ವಿಶ್ವಾಸ ( faith ) ಮತ್ತು ನಂಬಿಕೆಗಳ ( belief) ನಡುವಿನ ವ್ಯತ್ಯಾಸವನ್ನು ಕವಿ ಜಾವೇದ್ ಅಖ್ತರ್ ವಿವರಿಸೋದು ಹೀಗೆ… । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಉತ್ತರ ಧ್ರುವ ( North Pole ) ಇದೆ ಎಂದು ನಾನು ನಂಬುತ್ತೇನೆ. ಆದರೆ ನಾನು ಯಾವತ್ತೂ ನಾರ್ಥ್ ಪೋಲ್ ನೋಡಿಲ್ಲ ಆದರೂ ನಂಬುತ್ತೇನೆ. ಇದನ್ನು ನೀವು ನನ್ನ faith ಅಂತೀರೋ? ಇಲ್ಲ ಅಲ್ವಾ ? ಯಾಕಂದ್ರೆ, ಇಲ್ಲೊಂದು ಲಾಜಿಕ್ ಇದೆ. ಭೂಮಿ ದುಂಡಗಿದೆ ಎನ್ನುವುದನ್ನ ಒಪ್ಪಿಕೊಂಡ ಮೇಲೆ, ಅದಕ್ಕೆ ಮೇಲೊಂದು ತುದಿ ಕೆಳಗೊಂದು ತುದಿ ಇರಲೇಬೇಕು. ಮೇಲಿನ ಭಾಗವನ್ನು ಜನ ನಾರ್ಥ್ ಪೋಲ್ ಎನ್ನುತ್ತಾರೆ. ಕೆಲವರು ಅಲ್ಲಿಗೆ ಹೋಗಿ ಬಂದಿದ್ದಾರೆ ಕೂಡ, ಅಲ್ಲಿನ ಫೋಟೋ ಗಳನ್ನೂ ತಂದಿದ್ದಾರೆ. ಕನ್ಫರ್ಮ್ ಮಾಡಿಕೊಳ್ಳಲಿಕ್ಕೆ ನಾನೂ ಬೇಕಾದರೆ ಅಲ್ಲಿಗೆ ಹೋಗಿ ಬರಬಹದು. ಸಾಕ್ಷಿ, ತರ್ಕ, ಸಕಾರಣತೆ ಎಲ್ಲವೂ ಇದರ ಪರವಾಗಿವೆ. ಆದ್ದರಿಂದ ಇದು ಬಿಲೀಫ್, ಫೇತ್ ಅಲ್ಲ.
ಫೇತ್ ( ವಿಶ್ವಾಸ) ಏನು ಅಂದ್ರೆ, ಅಲ್ಲಿ ಯಾವ ಸಾಕ್ಷಿ (witness) ತರ್ಕ ( logic ), ಸಕಾರಣತೆ ( rational ) ಇರುವುದಿಲ್ಲ. ಈ ಎಲ್ಲದರ ಹೊರತಾಗಿಯೂ ನೀವು ಆ ಸಂಗತಿಯನ್ನೂ ಒಪ್ಪುತ್ತೀರಿ ಎಂದರೆ ಅದು ವಿಶ್ವಾಸ. ಹಾಗಾದರೆ ನೀವೇ ಹೇಳಿ ಈ ವಿಶ್ವಾಸ ಮತ್ತು ಮೂರ್ಖತನ (stupidly) ಗಳ ನಡುವೆ ಏನು ವ್ಯತ್ಯಾಸ ಇದ್ದ ಹಾಗಾಯಿತು.
ಹೀಗೆ faith ಮತ್ತು belief ಗಳ ನಡುವಿನ ಅಪಾರ ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತಾರೆ ಕವಿ, rationalist ಜಾವೇದ್ ಅಖ್ತರ್.
******************************

