ಖುಶಿಯ ಬದಲಿಗೆ ನೋವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸೋರೇನ್ ಹುಟ್ಟು ಹಾಕಿದ ಐಡಿಯಾಗಳು ನೀಷೆ, ಸಾರ್ತ್ರೆ ಅವರನ್ನು ಪ್ರಭಾವಿಸಿದವು ಅಷ್ಟೇ ಅಲ್ಲ ಆಧುನಿಕ ಮನಶಾಸ್ತ್ರ ದ ಹುಟ್ಟಿಗೆ ಕಾರಣವಾದವು. ಕೆಲವೊಮ್ಮೆ ನೋವು ಅದ್ಭುತ ಜ್ಞಾನದ ಹುಟ್ಟಿಗೆ ಕಾರಣವಾಗುತ್ತದೆ । ಚಿದಂಬರ ನರೇಂದ್ರ
ನಿಮಗೆ ಗೊತ್ತಾ ಒಮ್ಮೆ ಒಬ್ಬ ಮನುಷ್ಯ ಮನುಷ್ಯನ ಅಸ್ತಿತ್ವದ ಅರ್ಥಗಳನ್ನು ಸಂಶೋಧಿಸಲು ತನ್ನ ಖುಶಿಯನ್ನೇ ನಾಶ ಮಾಡಿಕೊಂಡ? 1841 ರಲ್ಲಿ Soren Kierkegaard ತನ್ನ ಪ್ರೇಯಸಿಯ ಮನೆಗೆ ಹೋಗಿ ಅವಳು ತೊಡಿಸಿದ್ದ ಎಂಗೇಜ್ಮೆಂಟ್ ರಿಂಗ್ ನ ಮೌನವಾಗಿ ವಾಪಸ್ ಮಾಡಿದ. ಅವನ ಪ್ರೇಯಸಿ ವಿವರಣೆಗಾಗಿ ಪರಿಪರಿಯಾಗಿ ಬೇಡಿಕೊಂಡಳು. ಆದರೆ ಸೊರೇನ್ ಅವಳಿಗೆ ತಣ್ಣಗಿನ ಕಠಿಣ ನೋಟವನ್ನು ಬಿಟ್ಟು ಬೇರೇನೂ ಕೊಡಲಿಲ್ಲ. ಒಂದು ಇಡೀ ಬದುಕನ್ನು ಅವರಿಬ್ಬರೂ ಕೂಡಿ ಪ್ಲಾನ್ ಮಾಡಿದ್ದರು. ಆದರೆ ಸೊರೇನ್ ಇನ್ನೂ ಆಳವಾದದ್ದೇನನ್ನೋ ಬಯಸುತ್ತಿದ್ದ.
ಅವನಿಗ್ಯೋಕೋ ಮನುಷ್ಯನ ಕರಾಳ ಅನುಭವಗಳ ಮೂಲವನ್ನು ಶೋಧಿಸಲು ತನ್ನ ಆರಾಮ ಮತ್ತು ಖುಶಿ ಅಡ್ಡಗಾಲಾಗುತ್ತವೆ ಎಂದನಿಸಿತ್ತು. ನೈಜ ಬದುಕನ್ನು ಅನುಭವಿಸಲು ಸಂಪೂರ್ಣ ನೋವನ್ನು ಅಪ್ಪಿಕೊಳ್ಳಬೇಕೆನ್ನುವುದು ಅವನ ತಿಳುವಳಿಕೆಯಾಗಿತ್ತು. ಅವನು ಬೇಕೆಂದಲೇ ತನ್ನ ಪ್ರೇಯಸಿಯೊಡನೆ ಅವಳನ್ನು ಎಂದೂ ಪ್ರೀತಿಸಿಯೇ ಇರಲಿಲ್ಲವೆಂಬಂತೆ ಕ್ರೂರವಾಗಿ ನಡೆದುಕೊಳ್ಳ ತೊಡಗಿದ. ಅವನು ಪ್ರತಿದಿನ ಅವಳನ್ನು ಕೋಪನ್ ಹೆಗನ್ ನ ಬೀದಿಗಳ ಆಚೆಯಿಂದ ನಿಂತು ನೋಡುತ್ತಿದ್ದ. ಅವಳ ಒಂದೊಂದು ನೋಟಕ್ಕೂ ಅವನ ಹೃದಯ ಒಡೆದು ಚೂರುಚೂರಾಗುತ್ತ ಹೋಯಿತು. ಆದರೆ ಈ ಸ್ವಯಂ ಆವಾಹಿತ ಚಿತ್ರಹಿಂಸೆಯಿಂದಾಗಿ ಅವನಿಗೆ ಆತಂಕ, ದುಃಖ ಮತ್ತು ಮನುಷ್ಯನ ನೈಜ ಅಸ್ತಿತ್ವದ ಬಗ್ಗೆ ಅಪರೂಪದ ಒಳನೋಟಗಳು ಲಭ್ಯವಾಗುತ್ತ ಹೋದವು. ಅವನ ಒಡೆದ ಹೃದಯ ಅಸ್ತಿತ್ವವಾದಿ ತತ್ವಜ್ಞಾನದ ಫೌಂಡೇಶನ್ ಆಗಿ ಸ್ಥಾಪಿತವಾಯಿತು.
ಖುಶಿಯ ಬದಲಿಗೆ ನೋವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸೋರೇನ್ ಹುಟ್ಟು ಹಾಕಿದ ಐಡಿಯಾಗಳು ನೀಷೆ, ಸಾರ್ತ್ರೆ ಅವರನ್ನು ಪ್ರಭಾವಿಸಿದವು ಅಷ್ಟೇ ಅಲ್ಲ ಆಧುನಿಕ ಮನಶಾಸ್ತ್ರ ದ ಹುಟ್ಟಿಗೆ ಕಾರಣವಾದವು. ಕೆಲವೊಮ್ಮೆ ನೋವು ಅದ್ಭುತ ಜ್ಞಾನದ ಹುಟ್ಟಿಗೆ ಕಾರಣವಾಗುತ್ತದೆ.

