ಜನರ ಸುಮಾರು ತೊಂಭತ್ತರಷ್ಟು ಕ್ರಿಯೆಗಳು ಮಹಾ ಅಪ್ರಯೋಜನಕಾರಿ ; ಅವು ಕೇವಲ ಅಪ್ರಯೋಜನಕಾರಿಯಷ್ಟೇ ಅಲ್ಲ ಅಪಾಯಕಾರಿ ಕೂಡ. ಯಾವುದನ್ನ ನೀವು Socializing, ಜನರ ಜೊತೆ ಬೆರೆಯುವುದು, ಸಂಭಾಷಿಸುವುದು, ಸಂಬಂಧ ಬೆಳೆಸುವುದು ಎನ್ನುತ್ತೀರೋ ಅವೆಲ್ಲವೂ ಬಹುತೇಕ ವ್ಯರ್ಥವಾದವು. ಇವನ್ನು ಡ್ರಾಪ್ ಮಾಡುವುದು ಒಳ್ಳೆಯದು; ಕೊಂಚ ಎಚ್ಚರಿಕೆಯನ್ನು ಸಾಧಿಸಿದಾಗ ಇವು ತಾವಾಗಿಯೇ ಡ್ರಾಪ್ ಆಗುವವು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಇದು ಹೇಗೆಂದರೆ ನೀವು ತೀವ್ರ ಜ್ವರದಿಂದ ಬಳಲುವಂತೆ – 105 ಡಿಗ್ರಿ – ನೀವು ನಿಮ್ಮ ಹಾಸಿಗೆಯಲ್ಲಿ ಉರುಳಾಡುತ್ತ ಸಂಕಟ ಅನುಭವಿಸುವಂತೆ. ನಂತರ ಜ್ವರ ಕಡಿಮೆಯಾಗುತ್ತದೆ – ತಾಪ 98 ಡಿಗ್ರಿ ನಾರ್ಮಲ್ ಗೆ ತಲುಪುತ್ತದೆ – ಈಗ ನೋವು ಇಲ್ಲ – ಈ ಹೊಸ ಪರಿಸ್ಥಿತಿ ನಿಮಗೆ ನಿಮ್ಮ ಬದುಕು ಅಲ್ಲ ಎಂದು ಅನಿಸುತ್ತಿದೆ, ಮೊದಲಿನ ಉನ್ಮಾದ ಈಗ ಇಲ್ಲ, ಈಗ ನೀವು ನಾರ್ಮಲ್!
Socialising ನ ಡ್ರಾಪ್ ಮಾಡಿದಾಗಲೂ ನಿಮಗೆ ಹೀಗೆಯೇ ಅನುಸುತ್ತದೆ : ಮೊದಲಿನ ಭ್ರಮಾತ್ಮಕ ಗೊಂದಲ ಈಗ ಇಲ್ಲ – ಈಗ ನೀವು ನಾರ್ಮಲ್. ಇಡೀ ದಿನ ಮಾತನಾಡುತ್ತಿರುವ, ಗಾಸಿಪ್ ಮಾಡುತ್ತಿರುವುದರ ಬದಲಾಗಿ ನೀವು ಟೆಲಿಗ್ರಾಫಿಕಲೀ ಮಾತನಾಡುತ್ತಿದ್ದೀರಿ. ಈಗ ನೀವು ಬಹಳ ಮಾತನಾಡುತ್ತಿಲ್ಲ, ನೀವು ಕೆಲವೇ ಕೆಲವು ಮಾತುಗಳ ಮನುಷ್ಯರಾಗಿದ್ದೀರಿ, ಆದರೆ ಆ ಕೆಲವು ಮಾತುಗಳು ಬಹಳ ಮಹತ್ವಪೂರ್ಣ. ಮತ್ತು ಈಗ ಕೇವಲ ನಿಜವಾದ ಸಂಬಂಧಗಳು ಮಾತ್ರ ಉಳಿದುಕೊಂಡಿವೆ.
ಸುತ್ತ ಜನ ಜಂಗುಳಿಯನ್ನು ಸೃಷ್ಟಿ ಮಾಡಿಕೊಳ್ಳುವುದು ಬೇಕಾಗಿಲ್ಲ. ಕೆಲವೇ ಕೆಲವು ಆಪ್ತ ಸಂಬಂಧಗಳು ಮಾತ್ರ ಸಾಕು, ಅವು ನಿಜವಾಗಿಯೂ fullfilling. ಆಪ್ತ ಸಂಬಂಧಗಳಿಲ್ಲದ ಕಾರಣ ಜನ ಇದಕ್ಕೆ ಪರ್ಯಾಯವೆಂಬಂತೆ ಹಲವಾರು ಸಂಬಂಧಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ. ಆದರೆ ನಿಜವಾದ ಆಪ್ತತೆಗೆ ಯಾವ ಪರ್ಯಾಯವಿಲ್ಲ. ನಿಮಗೆ ಸಾವಿರಾರು ಗೆಳೆಯರಿದ್ದರೂ ಅವರು ಒಬ್ಬ ನಿಜವಾದ ಗೆಳೆಯನಿಗೆ ಸಮ ಅಲ್ಲ. ಆದರೆ ಜನ ಕ್ವಾಲಿಟಿಗೆ ಬದಲಾಗಿ ಕ್ವಾಂಟಿಟಿಯ ಬೆನ್ನು ಹತ್ತಿದ್ದಾರೆ. ಆದರೆ ಕ್ವಾಂಟಿಟಿ ಯಾವತ್ತೂ ಕ್ವಾಲಿಟಿಗೆ ಪರ್ಯಾಯವಾಗುವುದು ಸಾಧ್ಯವಿಲ್ಲ.
“ಸಮಾಜದಲ್ಲಿ ನೈತಿಕ ಮೌಲ್ಯಗಳು ಕಡಿಮೆ ಆಗ್ತಾ ಇವೆ, ಜನರು ಪರಸ್ಪರರನ್ನು ನಂಬುತ್ತಿಲ್ಲ, ದೇವರನ್ನು ನಂಬುತ್ತಿಲ್ಲ, ಧಾರ್ಮಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿಲ್ಲ, ಈ ನೈತಿಕ ಅಧಪತನ ಕಾರಣವಾಗಿ ಜನರಲ್ಲಿ ಅಶಾಂತಿ ಹೆಚ್ಚಾಗಿದೆ. ನಿಮಗೆ ಈ ವಿವಾಹ ವಿಚ್ಛೇದನಗಳಿಗೆ ಮುಖ್ಯ ಕಾರಣ ಏನು ಅಂತ?”
ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ಧರ್ಮೋಪದೇಶಕ ಮುಂದೆ ನೆರೆದಿದ್ದ ಜನರನ್ನು ಪ್ರಶ್ನೆ ಮಾಡಿದ.
“ನನಗೆ ಗೊತ್ತು“ ಮುಂದೆ ಕುಳಿತಿದ್ದ ನಸ್ರುದ್ದೀನ್ ಕೈ ಮೇಲೆತ್ತಿದ್ದ.
“ಹಾಗಾದರೆ ಹೇಳು, ವಿವಾಹ ವಿಚ್ಛೇದನಗಳಿಗೆ ಮುಖ್ಯ ಕಾರಣ ಏನು“
ಧರ್ಮೋಪದೇಶಕ, ನಸ್ರುದ್ದೀನ್ ನನ್ನು ಕೇಳಿಕೊಂಡ.
“ಮದುವೆ ಆಗೋದು“
ನಸ್ರುದ್ದೀನ್, ವಿವಾಹ ವಿಚ್ಛೇದನಗಳಿಗೆ ತನಗೆ ಗೊತ್ತಿದ್ದ ಮುಖ್ಯ ಕಾರಣ ಹೇಳಿದ.

