ಸಂಬಂಧಗಳಲ್ಲಿನ ಪ್ರೇಮದ ಮಹತ್ವವನ್ನು ಒತ್ತಿ ಹೇಳುವ ಖ್ಯಾತ ಹಿಂದಿ ಸಿನೇಮಾ ಕತೆಗಾರ ಸಲೀಮ್ ಖಾನ್ ಅದನ್ನು ವಿವರಿಸಿದ್ದು ಹೀಗೆ… । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
“ಮನುಷ್ಯ ಸಂಬಂಧಗಳಲ್ಲಿ ಘಟಿಸಬಹುದಾದ ಅತ್ಯಂತ ಕೆಟ್ಟ ಸಂಗತಿ ಎಂದರೆ ಈ understanding ಎನ್ನುವುದು”. ನನ್ನ ಈ ಮಾತು ಕೇಳಿ ನಿಮಗೆ ಶಾಕ್ ಆಗಬಹುದು.
ಈ understanding ಎಂದರೇನು? ನನ್ನ ಹೆಂಡತಿ ಮಹಾರಾಷ್ಟ್ರಿಯನ್ ಹಿಂದೂ, ಆಕೆ ಒಂದು ವಿಭಿನ್ನ ವಾತಾವರಣದಿಂದ ಬಂದಿದ್ದಾಳೆ. ನಾನು ಉತ್ತರ ಭಾರತೀಯ ಪಠಾಣ. ನಾನು ಹುಟ್ಟಿ ಬೆಳೆದ ವಾತಾವರಣವೇ ಬೇರೆ. ನನಗೆ ನನ್ನ ಹೆಂಡತಿಯ ನಾಲ್ಕು ಸಂಗತಿಗಳು ಇಷ್ಟವಾಗೋದಿಲ್ಲ. ಅವಳಿಗೂ ನನ್ನ ನಾಲ್ಕು ವಿಷಯಗಳೆಂದರೆ ಕೆಟ್ಟ ಕೋಪ. ಈ ಕಾರಣಗಳಿಂದ ನಮ್ಮ ನಡುವೆ ಸದಾ ಮುನಿಸು, ವಾದ ವಿವಾದ, ಜಗಳ ಇತ್ಯಾದಿ…
ಕೊನೆಗೆ ನಾವಿಬ್ಬರೂ ಸೆನ್ಸಿಬಲೀ ನಿರ್ಧಾರ ಮಾಡಿದೆವು. ನನಗೆ ಇಷ್ಟ ಇಲ್ಲದ ನಾಲ್ಕು ಸಂಗತಿಗಳನ್ನು ಅವಳು ಕಡಿಮೆ ಮಾಡಿದಳು. ಅವಳಿಗೆ ಇಷ್ಟವಿರದ ನಾಲ್ಕು ವಿಷಯಗಳನ್ನು ನಾನೂ ಬಿಟ್ಟು ಬಿಟ್ಟೆ. ಈಗ ನಮ್ಮ ನಡುವೆ ಯಾವ ಜಗಳ ಇಲ್ಲ. ಜಗಳ ಇಲ್ಲದಿರುವ ಸಂಗತಿ, ಪ್ರೇಮದ ಆಗಮನ ಅಂತೇನೂ ಅಲ್ಲ.
ರಿಲೇಶನ್’ಶಿಪ್ ಕೇವಲ ಒಂದು ಸಂಗತಿಯ ಮೇಲೆ ನಿರ್ಭರವಾಗಿರುತ್ತದೆ, ಅದು ಪ್ರೇಮ. ಸಂಬಂಧ ಯಾವುದೇ ಇರಲಿ, ಗಂಡ-ಹೆಂಡತಿ, ತಾಯಿ-ಮಗ, ಅಪ್ಪ-ಮಗ, ಅಣ್ಣ – ತಮ್ಮ -ಸೋದರಿ …. ಸಂಬಂಧ ಯಾವುದೇ ಇರಲಿ. ಯಾವತ್ತು ಈ ಸಂಬಂಧಗಳಲ್ಲಿನ ಪ್ರೇಮ ಮಾಯವಾಗುತ್ತದೆಯೋ ಅಂದು ಜಗತ್ತಿನ ಯಾವ ದೊಡ್ಡ understanding ಗೆ ಕೂಡ ಈ ಸಂಬಂಧವನ್ನು ಸರಿ ಮಾಡುವುದು ಸಾಧ್ಯವಾಗುವುದಿಲ್ಲ.

