಗುತ್ತದೆ? ಏಕೆಂದರೆ ಆಗ…..
ನಿಮ್ಮ cortisol level ಡ್ರಾಪ್ ಆಗುತ್ತದೆ
ನಿಮ್ಮ dopamine level ಮೇಲೆ ಏರುತ್ತದೆ
ನಿಮ್ಮ serotonin level ಮೇಲೆ ಏರುತ್ತದೆ
ನಿಮ್ಮ ಮೆದುಳಿನ amygdala ಕಡಿಮೆ ಆ್ಯಕ್ಟಿವ್ ಆಗುತ್ತದೆ
ಮತ್ತು ನಿಮ್ಮೊಳಗಿನ oxytocin level ಹೆಚ್ಚಾಗುತ್ತದೆ
ನಿಮ್ಮ ದೇಹದೊಳಗೆ ನಡೆಯುವ ಈ ಎಲ್ಲ ರಾಸಾಯನಿಕ ಕ್ರಿಯೆಗಳಿಂದಾಗಿ, ನೀವು ಕಡಿಮೆ ಸ್ಟ್ರೆಸ್, ಕಡಿಮೆ ಆತಂಕ ಹೆಚ್ಚು ಖುಶಿ, ಹೆಚ್ಚು ಸಮಾಧಾನ ಮತ್ತು ನಿಮ್ಮ ಸುತ್ತಲಿನ ಜನರೊಂದಿಗೆ ಹೆಚ್ಚು ಏಕತ್ವದ ಭಾವನೆಯನ್ನು ಅನುಭವಿಸುತ್ತೀರ.
ಇಷ್ಟೇ ಅಲ್ಲ ಒಂದು ಅಪ್ಪುಗೆ ದೈಹಿಕ ನೋವನ್ನೂ ಕಡಿಮೆ ಮಾಡುತ್ತದೆ ಎನ್ನುವುದಕ್ಕೆ ಹಲವು ಅಧ್ಯಯನಗಳ ಸಾಕ್ಷಿ ಇದೆ. ಆದ್ದರಿಂದ ನಿಮ್ಮೊಂದಿಗಿನ ಯಾರಾದರೂ ನೋವು ಅನುಭವಿಸುತ್ತಿದ್ದು, ಅವರನ್ನು ಹೇಗೆ ಸಮಾಧಾನ ಮಾಡಬೇಕು ಎನ್ನುವುದು ನಿಮಗೆ ಗೊತ್ತಾಗುತ್ತಿಲ್ಲವಾದರೆ, ಅವರನ್ನು ಗಟ್ಟಿಯಾಗಿ ಅಪ್ಪಿಕೊಂಡು ಬಿಡಿ. ನಿಮ್ಮ ಈ ಗಾಢ ಅಪ್ಪುಗೆ ಅವರಿಗೆ ಬಹಳ ಪ್ರಯೋಜನಕಾರಿಯಾಗಲಿದೆ.

