ಸಂವಾದಿ ಸಾಲುಗಳು… : Coffeehouse ಕತೆಗಳು

ಚಿದಂಬರ ನರೇಂದ್ರ

ಒಂದೇ ವಿಷಯದ ಮೇಲೆ ಪದ್ಯ ರಚಿಸುವುದು ಅಥವಾ ವೈರುಧ್ಯ ಎನ್ನುವಂತೆ, ಸಂವಾದಿ ಎನ್ನುವಂತೆ ಪದ್ಯ ರಚಿಸುವುದು ಉರ್ದು ಕವಿಗಳಲ್ಲಿ ಕಂಡುಬರುವ ಒಂದು ವಿಶೇಷ ಸಂಗತಿ. ಈ ವಿಷಯವನ್ನೇ ಗಮನಿಸಿ, ಕವಿ ಪರ್ವೀನ್ ಶಾಕಿರಾ ಅವರು ಒಂದು ಶೇರ್ ಹೀಗಿದೆ…

ಮೇರೆ ಪಾಸ್ ಸೇ ಜೋ ಗುಜರಾ, ಮೇರಾ ಹಾಲ್ ತಕ್ ನ ಪೂಛಾ
ಮೈ ಕೈಸೆ ಮಾನ್ ಜಾವೂ, ವೊಹ್ ದೂರ್ ಜಾ ಕೇ ರೋಯಾ

ಸರಳ ಅನುವಾದ….

ನನ್ನ ಹಾಯ್ದು ಹೋದವನು ವಿಚಾರಿಸಲೇ ಇಲ್ಲ ನನ್ನ ಸ್ಥಿತಿಯನ್ನು
ಹೇಗೆ ನಂಬಲಿ ಅತ್ತನೆಂದು, ದೂರ ಹೋದ ಮೇಲೆ ಅವನು.

ಈ ಪದ್ಯಕ್ಕೆ ಸಂವಾದಿಯಂಥ ಇನ್ನೊಂದು ಪದ್ಯ ಬರೆಯುತ್ತಾರೆ ಕವಿ ಫರಾಜ್ ಅಹ್ಮದ್…

ತೇರೆ ಪಾಸ್ ಸೇ ಜೋ ಗುಜರೇ ತೋ ಜುನೂನ್ ಮೇ ಥೇ ಫರಾಜ್
ಜಬ್ ದೂರ್ ಜಾ ಕೇ ಸೋಚಾ ತೋ ಜಾರ್ ಜಾರ್ ರೋಯೇ.

ಸರಳ ಅನುವಾದ

ನಿನ್ನ ಹಾಯ್ದು ಹೋಗುವಾಗ, ಹುಚ್ಚಿನಲ್ಲಿದ್ದೆ ಫರಾಜ್ ನಾನು
ದೂರ ಹೋಗಿ ಯೋಚಿಸಿ ಅತ್ತೆ, ಬಿಕ್ಕಿ ಬಿಕ್ಕಿ ಬೇಸರದಲ್ಲಿ ನಾನು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.