ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
“ನೀವು ಈ ಶತಮಾನದ ಅತ್ಯಂತ ಮಹಾನ್ ಪಿಯಾನೋವಾದಕ, ಅಂತ ಜನ ಹೇಳಿದಾಗ ನಿನಗೇನನಿಸುತ್ತದೆ? ಅವರನ್ನು ನೀನು ನಂಬುತ್ತೀಯಾ?” ಸಂದರ್ಶಕನೊಬ್ಬ ಪಿಯೊನಿಸ್ಟ್ Aurther Rubinstein ನ ಕೇಳಿದಾಗ, ಅವನು ಹೇಳುತ್ತಾನೆ…
“ನಾನು ಅವರನ್ನು ನಂಬುವುದಿಲ್ಲ ಅಷ್ಟೇ ಅಲ್ಲ ಅವರ ಮೇಲೆ ನನಗೆ ವಿಪರೀತ ಸಿಟ್ಟು ಬರುತ್ತದೆ. ಏಕೆಂದರೆ ಇಂಥ ಮಾತುಗಳು ಅತ್ಯಂತ ಮೂರ್ಖತನದ ಮಾತುಗಳು. ಅತ್ಯಂತ ಮಹಾನ್ ಎನ್ನುವಂಥದು ಯಾವುದೂ ಇಲ್ಲ, ಯಾವ ಕಾಲಕ್ಕೂ ಸಂಬಂಧಿಸಿದ್ದಲ್ಲ. ಕಲೆಯಲ್ಲಿ ಅತ್ಯಂತ ಶ್ರೇಷ್ಠ ಎನ್ನುವ ಯಾವುದೂ ಇಲ್ಲ. ಕಲೆ ಕೇವಲ ವಿಭಿನ್ನವಾಗಿರಬಲ್ಲದು. ಯಾವುದೇ ಕಲಾವಿದ ಅವರು ಪೇಂಟರ್ ಆಗಿರಬಹುದು, ಶಿಲ್ಪಿಯಾಗಿರಬಹುದು, ಸಂಗೀತಗಾರನಾಗಿರಬಹುದು, ಕವಿ ಅಥವಾ ಕಲಾವಿದ ಎನ್ನುವ ಹೆಸರನ್ನು ಹೊತ್ತುಕೊಂಡಿರುವ ಯಾರೇ ಆಗಿರಬಹುದು, ಅಥವಾ ಕಲೆಗೆ ಸಂಬಂಧಿಸಿದ ಯಾರೇ ಆಗಿರಬಹುದು, ಅವರು ಯಾರನ್ನೂ ಹೋಲದ ವ್ಯಕ್ತಿತ್ವದವರಾಗಿರಬೇಕು, ಅವರು ಅವರಾಗಿರಬೇಕೋ ಹೊರತು ಬೇರೆ ಯಾರೂ ಆಗಿರಬಾರದು. ಯಾರಾದರೂ ಇವ ಅವನ ನಂತರದ ಎರಡನೇಯ ಶ್ರೇಷ್ಠ ಕಲಾವಿದ ಎಂದು ಹೇಳುತ್ತಾರಾದರೆ ಅದು ತಪ್ಪು. ಅವನು ಎರಡನೇಯವನಾದರೆ, he is no good at all. ಆಗ ಅವನು ಕೇವಲ imitator ಮಾತ್ರ. ಕಲಾವಿದ ತಾನೇ ತಾನಾಗಿರಬೇಕು, ತಾನೇ ಜಗತ್ತು ಆಗಿರಬೇಕು”.

