ವಿಲಕ್ಷಣ ಪ್ರೇಮ ( Outlandish Love ) : ಓಶೋ 365 #Day 107

ಪ್ರೇಮ ಎಂದರೇನು ? ಕೇವಲ ಫೂಲ್ಸ್ ಗೆ ಮಾತ್ರ ಗೊತ್ತು, ಏಕೆಂದರೆ ಪ್ರೇಮ ಒಂದು ಬಗೆಯ ಹುಚ್ಚುತನ... ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ



ಲೌಕಿಕದ ಆಮಿಷ
ನಿನ್ನ ಸೆಳೆಯುತ್ತಿದ್ದರೆ
ನೀನು ಕೇವಲ ಒಬ್ಬ ನೌಕರ.

ಅಲೌಕಿಕದ ತುಡಿತ
ನಿನ್ನ ಜಗ್ಗುತ್ತಿದೆಯಾದರೆ
ನೀನೊಬ್ಬ ಪಕ್ಕಾ ಸುಳ್ಳುಗಾರ.

ಎರಡೂ ಮೂರ್ಖ ಆಸೆಗಳೇ.

ಪ್ರೀತಿ ತಂದಿಡುವ
ಗೊಂದಲಕರ
ಅಮಾಯಕ ಆನಂದವೊಂದೆ
ನಿನ್ನ ಪರಮ ಅಗತ್ಯ.

ನೀನು ಮರೆತದ್ದನ್ನು
ಅವರು ಕ್ಷಮಿಸಿಬಿಡುತ್ತಾರೆ.

– ರೂಮಿ

ಬಹುತೇಕ ನೀವು ಪ್ರೇಮದ ತುತ್ತ ತುದಿಗಳನ್ನು ಯಾವತ್ತೂ ತಲುಪಿರಲಾರಿರಿ, ಆದರೆ ತಲುಪಬೇಕೆಂಬ ಬೃಹತ್ ಆಕಾಂಕ್ಷೆಯಂತೂ ನಿಮ್ಮೊಳಗೆ ಉಂಟು. ನೀವು ಪ್ರೇಮದಲ್ಲಿದ್ದೀರಿ ನಿಜ ಆದರೆ, ಅದು ಎಂದಿಗೂ ಅದ್ಭುತವಲ್ಲ, ವಿಲಕ್ಷಣವಲ್ಲ. ಇನ್ನೂ ಇದು ಕೇವಲ ಉಗುರು ಬೆಚ್ಚಗಿನದು. ಇನ್ನೂ ಇದು ನಿಮ್ಮನ್ನು ನುಂಗಿ ಹಾಕುವ ಬೆಂಕಿಯಲ್ಲ. ನೀವು ಪ್ರೇಮದ ಒಳಗೇ ಇದ್ದರೂ ಅದು ಇನ್ನೂ ನಿಮ್ಮನ್ನು ನಾಶ ಮಾಡಿಲ್ಲ ; ಹಾಗೆ ನೀವು ನಿಮ್ಮನ್ನು ಮ್ಯಾನೇಜ್ ಮಾಡಿಕೊಂಡಿದ್ದೀರಿ. ಪ್ರೇಮದಲ್ಲಿಯೂ ನೀವು ಜಾಣತನವನ್ನೇ ಅಳವಡಿಸಿಕೊಂಡಿದ್ದೀರ, ಪ್ರೇಮ ನಿಮ್ಮನ್ನ ಇನ್ನೂ ಹುಚ್ಚನನ್ನಾಗಿಸಿಲ್ಲ. ಮತ್ತು ಪ್ರೇಮ ಎಂದರೇನು ? ಕೇವಲ ಫೂಲ್ಸ್ ಗೆ ಮಾತ್ರ ಗೊತ್ತು, ಏಕೆಂದರೆ ಪ್ರೇಮ ಒಂದು ಬಗೆಯ ಹುಚ್ಚುತನ.

ನೀವು ಅತೀ ಜಾಣರಾಗಿದ್ದರೆ, ಪ್ರೇಮದಲ್ಲಿ ನೀವು ಸ್ವಲ್ಪ ದೂರ ಮಾತ್ರ ಪ್ರಯಾಣ ಮಾಡಬಲ್ಲಿರಿ. ಇನ್ನೂ ಮುಂದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ನಿಮ್ಮ ಮೈಂಡ್ ನಿಮ್ಮನ್ನು ಎಚ್ಚರಿಸುತ್ತದೆ. ಪ್ರೇಮಕ್ಕೆ ಕೇವಲ ತೃಪ್ತಿಯ ಅನುಭವ ಮಾತ್ರ ಗೊತ್ತು, ಮತ್ತು ತೃಪ್ತಿಯೆಂದರೆ ಪ್ರೇಮದ ತುತ್ತ ತುದಿಯನ್ನು ತಲುಪುವುದು, ಕೊನೆಪಕ್ಷ ಒಮ್ಮೆಯಾದರೂ. ಆಗ ಮಾತ್ರ ನಿಮ್ಮ ಎನರ್ಜಿಯಲ್ಲಿ ಮಹತ್ತರವಾದ ಬದಲಾವಣೆ ಸಾಧ್ಯ. ಒಮ್ಮೆ ಮಾತ್ರ ಕ್ಲೈಮ್ಯಾಕ್ಸ್ ನಲ್ಲಿ ಪ್ರೇಮವನ್ನು ಅರ್ಥಮಾಡಿಕೊಂಡರೆ ಸಾಕು ; ನಂತರ ಮತ್ತೆ ಮತ್ತೆ ಕ್ಲೈಮ್ಯಾಕ್ಸ್ ತಲುಪುವ ಅವಶ್ಯಕತೆಯಿಲ್ಲ. ಈ ಅನುಭವ, ನಿಮ್ಮ ಅಸ್ತಿತ್ವವನ್ನು ಪೂರ್ತಿಯಾಗಿ ಬದಲಾಯಿಸುತ್ತದೆ. ಆದ್ದರಿಂದ ಅತೀ ಜಾಣತನ ಬೇಡ. ಜಾಣತನದ ಬಗ್ಗೆ ಮರೆತೇ ಬಿಡಿ ; ಸಾಧ್ಯವಾದಷ್ಟು ಗೊಂದಲದಲ್ಲಿಯೇ ಇದ್ದುಬಿಡಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.