ಧ್ಯಾನಕ್ಕೂ, ಸಮಯ ಮತ್ತು ಜಾಗೆಗೂ ಯಾವ ಸಂಬಂಧವಿಲ್ಲ, ಬದಲಾಗಿ ಸಂಬಂಧವಿರುವುದು ನಿಮ್ಮ ಜೊತೆ, ನಿಮ್ಮ ಒಳಗಿನ ಜೊತೆ. ಆದ್ದರಿಂದ ನಿಮ್ಮ ಪ್ರತಿದಿನದ ರೂಟಿನ್ ನಿಂದ ನಿಮಗೆ ಬಿಡುವು ಸಿಕ್ಕಾಗಲೆಲ್ಲ ರಿಲ್ಯಾಕ್ಸ್ ಮಾಡಿ, ಧ್ಯಾನ ಸಂಭವಿಸಲು ಅವಕಾಶ ಮಾಡಿಕೊಡಿ. ಧ್ಯಾನ ಯಾವ ಜಾಗದಲ್ಲೂ ಯಾವ ಸಮಯದಲ್ಲೂ ಸಂಭವಿಸಬಹುದಾದ ಸಂಗತಿ, ಏಕೆಂದರೆ ಇದು ಕಾಲ ಮತ್ತು ದೇಶಕ್ಕೆ ಸಂಬಂಧಿಸಿದ ಸಂಗತಿಯಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ದಾರಿ ಎಲ್ಲಿಗೆ ಕರದೊಯ್ಯಬಹುದು
ಎನ್ನುವ ಆತಂಕದಿಂದ ದೂರವಿರಿ.
ಬದಲಾಗಿ ನೀವು ಇಡಲು ಮುಂದಾಗುತ್ತಿರುವ
ಮೂದಲ ಹೆಜ್ಜೆಯ ಮೇಲೆ ಮಾತ್ರ
ಧ್ಯಾನವನ್ನು ಕೇಂದ್ರೀಕರಿಸಿ.
ಬದುಕಿನ ಪ್ರಯಾಣದಲ್ಲಿ
ಮೊದಲ ಹೆಜ್ಜೆ ಮಾತ್ರ ಅತ್ಯಂತ ಕಠಿಣ ಭಾಗ
ಅದನ್ನು ಸರಿಯಾಗಿ ನಿಭಾಯಿಸುವುದೊಂದೆ
ನಿಮ್ಮ ಮುಂದಿರುವ ಜವಾಬ್ದಾರಿ.
ಈ ಹೆಜ್ಜೆ ಇಟ್ಟಾದ ಮೇಲೆ
ಎಲ್ಲವನ್ನೂ
ಪ್ರಯಾಣದ ಸಹಜತೆಗೆ ಬಿಟ್ಟು ಬಿಡಿ
ಬಾಕಿ ಎಲ್ಲ ನಿಮ್ಮನ್ನು ಹಿಂಬಾಲಿಸುತ್ತದೆ.
ಹರಿವಿನ ಜೊತೆ ಹರಿಯಬೇಡಿ
ನೀವೇ ಹರಿವಾಗಿ.
~ ಶಮ್ಸ್
ಸರಿಯಾದ ಧ್ಯಾನಕ್ಕೆ ಯಾವ ಮಿತಿಗಳ ಬಗ್ಗೆಯೂ ಗೊತ್ತಿಲ್ಲ, ನಿಧಾನವಾಗಿ ನಿಧಾನವಾಗಿ ಹರಿವು ಹೆಚ್ಚು ಹೆಚ್ಚು ಪ್ರಜ್ಞೆಯನ್ನು ಒಳಗೊಳ್ಳುತ್ತ ಹೋಗುತ್ತದೆ. ಆಗ ನೀವು ಮಾಡುತ್ತಿರುವುದೆಲ್ಲ ಮೇಲ್ಮೈ ಪಾತಳೆಯ ಮೇಲೆ ಉಳಿದುಕೊಳ್ಳುತ್ತದೆ ; ಆಳದ ಒಳಗೆ ನದಿ ಹರಿಯುತ್ತಲೇ ಇರುತ್ತದೆ. ಮಾರ್ಕೇಟ್ ಲ್ಲಿ ಕೂಡ, ಎಲ್ಲ ಗೋಜಲುಗಳು ಸುತ್ತುವರೆದಿರುವಾಗಲು ಕೂಡ, ನೀವು ಆಳ ಮೌನವನ್ನು ಸಾಧಿಸುವಿರಿ. ಇನ್ನೊಬ್ಬರು ನಿಮ್ಮನ್ನು ಅವಮಾನಿಸುತ್ತಿರುವಾಗಲೂ, ನಿಮ್ಮನ್ನು ರೊಚ್ಚಿಗೆಬ್ಬಿಸುತ್ತಿರುವಾಗಲೂ, ನೀವು ನಿಮ್ಮ ಆಳದಲ್ಲಿ ಸಮಾಧಾನವನ್ನು ಸಾಧಿಸುವಿರಿ; ನೀವು ಗೊಂದಲಕ್ಕೊಳಗಾಗುವುದಿಲ್ಲ. ಸುತ್ತ ಸಾವಿರಾರು distraction ಗಳಿರುವಾಗಲೂ ಕೇಂದ್ರದಲ್ಲಿ ಯಾವುದೂ ವಿಚಲಿತರಾಗುವುದಿಲ್ಲ. ಆದರೆ ಈ ಧ್ಯಾನವನ್ನು ಮ್ಯಾನೇಜ್ ಮಾಡುವುದು ಮೈಂಡ್ ಗೆ ಸಾಧ್ಯವಾಗುವುದಿಲ್ಲ; ಇದು ಹೃದಯಕ್ಕೆ ಮಾತ್ರ ಸಾಧ್ಯವಾಗುವ ಸಂಗತಿ.
ಧ್ಯಾನ, ಈ ಕ್ಷಣಕ್ಕೆ ಸಂಬಂಧಿಸಿರುವುದು – it is here ! ಅದು ಸಾಧ್ಯವಾಗಲು ನೀವು ಏನೂ ಮಾಡಿಲ್ಲ; ಅದು ತಂತಾನೇ ಸಂಭವಿಸುತ್ತಿದೆ. ಈ ಕ್ಷಣದಲ್ಲಿ ಯಾವ ಸಮಯವೂ ಇಲ್ಲ. ಈ ಕ್ಷಣದಲ್ಲಿ ನಿಮ್ಮನ್ನು transport ಮಾಡಲಾಗಿದೆ, ಈ ಕ್ಷಣದಲ್ಲಿ ನೀವು ಆ ಪ್ರಶಾಂತತೆಯನ್ನ, ಆ ಮೀರುವಿಕೆಯನ್ನ ಫೀಲ್ ಮಾಡಬಹುದು.
ಸಾಧನೆಯ ಹಾದಿಯಲ್ಲಿದ್ದ ಒಬ್ಬ ಝೆನ್ ಸನ್ಯಾಸಿ ಒಮ್ಮೆ ಮಾರ್ಕೆಟ್ ಮೂಲಕ ಹಾಯ್ದು ಹೋಗುವಾಗ ಮಾಂಸದ ಅಂಗಡಿಯೊಂದರಲ್ಲಿ ನಡೆಯುತ್ತಿದ್ದ ಸಂಭಾಷಣೆಯನ್ನು ಕಿವಿಗೊಟ್ಟು ಕೇಳಿದ.
ಗ್ರಾಹಕ : ನಿನ್ನ ಅಂಗಡಿಯಲ್ಲಿರುವ ಒಳ್ಳೆಯ ಮಾಂಸದ ತುಣುಕು ನನಗೆ ಬೇಕು
ಅಂಗಡಿಯವ: ನನ್ನ ಅಂಗಡಿಯಲ್ಲಿರೋದೆಲ್ಲ ಒಳ್ಳೆಯ ಮಾಂಸವೇ. ಇಲ್ಲಿಯ ಯಾವ ಮಾಂಸದ ತುಣುಕೂ ಕಳಪೆಯಲ್ಲ.
ಈ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದಂತಯೇ ಝೆನ್ ಸನ್ಯಾಸಿಗೆ ಜ್ಞಾನೋದಯವಾಯಿತು.

