ಯಶಸ್ಸಿನ 5 ವೈರಿಗಳು ಯಾವುವು ಗೊತ್ತೇ?
1.Wasting time on unproductive things ಉಪಯೋಗವಿಲ್ಲದ ಕೆಲಸಗಳಿಗೆ ಸಮಯ ಹಾಳು ಮಾಡುವುದು
2. No passion ಆಸಕ್ತಿ/ಒಲವು ಇಲ್ಲದಿರುವುದು
3.Comfort zone ಆರಾಮ ವಲಯ (ಬದಲಾವಣೆಗೆ ತೆರೆದುಕೊಳ್ಳದೆ, ಇದ್ದಲ್ಲೇ ಸುಖವಾಗಿ ಇರಲು ಬಯಸುವುದು)
4.Waiting for magic ಪವಾಡಕ್ಕಾಗಿ ಕಾಯುವುದು
5.Blaming others ಇತರರ ಮೇಲೆ ದೋಷ ಹಾಕುವುದು
ಉಪಯೋಗವಿಲ್ಲದ ಕೆಲಸಗಳಿಗೆ ಸಮಯ ಹಾಳು ಮಾಡುವುದು (Wasting time on unproductive things)
ಇವು ಸಾಧನೆಯ ಮೂಲಾಧಾರಗಳಾದ ಏಕಾಗ್ರತೆ (focus) ಮತ್ತು ಉತ್ಪಾದಕತೆಯನ್ನು (productivity) ನಾಶಪಡಿಸುತ್ತದೆ.
ಆಸಕ್ತಿ/ಒಲವು ಇಲ್ಲದಿರುವುದು (No passion)
ಇದು ಪ್ರೇರಣೆ (motivation) ಮತ್ತು ಪರಿಶ್ರಮದ (persistence) ಕೊರತೆಗೆ ಕಾರಣವಾಗುತ್ತದೆ.
ಆರಾಮ ವಲಯ (Comfort zone)
ಇದು ಬೆಳವಣಿಗೆ, ಕಲಿಕೆ ಮತ್ತು ಪ್ರಮುಖ ಪ್ರಗತಿಗೆ ಅಗತ್ಯವಾದ ರಿಸ್ಕ್ ತೆಗೆದುಕೊಳ್ಳುವುದನ್ನು ತಡೆಯುತ್ತದೆ ಹಾಗೂ ಸಾಹಸ ಪ್ರವೃತ್ತಿಯಿಂದ ದೂರ ಇಡುತ್ತದೆ.
ಪವಾಡಕ್ಕಾಗಿ ಕಾಯುವುದು (Waiting for magic)
ಯಶಸ್ಸಿಗೆ ನಿರಂತರ ಪ್ರಯತ್ನ ಮತ್ತು ತಾಳ್ಮೆ ಬೇಕು (ಫಲಿತಾಂಶಕ್ಕಿಂತ ಪ್ರಕ್ರಿಯೆ ಮುಖ್ಯ) ಎಂಬ ವಾಸ್ತವವನ್ನು ಇದು ಕಡೆಗಣಿಸುತ್ತದೆ. ಪ್ರಯತ್ನವನ್ನು ಹಿಂದಿಕ್ಕಿ ಪವಾಡಕ್ಕೆ ಪ್ರಾಮುಖ್ಯತೆ ಕೊಡುವಂತೆ ಮಾಡುತ್ತದೆ.
ಇತರರ ಮೇಲೆ ದೋಷ ಹಾಕುವುದು (Blaming others)
ಇದು ‘ನಾನು ಬಲಿಪಶು’ ಎಂಬ ಮನೋಭಾವವನ್ನು ಸೃಷ್ಟಿಸುತ್ತದೆ, ವೈಯಕ್ತಿಕ ಹೊಣೆಗಾರಿಕೆಯನ್ನು ತಡೆಯುತ್ತದೆ ಮತ್ತು ತಪ್ಪುಗಳಿಂದ ಕಲಿಯುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

