ನೀವು ಫ್ಲರ್ಟ್ ಮಾಡುತ್ತಿರುವಾಗ ನಿಮ್ಮ ಮೆದುಳಿನಲ್ಲಿ ಏನಾಗುತ್ತಿರುತ್ತೆ ಗೊತ್ತೆ? : ~ ಸಿದ್ದಾರ್ಥ ವಾರಿಯರ್, ನ್ಯೂರೋ ಸೈಂಟಿಸ್ಚ್ । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಫ್ಲರ್ಟಿಂಗ್, ಇಬ್ಬರು ವ್ಯಕ್ತಿಗಳು ತಾವು ಎಷ್ಟು ಹತ್ತಿರವಾಗಿರಬೇಕು ಅಥವಾ ಎಷ್ಟು ದೂರ ಇರಬೇಕು ಎನ್ನುವುದನ್ನ ನಿರ್ಧರಿಸಲು ಬಳಸುವ ಸಂವಹನದ ಒಂದು ವಿಧಾನ.
ಮೆದುಳಿನಲ್ಲಿನ Amygdala ( ಭಾವನೆಗಳನ್ನು ಪ್ರೊಸೆಸ್ ಮಾಡುವ ಮೆದುಳಿನ ಭಾಗ) ನೆಟ್ವರ್ಕ್, ನಿಮಗೆ ಸೇಫಾಗಿರಲು, ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸೂಚನೆ ಕೊಡುತ್ತಿದ್ದರೆ, ಡೋಪೋಮಿನ್ (feel good harmone ) ನೆಟ್ವರ್ಕ್ , ಹೆಚ್ಚಿನದನ್ನು explore ಮಾಡಲು, ಹೊಸದೊಂದನ್ನು ಟ್ರೈ ಮಾಡಲು ಉತ್ತೇಜಿಸುತ್ತಿದೆ. ನಮ್ಮ ಲಿಂಬಿಕ್ ಸಿಸ್ಟಂ ನ ( ಭಾವನೆಗಳನ್ನ ಮತ್ತು ವರ್ತನೆಗಳನ್ನ interconnect ಮಾಡುವ ಮೆದುಳಿನ ರಚನೆ) ಈ ಎರಡು ನೆಟ್ವರ್ಕ್ ಗಳ ನಡುವೆಯೇ ಇದೆ ಮಿಲನ ನೃತ್ಯ ( mating dance). ಇದನ್ನು ನಾವು ಎಲ್ಲ ಪ್ರಾಣಿಗಳಲ್ಲೂ ಕಾಣಬಹುದು.
ಆದರೆ ಪ್ಲರ್ಟಿಂಗ್ ನ ಇಷ್ಟು ಅದ್ಭುತ, ಇಷ್ಟು ಮಾನವೀಯವಾಗಿಸುವ ಸಂಗತಿಯೆಂದರೆ, ನಮ್ಮ ಎಲ್ಲ ಎಮೋಷನ್ ಗಳು ಈಗ prefrontal cortex ( PFC : ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವ ಮೆದುಳಿನ ಭಾಗ) ನ ಫಿಲ್ಟರ್ ಮೂಲಕ ಹಾಯ್ದು ಹೋಗುತ್ತವೆ ಮತ್ತು ನಿಮ್ಮ PFC ಈಗ ನಿಮ್ಮ ಎಲ್ಲ Amygdala ಮತ್ತು ಡೋಪೋಮಿನ್ ನೆಟ್ವರ್ಕ್ ನ ಗೊಂದಲಗಳನ್ನು ಅಭಿವ್ಯಕ್ತಿಸಲು ಪದಗಳನ್ನು ಹುಡುಕಬೇಕಾಗಿದೆ.
ಆದ್ದರಿಂದ ನೀವು ಅತ್ಯುತ್ತಮವಾಗಿ ಫ್ಲರ್ಟ ಮಾಡುವವರನ್ನು ನೋಡುತ್ತಿರುವಿರಾದರೆ ಅವರು ತಮ್ಮ ಭಾವನೆಗಳಿಗೆ ಪದಗಳ ರೂಪ ನೀಡುವುದರಲ್ಲಿ ಸಿದ್ಧಹಸ್ತರು ಎಂದರ್ಥ.

