ನಿಷ್ಕ್ರಿಯ ಸ್ಥಿತಿ ( Hibernation) : ಓಶೋ 365 #Day 168

ಕೆಲವೊಮ್ಮೆ ನೀವು ಕೋಲ್ಡ್ ಆಗಿರಬಹುದು, ಕೆಲವೊಮ್ಮೆ ವಾರ್ಮ್ ಆಗಿರಬಹುದು, ಆದರೆ ಈ ಸ್ಥಿತಿಗಳು ನಿಮ್ಮ ಸಮಸ್ಯೆಗೆ ಕಾರಣವಾಗಬಾರದು. ಕೋಲ್ಡ್ ಆಗಿರುವಾಗ, ಕೋಲ್ಡ್ ಆಗಿಯೇ ಇರಿ, ಈ ಬಗ್ಗೆ ಯಾವ ಪಶ್ಚಾತಾಪ ಬೇಡ  ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನಿಮಗೆ ದಿನದ 24 ಗಂಟೆಯೂ ವಾರ್ಮ್ ಆಗಿಯೇ ಇರುವ ಅವಶ್ಯಕತೆಯೇನಿಲ್ಲ. ಇದು ತ್ರಾಸದಾಯಕವಾದದ್ದು. ನಿಮಗೆ ಕೊಂಚ ವಿಶ್ರಾಂತಿಯಾದರೂ ಬೇಕೇ ಬೇಕಾಗುತ್ತದೆ. ನೀವು ಕೋಲ್ಡ್ ಆಗಿರುವಾಗ ನಿಮ್ಮ ಎನರ್ಜಿ ನಿಮ್ಮ ಒಳಗೆ ಮೂವ್ ಆಗುತ್ತಿರುತ್ತದೆ ; ಯಾವಾಗ ನೀವು ವಾರ್ಮ್ ಆಗಿರುತ್ತೀರೋ ಆಗ ನಿಮ್ಮ ಎನರ್ಜಿ ನಿಮ್ಮಿಂದ ಹೊರಗೆ ಮೂವ್ ಆಗುತ್ತಿರುತ್ತದೆ. ಖಂಡಿತ ಬೇರೆ ಜನ ನೀವು ವಾರ್ಮ್ ಆಗಿಯೇ ಇರಬೇಕೆಂದು ಬಯಸುತ್ತಾರೆ, ಏಕೆಂದರೆ ಆಗ ನಿಮ್ಮ ಎನರ್ಜಿ ಅವರೆಡೆಗೆ ಚಲಿಸುತ್ತಿರುತ್ತದೆ. ನೀವು ಕೋಲ್ಡ್ ಆಗಿರುವಾಗ ನಿಮ್ಮ ಎನರ್ಜಿ ಅವರತ್ತ ಚಲಿಸುವುದಿಲ್ಲ ಆದ್ದರಿಂದ ಅವರಿಗೆ ನಿಮ್ಮ ಮೇಲೆ ಕೋಪ. ಆದರೆ ವಾರ್ಮ ಆಗಿರುವುದು ಅಥವಾ ಕೋಲ್ಡ್ ಆಗಿರುವುದು ನಿಮ್ಮ ಆಯ್ಕೆ.

ಕೋಲ್ಡ್ ಆಗಿರುವ ಆ ಕ್ಷಣಗಳಲ್ಲಿ ನೀವು ನಿಷ್ಕ್ರೀಯರಾಗಿರುತ್ತೀರಿ, ನೀವು ನಿಮ್ಮೊಳಗೆ ಅಡಗಿಕೊಂಡು ಬಿಡುತ್ತೀರಿ. ಇವು ನಿಮ್ಮ ಧ್ಯಾನಸ್ಥ ಕ್ಷಣಗಳು. ಹಾಗಾಗಿ ಇದು ನನ್ನ ಸಲಹೆ – ನೀವು ಕೋಲ್ಡ್ ಫೀಲ್ ಆಗುತ್ತಿರುವಾಗ, ಎಲ್ಲ ಜನರಿಂದ, ಎಲ್ಲ ಸಂಬಂಧಗಳಿಂದ ನಿಮ್ಮ ಸಂಪರ್ಕದ ದ್ವಾರಗಳನ್ನು ಬಂದ್ ಮಾಡಿಕೊಂಡುಬಿಡಿ. ನಿಮ್ಮ ಮನೆ ಸೇರಿಕೊಂಡು ಧ್ಯಾನಸ್ಥರಾಗಿಬಿಡಿ. ಧ್ಯಾನ ಮಾಡಲು ಇದು ಸರಿಯಾದ ಸಮಯ. ಹೇಗೂ ನಿಮ್ಮ ಎನರ್ಜಿ ನಿಮ್ಮ ಒಳಗೆ ಚಲಿಸುತ್ತಿರುವುದರಿಂದ, ನೀವು ಅದರ ಸವಾರಿ ಮಾಡುತ್ತ ನಿಮ್ಮ ಆಳದ ತಿರುಳನ್ನು ತಲುಪಿಬಿಡಬಹುದು. ಇಲ್ಲಿ ಹೋರಾಟ ಮಾಡಬೇಕಿಲ್ಲ. ನೀವು ಸುಮ್ಮನೇ ನಿಮ್ಮ ಎನರ್ಜಿಯ ಹರಿವಿನ ಜೊತೆ ಸೇರಿಕೊಂಡರಾಯಿತು.

ಮತ್ತು ನೀವು ವಾರ್ಮ ಫೀಲ್ ಮಾಡುವಾಗ ಹೊರಗೆ ಬನ್ನಿ, ಧ್ಯಾನ ಗೀನ ಎಲ್ಲ ಮರೆತುಬಿಡಿ. ಪ್ರೇಮಿಸಿ, ಪ್ರೇಮಮಯಿಯಾಗಿ. ಹೀಗೆ ನಿಮ್ಮ ಎರಡೂ ಭಾವಗಳನ್ನು ಯಾವ ಸಂಕೋಚವಿಲ್ಲದೇ ನಿಮ್ಮ ಲಾಭಕ್ಕಾಗಿ ಬಳಸಿಕೊಳ್ಳಿ.

ಒಂದು ದಿನ ನಸ್ರುದ್ದೀನ್ ತನ್ನ ಗರ್ಲ್ ಫ್ರೆಂಡ್ ನ ಪ್ರಶ್ನೆ ಮಾಡಿದ.

“ನಾವು ಡೇಟ್ ಮಾಡೋಕೆ ಶುರು ಮಾಡಿ ಒಂದು ವರ್ಷ ಆಯ್ತು, ನಾನು ಎಂಥ ಮನುಷ್ಯ ಅನ್ಸತ್ತೆ ನಿನಗೆ?”

“ ನೀನು ತುಂಬ warm ಮನುಷ್ಯ ನಸ್ರುದ್ದೀನ್ “

ಗೆಳತಿ ಉತ್ತರಿಸಿದಳು

ನಸ್ರುದ್ದೀನ್ ಗೆ ತುಂಬ ಖುಶಿ ಆಯ್ತು. ಆದರೆ ಆ ಸಂಜೆ ಯಾಕೋ ಸಂಶಯ ಬಂದು ಅವನು ಡಿಕ್ಷನರಿ ತೆಗೆದು ಚೆಕ್ ಮಾಡಿದ.

ವಾರ್ಮ್ ಅಂದ್ರೆ not so hot ಅಂತ ಇತ್ತು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.