ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಪ್ರೇಮ ಎಂದರೇನು ಹೇಳ್ತೀರಾ?
ಸರಿ ನೀವು ನನಗೆ ನೀವು ಕೆಂಪು ಬಣ್ಣದ ರುಚಿ ಹೇಗಿರತ್ತೆ ಹೇಳ್ತೀರಾ?
ಅಥವಾ ಒಂದು ಸುಖವಾದ ನಿದ್ರೆಯ ಬಣ್ಣ?
ಕೆಲವು ಸಂಗತಿಗಳನ್ನ ಅನುಭವದ ಹೊರತಾಗಿ ತಿಳಿದುಕೊಳ್ಳಲು ಸಾಧ್ಯವೇ ಆಗುವುದಿಲ್ಲ
ಸಮಸ್ಯೆ ಏನೆಂದರೆ ಜನಗಳಿಗೆ ಈ ಪ್ರೇಮ ಸಂಬಂಧ ರೆಡಿಮೇಡ್ ಬೇಕು.
ಆದರೆ ನಮ್ಮ ಬಳಿ ಪ್ರೇಮ ಸಂಬಂಧ ಎನ್ನುವ ಡಿಶ್ ನ ತಯಾರಿಸುವ ಪದಾರ್ಥಗಳು ಮಾತ್ರ ಲಭ್ಯ ಇವೆ.
ಈ ಡಿಶ್ ನ ಇಬ್ಬರು ಸೇರಿಕೊಂಡು ಸಾವಿರಾರು ಬಾರಿ ಪ್ರಯತ್ನ ಮಾಡಿ ಮಾಡಿ, ಪರಫೆಕ್ಟ್ ಮಾಡಬೇಕಾಗಿದೆ.
ಆಗ ನಿಮಗೆ ಪ್ರೇಮದ ಅನುಭವ ಸಾಧ್ಯವಾಗುತ್ತದೆ.
ಆಕರ : YouTube podcast

