ಸಾಖಿ ಸೇರು, ಫರಾಜ್ ಸವಾ ಸೇರು! : Coffeehouse ಕತೆಗಳು

ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಒಮ್ಮೆ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ ಖ್ಯಾತ ಉರ್ದು ಕವಯಿತ್ರಿ ಝೆಹ್ರಾ ನಿಗಾಹ್ ಅವರ ಮನೆಯಲ್ಲೊಂದು ಪಾರ್ಟಿ ಏರ್ಪಾಡಾಗಿತ್ತು. ಅಂದಿನ ಘಟಾನುಘಟಿ ಕವಿಗಳೆಲ್ಲ ಅಂದಿನ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಖ್ಯಾತ ಬ್ರಿಟಿಷ್-ಪಾಕಿಸ್ತಾನಿ ಕವಿ ಸಾಖಿ ಫಾರೂಕಿ ಕೂಡ ಅಂದಿನ ಪಾರ್ಟಿಯಲ್ಲಿದ್ದರು. ಪಾರ್ಟಿ ಮುಗಿದ ಮೇಲೆ ಕವಿ ಫರಾಜ್ ರನ್ನ ಕಾರಿನಲ್ಲಿ ಮನೆ ತಲುಪಿಸುವಂತೆ ಝೆಹ್ರಾ, ಸಾಖಿ ಫಾರೂಕಿ ಅವರನ್ನು ಕೇಳಿಕೊಳ್ಳುತ್ತಾರೆ. ಅಂದು ತಮಾಷೆ ಮೂಡ್ ನಲ್ಲಿದ್ದ ಫಾರೂಕಿ, “ ನಾನು ಫರಾಜ್ ರನ್ನ ಡ್ರಾಪ್ ಮಾಡಲಿಕ್ಕಾಗೋದಿಲ್ಲ, ಏಕೆಂದರೆ ಕೆಟ್ಟ ಕವಿಗಳು ನನ್ನ ಕಾರಿನಲ್ಲಿ ಕುಳಿತರೆ, ನನ್ನ ಕಾರಿನ ಚಕ್ರ ಅಲ್ಲಾಡುತ್ತವೆ”, ಅಂತ ಜೋಕ್ ಮಾಡುತ್ತಾರೆ.

ಈ ಮಾತು ಕೇಳುತ್ತಿದ್ದಂತೆಯೇ ಹಿಂದೆ ನಿಂತಿದ್ದ ಕವಿ ಫೈಜ್ ಹೇಳುತ್ತಾರೆ, “ಗಾಡಿ ಜಲ್ದಿ ಬದಲ್ ಲೋ ಸಾಖಿ, ತುಂ ಇಸ್ ಮೇ ಆವೋ ಜಾವೋಗೆ ತೋ ಹಮೇ ಫಿಕ್ರ್ ಲಗೀ ರಹೇಗಿ” ( ಆದಷ್ಟು ಬೇಗ ಗಾಡಿ ಬದಲಾಯಿಸು ಸಾಖಿ, ನೀನು ಇಂಥ ಗಾಡಿಯಲ್ಲಿ ಓಡಾಡ್ತಾ ಇದ್ರೆ ನಮಗೆ ಚಿಂತೆ ಆಗ್ತದೆ)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.