ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಜನರಿಗೆ ಈಗೀಗ ಮದುವೆ ಬೇಕಿಲ್ಲ, ಅವರಿಗೆ ಬೇಕಾಗಿರೋದು wedding. Pre wedding, Post wedding celebration. ಅವರಿಗೆ ಬೇಕಾಗಿರೋದು ಫೋಟೋಗಳು, ಸಂಭ್ರಮ. ಆದರೆ ಮದುವೆ, ರೋಮಾನ್ಸ್ ಅಲ್ಲ, ಅದು ಜವಾಬ್ದಾರಿ. ಮದುವೆಯ ನಂತರ ಕಿಟಕಿಯಿಂದ ಮೊದಲು ಹೊರಗೆ ಎಸೆಯಲ್ಪಡುವ ಸಂಗತಿಯೆಂದರೆ ಅದು ರೋಮಾನ್ಸ್. ಆಗ ನಿಮ್ಮ ಬಳಿ ಉಳಿದುಕೊಳ್ಳುವುದು ಕೇವಲ ಜವಾಬ್ದಾರಿಗಳು.
ನಿಮಗೆ ಅಂಥ ವ್ಯಕ್ತಿಯನ್ನು ಹುಡುಕಬೇಕಿದೆ, ಯಾರು ನಿಮ್ಮ ಕೈಯಲ್ಲಿ ತಮ್ಮ ಕೈ ಸೇರಿಸಿಕೊಂಡು, ನಿಮ್ಮ ಹೆಗಲಿಗೆ ತಮ್ಮ ಹೆಗಲು ತಾಕಿಸುತ್ತ ಈ ಜವಾಬ್ದಾರಿಗಳನ್ನು ಹೊತ್ತುಕೊಳ್ಳಲು ಸಿದ್ಧರಾಗಿರುವವರು. ನೀವು ಎಷ್ಟು ನಗುನಗುನಗುತ್ತ, ಎಷ್ಟು ಕಡಿಮೆ ಬಿಕ್ಕಟ್ಟುಗಳೊಂದಿಗೆ , ಎಷ್ಟು ತಿಳುವಳಿಕೆಯಿಂದ ಈ ಜವಾಬ್ದಾರಿಗಳನ್ನು ನಿರ್ವಹಿಸುತ್ತೀರೋ ಆ ಪ್ರಯಾಣ ರೋಮಾನ್ಸ್. ಆ ಪ್ರಯಾಣ ಪ್ರೀತಿ. ಮದುವೆಯ ಹೊರತೂ ನೀವು ಜೊತೆಯಾಗಿ ಇರುವಿರಾದರೆ ನೀವು ಮಾಡಬೇಕಾದ ರೋಮಾನ್ಸ್ ಇದೇ.
ಆಕರ : You Tube podcast
*****^**********************

