ದಾಸ್ತೊವಸ್ಕಿಯ ಹೆರಿಗೆ ಬೇನೆ ಮತ್ತು ಪ್ರಿನ್ಸ್ ಮಿಷ್ಕಿನ್ ಹುಟ್ಟು

ಆದರೆ ಎಷ್ಟೇ ಪ್ರಯತ್ನ ಮಾಡಿದರೂ ದಾಸ್ತೊವಸ್ಕಿಗೆ ಕಾದಂಬರಿ ಬರೆಯಲಾಗುತ್ತಿಲ್ಲ. ದಿನವೂ ಹತ್ತಾರು ಪುಟ ಬರೆದು ಹರಿದು ಹಾಕುತ್ತಿದ್ದ. ಅವನಿಗೆ ಕೊಂಚವೂ ತೃಪ್ತಿಯಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಒಂದು ದಿನ ದಾಸ್ತೊವಸ್ಕಿ ತುಂಬ ಸಿಟ್ಟಿಗೇಳುತ್ತಾನೆ, ಬರೆಯಲೆಂದು ತಂದು ಇಟ್ಟುಕೊಂಡಿದ್ದ ಪೇಪರ್ ಬಂಡಲ್ ನ ಎತ್ತಿ ತೂರಿ ಬಿಡುತ್ತಾನೆ… । ಚಿದಂಬರ ನರೇಂದ್ರ

ಸಿಂಹ ಉಪವಾಸ ಸಾಯುತ್ತದೆಯೇ ಹೊರತು ಹುಲ್ಲು ತಿನ್ನುವುದಿಲ್ಲ. ಹೀಗೆಯೇ ಸಿಂಹದ ಹಾಗೆ ಇದ್ದ ಮನುಷ್ಯ ರಷ್ಯಾದ ಮಹಾ ಕಾದಂಬರಿಕಾರ ಫಿದೋರ್ ದಾಸ್ತೊವಸ್ಕಿ. ಆತ ಯಾವತ್ತೂ ಕಾಂಪ್ರಮೈಸ್ ಮಾಡಿಕೊಳ್ಳುತ್ತಿರಲಿಲ್ಲ. ರಷ್ಯಾದಿಂದ ಬಂದ ಈ ಮನುಷ್ಯ ಈಗ ಸ್ವಿಟ್ಜರ್ ಲ್ಯಾಂಡ್ ನಲ್ಲಿ ವಾಸ ಮಾಡುತ್ತಿದ್ದ. ಇವನು ರಷ್ಯಾ ಬಿಟ್ಟು ಯುರೋಪಿಗೆ ಬಂದಿದ್ಯಾಕೆ? ಇವಾ ರಷ್ಯದಲ್ಲಿ ಬಹಳ ಸಾಲ ಮಾಡಿಕೊಂಡಿದ್ದ, ಸಾಲ ಕೊಟ್ಟವರು ಇವನನ್ನು ಸಾಲ ವಾಪಸ್ ಕೊಡುವಂತೆ ಕಾಡುತ್ತಿದ್ದರು. ಅವರೆಲ್ಲರಿಂದ ತಪ್ಪಿಸಿಕೊಂಡು ಬಂದು ಬಂದು ದಾಸ್ತೊವಸ್ಕಿ ಸ್ವಿಟ್ಜರ್ ಲ್ಯಾಂಡ್ ನಲ್ಲಿ ನೆಲೆಯಾಗಿದ್ದ.

ಆದರೆ ಇಲ್ಲಿ ಊಟ, ವಸತಿ ತುಂಬ ದುಬಾರಿ, ಹೆಂಡತಿ ಗರ್ಭಿಣಿ ಬೇರೆ. ಇಂಥ ಪರಿಸ್ಥಿತಿಯಲ್ಲಿ ಮನೆ ನಡೆಸುವುದು ಹೇಗೆ? ಮೇಲಾಗಿ ಜೂಜಾಡುವ ಚಟ ಬೇರೆ ಇವನಿಗೆ. ಮೇಲಿಂದ ಮೇಲೆ ಜೂಜಿನಲ್ಲಿ ಹಣ ಕಳೆದುಕೊಳ್ಳುತ್ತಿದ್ದ. ಕೆಲವೊಮ್ಮೆ ಗೆಳೆಯರಿಂದ ಒಮ್ಮೊಮ್ಮೆ ತನ್ನ ಅತ್ತೆಯಿಂದ ಹಣ ಇಸಿದುಕೊಳ್ಳುತ್ತಿದ್ದ. ಆದರೆ ಜನ ಎಲ್ಲಿಯವರೆಗೆ ಹಣ ಕೊಡುತ್ತಾರೆ? ಜನ ಇವನಿಂದ ತಪ್ಪಿಸಿಕೊಂಡು ಓಡಾಡತೊಡಗಿದರು.

ಆಗ ದಾಸ್ತೊವಸ್ಕಿ ತನ್ನ ಪಬ್ಲಿಷರ್ ಬಳಿಗೆ ಹೋಗುತ್ತಾನೆ, ನನ್ನ ಬಳಿ ಒಂದು ಹೊಸ ಐಡಿಯಾ ಇದೆ, ಹೊಸ ಕಾದಂಬರಿ ಬರೆದುಕೊಡಿತೀನಿ ಅಡ್ವಾನ್ಸ್ ಕೊಡಿ ಅಂತ ಕೇಳಿಕೊಳ್ಳುತ್ತಾನೆ. ದಾಸ್ತೊವಸ್ಕಿಯ ಟ್ರ್ಯಾಕ್ ರಿಕಾರ್ಡ್ ಚೆನ್ನಾಗಿತ್ತು, ಅವನ ಹಿಂದಿನ ಪುಸ್ತಕಗಳು ಪ್ರಸಿದ್ಧವಾಗಿದ್ದವು. ಪಬ್ಲಿಷರ್ ದಾಸ್ತೊವಸ್ಕಿಯ ಮಾತು ನಂಬಿ ಅವನಿಗೆ ಹಣ ಕೊಡುತ್ತಾನೆ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ದಾಸ್ತೊವಸ್ಕಿಗೆ ಕಾದಂಬರಿ ಬರೆಯಲಾಗುತ್ತಿಲ್ಲ. ದಿನವೂ ಹತ್ತಾರು ಪುಟ ಬರೆದು ಹರಿದು ಹಾಕುತ್ತಿದ್ದ. ಅವನಿಗೆ ಕೊಂಚವೂ ತೃಪ್ತಿಯಾಗುತ್ತಿಲ್ಲ. ಅವನ ಸಂಕಟ ನೋಡಿ ಹೆಂಡತಿ ಪ್ರಶ್ನೆ ಮಾಡುತ್ತಾಳೆ, “ಏನಾಗಿದೆ ನಿನಗೆ ಯಾಕೆ ಹೀಗಾಗಿದ್ದೀಯ? ಯಾಕೆ ನೀನು ಏನೂ ಬರೆಯುತ್ತಿಲ್ಲ? ಮೊದಲೆಲ್ಲ ರಾತ್ರಿಯೆಲ್ಲ ಕುಳಿತು ಬರೆಯುತ್ತಿದ್ದೆ, ಈಗ ಯಾಕೆ ನಿನಗೆ ಬರೆಯಲಾಗುತ್ತಿಲ್ಲ?”

ಪರಿಸ್ಥಿತಿ ಹೀಗಿರುವಾಗ ಒಂದು ದಿನ ದಾಸ್ತೊವಸ್ಕಿ ತುಂಬ ಸಿಟ್ಟಿಗೇಳುತ್ತಾನೆ, ಬರೆಯಲೆಂದು ತಂದು ಇಟ್ಟುಕೊಂಡಿದ್ದ ಪೇಪರ್ ಬಂಡಲ್ ನ ಎತ್ತಿ ತೂರಿ ಬಿಡುತ್ತಾನೆ. “ಏನಾದರೂ ಬರೆದು ಬಿಡಲಾ? ಉಪವಾಸ ಇರುತ್ತೇವೆಯೇ ಹೊರತು ಕಳಪೆ ಏನನ್ನೂ ಬರೆಯುವುದಿಲ್ಲ. ಯಾವುದಾದರೂ ಅದ್ಭುತ ಐಡಿಯಾ ಬಂದಾಗ ಮಾತ್ರ ಬರೀತಿನಿ”. ದಾಸ್ತೊವಸ್ಕಿ ಹೆಂಡತಿಯ ಮೇಲೆ ಕೂಗಾಡುತ್ತಾನೆ.

ಮರುದಿನ ಹೆಂಡತಿಗೆ, ಕೋಣೆಯಲ್ಲಿ ಮೊಣಕಾಲ ಮೇಲೆ ಕೂತು ತನ್ನ ಎರಡೂ ಕೈಗಳನು ಮೇಲಕ್ಕೆತ್ತಿ ಕುಳಿತ ದಾಸ್ತೊವಸ್ಕಿಯನ್ನು ನೋಡಿ ಆಶ್ಚರ್ಯವಾಗುತ್ತದೆ. ಕೋಣೆಯಿಂದ ಹೊರಬಂದವನೇ, ಕಾದಂಬರಿಯ ಪ್ಲಾಟ್ ಸಿಕ್ಕಿತು, ತುಂಬ ಶುದ್ಧ, ತುಂಬ ಮುಗ್ಧ, ಯಾರಲ್ಲಿ ಯಾವ ಕೇಡೂ ಇಲ್ಲವೂ ಅಂಥ ಮನುಷ್ಯನೊಬ್ಬನ ಬಗ್ಗೆ ಕಾದಂಬರಿ ಬರೀತಿನಿ ಅಂತ ಹೆಂಡತಿಗೆ ಹೇಳ್ತಾನೆ ದಾಸ್ತೊವಸ್ಕಿ. ಆ ಕಾದಂಬರಿಯ ಕಥಾನಾಯಕನೇ ಪ್ರಿನ್ಸ್ ಮಿಷ್ಕಿನ್ ಮತ್ತು ಆ ಕಾದಂಬರಿಯ ಹೆಸರು The Idiot.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.