ಸಂಗ್ರಹ – ಅನುವಾದ ; ಚಿದಂಬರ ನರೇಂದ್ರ
ಭೌತ ಶಾಸ್ತ್ರದ ಪರಿಧಿಯಲ್ಲಿ ಸಮಯವನ್ನು ವಿವರಿಸುವಾಗ ಆರಿಸ್ಟಾಟಲ್ ಒಂದು ಒಗಟಿನಂಥ ವಿವರಣೆ ಬಳಸುತ್ತಾನೆ, ಆದರೆ ಅವನು ಈ ಒಗಟಿಗೆ ಉತ್ತರ ಹೇಳುವ ಗೋಜಿಗೆ ಹೋಗುವುದಿಲ್ಲ.
ಸಮಯವನ್ನು ಭೂತ, ವರ್ತಮಾನ ಮತ್ತು ಭವಿಷ್ಯ ಎನ್ನುವ ಮೂರು ಭಾಗಗಳಲ್ಲಿ ವಿಭಜನೆ ಮಾಡಿ. ಮತ್ತು ವರ್ತಮಾನ ಏನು ಎನ್ನುವುದರ ಬಗ್ಗೆ ಒಂದು ಕ್ಷಣ ಯೋಚನೆ ಮಾಡಿ. ವರ್ತಮಾನ ಎಷ್ಟು ಥಿಕ್ ಆಗಿದೆ? ವರ್ತಮಾನ ಎನ್ನುವುದು ಭೂತ ಮತ್ತು ಭವಿಷ್ಯಗಳ ನಡುವೆ ಇರುವ ಒಂದು ಲಿಮಿಟ್ ಮಾತ್ರ. ಆಗ ದ್ವಂದ್ವ ಶುರುವಾಗುತ್ತದೆ. ಏಕೆಂದರೆ ಭೂತ ಈಗ ಅಸ್ತಿತ್ವದಲ್ಲಿ ಇಲ್ಲ, ಆದರೆ ಆಗಿ ಹೋಗಿದ್ದು ಮಾತ್ರ ನಿಜ. ಹಾಗೆಯೇ ಭವಿಷ್ಯವೂ ಅಸ್ತಿತ್ವದಲ್ಲಿ ಇಲ್ಲ, ಆದರೆ ಖಂಡಿತ ಮುಂದೆ ಬರಲಿದೆ. ಆದ್ದರಿಂದ ವರ್ತಮಾನ ಎನ್ನುವುದು ಏನೂ ಇಲ್ಲ (nothing) . ಆದ್ದರಿಂದ ಸಮಯ ಎನ್ನುವುದು ನಥಿಂಗ್ ಡಿವೈಡೆಡ್ ಬೈ non existent ಡಿವೈಡೆಡ್ ಬೈ non existent.

