~ ಸಂಗ್ರಹ – ಅನುವಾದ: ಚೇತನಾ ತೀರ್ಥಹಳ್ಳಿ
ಅದು 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯ. ಈ ಸಂಗ್ರಾಮದಲ್ಲಿ ಮುಸ್ಲಿಮರ ಭಾಗೀದಾರಿಕೆ ಬಹಳ ಮುಖ್ಯವಾಗಿತ್ತು, ಅದರಿಂದಾಗಿ ಒಡೆದಾಳುವ ಕುನೀತಿ ಕುಸಿದು ಬಿದ್ದು ಆಂಗ್ಲರ ನಿದ್ದೆ ಕೆಟ್ಟಿತ್ತು. ಈ ಸಂಗ್ರಾಮಕ್ಕೆ ಕಾರಣರಾದವರನ್ನು ಮಟ್ಟ ಹಾಕುವ ಉದ್ದೇಶದಿಂದ ಆಂಗ್ಲರ ಸೈನಿಕರು ಅನುಮಾನಾಸ್ಪದ ನಡವಳಿಕೆಯ ಮುಸ್ಲಿಮರನ್ನೆಲ್ಲ ವಿಚಾರಣೆಗೆ ಗುರಿಪಡಿಸುತ್ತಿದ್ದರು. ಸಹಜವಾಗೇ ವಿಕ್ಷಿಪ್ತ ಕವಿ ಗಾಲಿಬ್, ಅವರ ಕಣ್ಣಿಗೆ ಬಿದ್ದ. ಅವನನ್ನು ಕರೆದೊಯ್ದು ಆಂಗ್ಲ ಅಧಿಕಾರಿ ಕರ್ನಲ್ ಬರ್ನ್ ಮುಂದೆ ನಿಲ್ಲಿಸಲಾಯ್ತು.
‘ನೀನು ಮುಸ್ಲಿಮನಾ?’ ಬರ್ನ್ ಕೇಳಿದ.
‘ಅರ್ಧದಷ್ಟು ಮಾತ್ರ’ ಗಾಲಿಬ್ ಉತ್ತರ.
‘ಅರ್ಧದಷ್ಟು? ಅರ್ಧ ಮುಸ್ಲಿಮ್ ಅಂದರೆ ಏನರ್ಥ?’
‘ನಾನು ಮದ್ಯಪಾನ ಮಾಡ್ತೀನಿ, ಆದರೆ ಹಂದಿ ಮಾಂಸ ತಿನ್ನೋದಿಲ್ಲ’ (ಮುಸ್ಲಿಮರಿಗೆ ಮದಿರೆ ಹರಾಮ್)
ಕರ್ನಲ್‌ಗೆ ನಗು ತಡೆಯಲಾಗಲಿಲ್ಲ. ಗಾಲಿಬನ ಚಾಲಾಕಿತನದ ಮುಂದೆ ವಿಚಾರಣೆ ವ್ಯರ್ಥವೆಂದು ಬಿಟ್ಟು ಕಳಿಸಿದ.

