ಐಕ್ಯತೆ ( Oneness ): ಓಶೋ 365 #Day 291

~ ಓಶೋ ರಜನೀಶ್; ಕನ್ನಡಕ್ಕೆ:  ಚಿದಂಬರ ನರೇಂದ್ರ

ಇಡೀ ಬ್ರಹ್ಮಾಂಡ ಅಡಗಿರುವುದು
ಒಬ್ಬನೇ ಒಬ್ಬ ಮನುಷ್ಯನಲ್ಲಿ,
ಮತ್ತು ಅದು ನೀನು.

ನೀನು ಸುತ್ತ ಕಾಣುತ್ತಿರುವ ಎಲ್ಲವೂ,
ನಿನಗೆ ಇಷ್ಟ ಆಗದ ಸಂಗತಿಗಳನ್ನೂ ಒಳಗೊಂಡು,
ನೀನು ತಿರಸ್ಕಾರದಿಂದ, ಅಸಹ್ಯವಾಗಿ ಕಾಣುವ
ಜನರನ್ನೂ ಸೇರಿಸಿ,
ಎಲ್ಲ ಒಂದಿಲ್ಲ ಒಂದು ಮಟ್ಟದಲ್ಲಿ
ನಿನ್ನೊಳಗೇ ಮನೆ ಮಾಡಿದ್ದಾರೆ.

ಸೈತಾನನಿಗಾಗಿ ಹೊರಗೆಲ್ಲೂ ಹುಡುಕಬೇಡ.

ನೀನು ನಿನ್ನನ್ನು ಪೂರ್ಣವಾಗಿ, ಪ್ರಾಮಾಣಿಕವಾಗಿ,
ಧೈರ್ಯದಿಂದ ಎದುರಗೊಂಡಾಗ,

ಸೈತಾನ, ಎಲ್ಲಿಂದಲೋ ಅಚಾನಕ್ ಆಗಿ ಬಂದು
ನಿನ್ನ ಮೇಲೆ ಆಕ್ರಮಣ ಮಾಡುವ
ಅಸಾಧಾರಣ ಶಕ್ತಿಯಲ್ಲ.
ಬದಲಾಗಿ, ನಿನ್ನೊಳಗೇ ಅಡಗಿಕೊಂಡಿರುವ
ಸಾಮಾನ್ಯ ದನಿ.

~ ಶಮ್ಸ್

ಬೇರೆ ಎಲ್ಲ ವಿಭಜನೆಗಳಂತೆಯೇ, ಹೊರಗೆ ಮತ್ತು ಒಳಗೆ ಎನ್ನುವ ವಿಭಜನೆ ಕೂಡ ಸುಳ್ಳು. ಸುಳ್ಳಾದರೂ ಇಂಥ ವಿಭಜನೆ ಇಲ್ಲದೇ ಮಾತಿನಲ್ಲಿ ವಿವರಿಸುವುದು ಕಷ್ಟ. ಆಗ ನಿಮಗೆ ಗೊತ್ತಾಗುತ್ತದೆ, ಇರುವುದು ಒಂದು ಮಾತ್ರ, ಅದಕ್ಕೆ ಯಾವ ಹೊರಗು, ಯಾವ ಒಳಗು ಇಲ್ಲ. ಇದು ಒಂದು ಮಾತ್ರ, ಮತ್ತು ಇದು ನೀವು ಎನ್ನುವುದು.

ಇಂಥ oneness ಉಪನಿಷತ್ತಿನ ಅರ್ಥ, ತತ್ವಮಸಿ ಶ್ವೇತಕೇತು – “that are thou” . that ಎಂದರೆ ಹೊರಗು ಮತ್ತು thou ಎಂದರೆ ಒಳಗು ; ಇಲ್ಲಿ ಅವು ಒಂದಾಗಿವೆ. That, thou ಆಗುತ್ತದೆ, ಮತ್ತು thou, that ಆಗುತ್ತದೆ. ಆಗ ಅಲ್ಲಿ ಯಾವ ವಿಭಜನೆಯೂ ಇಲ್ಲ

ವಿಭಜನೆ ಎನ್ನುವ ಯಾವುದೂ ಇಲ್ಲ — ಸಾವೇ ಬದುಕು ಮತ್ತು ಬದುಕೇ ಸಾವು. ಮೈಂಡ್ ಗೆ ಎಲ್ಲ ವೈರುಧ್ಯಗಳು ಒಂದು ಎನ್ನುವದನ್ನ ಗಮನಿಸುವುದು ಸಾಧ್ಯವಿಲ್ಲವಾದ್ದರಿಂದ ಈ ಎಲ್ಲ ವಿಭಜನೆಗಳು ಅಸ್ತಿತ್ವದಲ್ಲಿರುವುದು. ಮೈಂಡ್ ನ ತರ್ಕಕ್ಕೆ ಎಲ್ಲವೂ ಒಂದು ಎನ್ನುವುದನ್ನ ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಮೈಂಡ್ ಯಾವಾಗಲೂ either / or ಎನ್ನುವ ರೀತಿಯಲ್ಲಿಯೇ ಯೋಚನೆ ಮಾಡುತ್ತದೆ; ಮೈಂಡ್ ಯಾವಾಗಲೂ ಇದು ಅಥವಾ ಅದು ಎನ್ನುವ ಭಾಷೆಯಲ್ಲಿಯೇ ಮಾತನಾಡುತ್ತದೆ. ಆದರೆ ಬದುಕು ಎರಡೂ ಹೌದು, ಅಸ್ತಿತ್ವ ಎರಡೂ ಕೂಡಿಕೊಂಡು – ಇದು ಎಷ್ಟು ಒಂದು ಎಂದರೆ ಎರಡೂ ಕೂಡಿಕೊಂಡು ಒಂದಾಗಿದೆ ಎಂದು ಹೇಳುವುದು ತಪ್ಪಾಗುತ್ತದೆ. ಅಷ್ಟು ಪ್ರಚಂಡವಾದ oneness ಇದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.