ಯಾವುದು ವರ್ಕ್, ಯಾವುದು ಸ್ಟ್ರೆಸ್? : Coffeehouse ಕತೆಗಳು

ನಮ್ಮ ಮೆದುಳು ಯಾವುದನ್ನ ವರ್ಕ್ ಅಂತ ಭಾವಿಸುತ್ತದೆ ಯಾವುದನ್ನ ಸ್ಟ್ರೆಸ್ ಅಂತ ಪರಿಗಣಿಸುತ್ತದೆ ಎನ್ನುವುದನ್ನ ವಿವರಿಸುತ್ತಾರೆ ನ್ಯೂರೋ ಸೈಂಟಿಸ್ಟ್ ಸಿದ್ಧಾರ್ಥ ವಾರಿಯರ್… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ

ಯಾವುದು ವರ್ಕ್, ಯಾವುದು ರೆಸ್ಟ್ ಎನ್ನುವುದು ಮೆದುಳಿಗೆ ಸಾಧಾರಣವಾಗಿ ಗೊತ್ತಾಗುವುದೇ ಇಲ್ಲ. ನಾರಾಯಣ ಮೂರ್ತಿಯವರ ಎಲ್ಲರೂ 72 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆಯ ನಂತರ ಹುಟ್ಟಿಕೊಂಡ ವಿವಾದದ ನಂತರ ನಾನು ಈ ಕುರಿತು ಓದುತ್ತಿದ್ದೆ.

ಮೂರ್ತಿ 72 ಗಂಟೆ ಕೆಲಸ ಮಾಡುವುದು ಮತ್ತು ಅವರ ಉದ್ಯೋಗಿಗಳು 72 ಗಂಟೆ ಕೆಲಸ ಮಾಡುವುದರ ನಡುವೆ ಒಂದು ಬಹುಮುಖ್ಯ ವ್ಯತ್ಯಾಸ ಇದೆ. ಮೂರ್ತಿ ಅವರಿಗೆ ಅದು ಅವರೇ ಹುಟ್ಟುಹಾಕಿದ ಅವರ ಸ್ವಂತದ ಕಂಪನಿ. ನಾನು ಕೂಡ ನನ್ನ ಆಸ್ಪತ್ರೆಯಲ್ಲಿ 24 x 7 ಗಂಟೆ ಕೆಲಸ ಮಾಡುವಾಗ, ನಾನು ನನ್ನ ಇಷ್ಟದ, ನಾನು ಯಾವುದರ ಜೊತೆ ಗುರುತಿಸಿಕೊಂಡುದ್ದೇನೋ ಆ ಕೆಲಸ ಮಾಡುತ್ತಿರುತ್ತೇನೆ. ಆಗ ಅದು ನನಗೆ ವರ್ಕ್ ಅನಿಸುವುದೇ ಇಲ್ಲ.

ನಾನು ಇಡೀ ದಿನ ಕೆಲಸ ಮಾಡಿದರೂ ನನ್ನ ಮೆದುಳು sympathetic mode ಗೆ ಹೋಗುವುದಿಲ್ಲ. ನನ್ನ ಮೆದಳು ಸಮಾಧಾನವಾಗಿಯೇ ಇರುತ್ತದೆ. ಆದರೆ ನಾನು ಅದೇ ಕೆಲಸವನ್ನು ಇನ್ನೊಬ್ಬರಿಗಾಗಿ ಮಾಡುತ್ತಿರುವಾಗ, ಯಾವಾಗ ನನಗೆ ನನ್ನ ಸಮಯ ಇನ್ನಾರಿಗಾಗಿಯೋ ಖರ್ಚಾಗುತ್ತಿದೆ ಅನಿಸುವಾಗ ನನ್ನ ಮೆದುಳು ಅದನ್ನು ಸ್ಟ್ರೆಸ್ ಎಂದು ಪರಿಗಣಿಸುತ್ತದೆ. ಆಗ ನನಗೆ ಒತ್ತಡ ಶುರುವಾಗುತ್ತದೆ. ಹಾಗಾಗಿ ಈ ಎರಡನ್ನೂ work life balance ಸಂದರ್ಭದಲ್ಲಿ ಬೇರೆ ಬೇರೆಯಾಗಿ ನೋಡಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.