ನೀವು ಖುಶಿಯಾಗಿರುವಾಗ, ಪ್ರೇಮದಲ್ಲಿರುವಾಗ , ಹಗುರಾಗಿರುವಾಗ, ಇದು ಸರಿಯಾದ ಸಮಯ, ಈಗ ಬಾಗಿಲು ನಿಮ್ಮ ಹತ್ತಿರದಲ್ಲಿಯೇ ಇದೆ. ಕೇವಲ ನೀವು ಬಾಗಿಲು ಮುಟ್ಟಿದರೆ ಸಾಕು ಅದು ಸಿದ್ಧವಾಗಿದೆ ತೆರೆದುಕೊಳ್ಳಲು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತ
ಎಷ್ಟು ಸೂಕ್ಷ್ಮ, ಎಷ್ಟು ನಿಖರ
ಸೃಷ್ಟಿಕರ್ತನೆಂದರೆ,
ಜಗತ್ತಿನ ಪ್ರತಿಯೊಂದು ಘಟನೆಯೂ
ನಿರ್ಧಾರಿತ ರೀತಿಯಲ್ಲೇ
ನಿಗದಿತ ಸಮಯದಲ್ಲೇ ಸಂಭವಿಸುವುದು.
ಒಂದು ನಿಮಿಷ ಕೂಡ
ಆಚೀಚೆ ಆಗುವ ಅವಕಾಶವಿಲ್ಲ.
ಯಾರಿಗೂ, ಯಾವುದಕ್ಕೂ
ಗಡಿಯಾರ,
ಆದ್ಯತೆಯನ್ನು ನೀಡುವುದಿಲ್ಲ
ವಂಚನೆಯನ್ನೂ ಮಾಡುವುದಿಲ್ಲ.
ಕಾಲ ಹಾಕಿದ ಗೆರೆಯನ್ನು
ಪ್ರೇಮ ಮತ್ತು ಸಾವು
ದಾಟಿದ ಉದಾಹರಣೆಗಳೇ ಇಲ್ಲ.
~ ಶಮ್ಸ್
ಬಹುತೇಕ ಇದು ಹೀಗೆಯೇ ಆಗುತ್ತದೆ, ಯಾವಾಗ ಜನ ದುಗುಡದಲ್ಲಿರುತ್ತಾರೆಯೋ, ಆತಂಕದಲ್ಲಿರುತ್ತಾರೆಯೋ, ಒತ್ತಡದಲ್ಲಿರುತ್ತಾರೆಯೋ, ನರ್ವಸ್ ಆಗಿರುತ್ತಾರೆಯೋ ಆಗಲೇ ಅವರು ಧ್ಯಾನದ ಪ್ರಯತ್ನ ಮಾಡುತ್ತಾರೆ – ಆದರೆ ಇದು ಕಠಿಣ ಸಮಯ. ಯಾವಾಗ ನೀವು ಹರ್ಟ್ ಆಗಿದ್ದೀರೋ, ಕೋಪದಲ್ಲಿದ್ದೀರೋ, ಅಥವಾ ದುಃಖದಲ್ಲಿದ್ದೀರೋ ಆಗಲೇ ನೀವು ಧ್ಯಾನದ ಬಗ್ಗೆ ಯೋಚನೆ ಮಾಡುತ್ತೀರಿ. ಆದರೆ ಇದು ಹರಿವಿನ ವಿರುದ್ಧ ಪ್ರಯಾಣ ಮಾಡಿದಂತೆ, ಬಹಳ ಕಷ್ಟಕರ.
ನೀವು ಖುಶಿಯಾಗಿರುವಾಗ, ಪ್ರೇಮದಲ್ಲಿರುವಾಗ , ಹಗುರಾಗಿರುವಾಗ, ಇದು ಸರಿಯಾದ ಸಮಯ, ಈಗ ಬಾಗಿಲು ನಿಮ್ಮ ಹತ್ತಿರದಲ್ಲಿಯೇ ಇದೆ. ಕೇವಲ ನೀವು ಬಾಗಿಲು ಮುಟ್ಟಿದರೆ ಸಾಕು ಅದು ಸಿದ್ಧವಾಗಿದೆ ತೆರೆದುಕೊಳ್ಳಲು. ಥಟ್ಟನೇ ಒಂದು ಮುಂಜಾನೆ ನಿಮಗೆ ಯಾವ ಕಾರಣವೂ ಇಲ್ಲದೇ ಒಳ್ಳೆಯ ಫೀಲ್ ಆಗುತ್ತಿದೆ. ನಿಮ್ಮ ಆಳ ಪ್ರಜ್ಞೆಯಲ್ಲಿ ಏನೋ ಬದಲಾಗಿರಬಹುದು. ನಿಮ್ಮ ಮತ್ತು ಬ್ರಹ್ಮಾಂಡದ ನಡುವೆ ಏನೋ ಒಂದು ಆಗಿರಬಹುದು, ಏನೋ ಒಂದು ಸೌಹಾರ್ದತೆ ; ಬಹುಶಃ ಇದು ರಾತ್ರಿ ಸಂಭವಿಸಿರಬಹುದು , ಆಳ ನಿದ್ರೆಯಲ್ಲಿ. ಮುಂಜಾನೆ ನಿಮಗೆ ಒಳ್ಳೆಯ ಫೀಲ್ ಆಗುತ್ತಿದೆ ; ಸಮಯವನ್ನು ವ್ಯರ್ಥ ಮಾಡಬೇಡಿ. ಈ ಸಮಯದಲ್ಲಿ ಧ್ಯಾನ ಮಾಡುವುದು ಎಷ್ಟೋ ದಿನ ದುಗುಡದಲ್ಲಿದ್ದಾಗ ಧ್ಯಾನ ಮಾಡಿದ್ದಕ್ಕಿಂತ ಹೆಚ್ಚು ಉಪಯುಕ್ತ.
ಅಥವಾ ಥಟ್ಟನೇ ನೀವು ಹಾಸಿಗೆಯ ಮೇಲೆ ಒರಗಿಕೊಂಡಿರುವಾಗ, ನಿಮಗೆ ನಿಮ್ಮ ಮನೆಯಲ್ಲಿದ್ದಷ್ಟೇ ಅದ್ಭುತ ಸಮಾಧಾನ. ಕೂಡಲೇ ಐದು ನಿಮಿಷ ಧ್ಯಾನ ಮಾಡಿ, ಸಮಯ ವ್ಯರ್ಥ ಮಾಡಬೇಡಿ. ಒಂದು ಸೌಹಾರ್ದತೆ ನಿಮ್ಮ ಸುತ್ತ ಇದೆ, ಅದನ್ನು ಉಪಯೋಗ ಮಾಡಿ, ಆ ಸೌಹಾರ್ದತೆಯ ಅಲೆಗಳನ್ನು ಏರಿ ಪ್ರಯಾಣ ಮಾಡಿ, ಈ ಅಲೆಗಳು ನಿಮ್ಮನ್ನು ನೀವು ಪ್ರಯಾಣ ಮಾಡ ಬಯಸಿರುವುದಕ್ಕಿಂತ ಹೆಚ್ಚು ಮುಂದೆ ಕರೆದೊಯ್ಯಬಲ್ಲವು. ಈ ಆನಂದಮಯ ಕ್ಷಣಗಳನ್ನು ಬಳಸುವುದನ್ನ ಕಲಿಯಿರಿ.

