ಅಮೆಥಿಯಾ ಅಂದ್ರೆ ಜಾಣ-ಮೂರ್ಖತನ

ಯಾವಾಗ ನೀವು, ನಿಮಗೆ ಸಂಗತಿಗಳ ಬಗ್ಗೆ ಪೂರ್ಣ ಜ್ಞಾನ ಇದೆಯೆಂದು ಒಪ್ಪಿಕೊಂಡು ಬಿಡುತ್ತೀರೋ ಆಗ ನಿಮ್ಮ ಮೆದಳು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ. ಮತ್ತು ಈ ಕಾರಣವಾಗಿಯೇ ಜಾಣ ಜನರು ಮೂರ್ಖ ಸಂಗತಿಗಳನ್ನು ನಂಬಲು ಶುರು ಮಾಡುತ್ತಾರೆ ಅನ್ನುತ್ತಾನೆ ತತ್ವಶಾಸ್ತ್ರಜ್ಞ ಕಾರ್ಲ್ ಹೂಪರ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ಅತ್ಯಂತ ಮೂರ್ಖ ಸಂಗತಿಗಳಲ್ಲಿ ಅಪಾರ ವಿಶ್ವಾಸ ಹೊಂದಿರುವ ಜಾಣ ಜನರನ್ನು ನೀವು ಬದುಕಿನಲ್ಲಿ ಗಮನಿಸರಬಹುದು. ಪುರಾತನ ಗ್ರೀಕರು ಇಂಥ ಜನರನ್ನು ಗುರುತಿಸಲು ಒಂದು ಪದ ಬಳಸುತ್ತಿದ್ದರು, ಅಮೆಥಿಯಾ (Amathia ). ಬಹಳಷ್ಟು ಜನರಿಗೆ ಅಮೆಥಿಯಾ ದ ಅರ್ಥ ಅಜ್ಞಾನ ಅನಿಸಬಹುದು , ಮೂರ್ಖತನ ಅನಿಸಬಹುದು ಆದರೆ, ಅಮೆಥಿಯಾ ದ ನಿಜವಾದ ಅರ್ಥ ಜಾಣ-ಮೂರ್ಖತನ (intelligent stupidity). ಅಮೆಥಿಯಾ ಜನರು ಯೋಚಿಸುವ ಶಕ್ತಿಯುಳ್ಳವರು ಆದರೆ ಅವರು ಯೋಚಿಸಲು ಬಯಸುವುದೇ ಇಲ್ಲ.

ಸಾಕ್ರೆಟಿಸ್ ನ ಪ್ರಕಾರ, ಅಮೆಥಿಯಾದ ಕಾರಣವಾಗಿಯೇ ಈ ಜಗತ್ತಿನಲ್ಲಿ ಎಲ್ಲ ಕೆಟ್ಟ ಸಂಗತಿಗಳು ಸಂಭವಿಸುತ್ತಿರುವುದು. ಸಾಕ್ರೇಟಿಸ್ ಹೇಳುತ್ತಿದ್ದ ಈ ಜಗತ್ತಿನಲ್ಲಿ ಇರುವ ಒಂದೇ ಒಳ್ಳೆಯ ಸಂಗತಿಯೆಂದರೆ ಜ್ಞಾನ ಮತ್ತು ಒಂದೇ ಒಂದು ಕೆಟ್ಟ ಸಂಗತಿಯೆಂದರೆ ಅದು ಅಜ್ಞಾನ. ಸಾಕ್ರೆಟಿಸ್, Alcibiades ಥರದ ಜನರ ಬಗ್ಗೆ ಹೇಳುತ್ತಾನೆ, ಇವರು ಸ್ಮಾರ್ಟ್ ಆಗಿರುತ್ತಾರೆ, ಶಿಕ್ಷಿತರಾಗಿರುತ್ತಾರೆ, ಪಾವರ್ ಫುಲ್ ಆಗಿರುತ್ತಾರೆ ಆದರೆ ಪೂರ್ಣ ರೀತಿಯಲ್ಲಿ ಕಳೆದು ಹೋಗಿರುತ್ತಾರೆ. Alcibiades ಒಬ್ಬ ಪ್ರಸಿದ್ಧ ರಾಜಕಾರಣಿಯಾಗಿದ್ದ. ಜನ ಅವನ ಆತ್ಮವಿಶ್ವಾಸ, ಮಹಾತ್ವಾಕಾಂಕ್ಷೆಯನ್ನು ಬಹಳ ಗೌರವಿಸುತ್ತಿದ್ದರು. ಆದರೆ ಸಾಕ್ರೆಟಿಸ್, ಅವನೊಳಗೆ ಒಂದು ಭಯಾನಕ ಸಂಗತಿಯನ್ನು ಗಮನಿಸಿದ್ದ. ಅವನಿಗೆ ತನ್ನ ಜ್ಞಾನದ ಬಗ್ಗೆ ಅವನಿಗಿದ್ದ ಭ್ರಮೆ, the illusion of wisdom.

Alcibiades ಬಹಳ ಜಾಣ ಮನುಷ್ಯನಾಗಿದ್ದ, ಅವನು ಯಾವ ವಿಷಯದ ಮೇಲೂ ವಾದ ಮಾಡುವ ಸಾಮರ್ಥ್ಯವುಳ್ಳವನಾಗಿದ್ದ. ಆದರೆ ಅವನು ಯಾವತ್ತೂ ತನ್ನನ್ನು ತಾನು ಪ್ರಶ್ನೆ ಮಾಡಿಕೊಳ್ಳಲೇ ಇಲ್ಲ. ಸಾಕ್ರೆಟಿಸ್ ನ ಪ್ರಕಾರ ಇಂಥ ಜನರೇ ಅಮೇಥಿಯಾದ ಕೇಂದ್ರ ವ್ಯಕ್ತಿಗಳು. ಇವರ ಬುದ್ಧಿಯೇನೋ ಕೆಲಸ ಮಾಡುತ್ತಿರುತ್ತದೆ ಆದರೆ ಆತ್ಮ ಕುರುಡಾಗಿಬಿಟ್ಟಿರುತ್ತದೆ.

ಆಧುನಿಕ ತತ್ವಶಾಸ್ತ್ರಜ್ಞ ಕಾರ್ಲ್ ಹೂಪರ್ ಕೂಡ ಇದೇ ಸಂಗತಿಯ ಬಗ್ಗೆ ಒತ್ತಿ ಹೇಳುತ್ತಾನೆ. ಅವನ ಪ್ರಕಾರ ಜ್ಞಾನದ ಅತ್ಯಂತ ಪ್ರಬಲ ವೈರಿ ಅಜ್ಞಾನ ಅಲ್ಲ, ಬದಲಾಗಿ ಅದು ಜ್ಞಾನದ ಕುರಿತಾದ ಭ್ರಮೆ. ಯಾವಾಗ ನೀವು, ನಿಮಗೆ ಸಂಗತಿಗಳ ಬಗ್ಗೆ ಪೂರ್ಣ ಜ್ಞಾನ ಇದೆಯೆಂದು ಒಪ್ಪಿಕೊಂಡು ಬಿಡುತ್ತೀರೋ ಆಗ ನಿಮ್ಮ ಮೆದಳು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ. ಮತ್ತು ಈ ಕಾರಣವಾಗಿಯೇ ಜಾಣ ಜನರು ಮೂರ್ಖ ಸಂಗತಿಗಳನ್ನು ನಂಬಲು ಶುರು ಮಾಡುತ್ತಾರೆ. ತಾವು ತಪ್ಪಾಗಿರಬಹುದು ಎಂದು ಅವರು ಯೋಚಿಸಲು ಶುರು ಮಾಡಿದರೆ ಅವರ ಅಹಂ ಗೆ ಪೆಟ್ಟು ಬೀಳುತ್ತದೆ. ಆದ್ದರಿಂದ ಅವರು ತಮ್ಮ ಯೋಚನಾ ಸಾಮರ್ಥ್ಯವನ್ನು ಕ್ಲೋಸ್ ಮಾಡಿ ಇಟ್ಟುಕೊಂಡಿರುತ್ತಾರೆ.

ಮತ್ತು ಅಪಾಯಕಾರಿ ವಿಷಯವೆಂದರೆ ಅಮೇಥಿಯಾನ್ನ ತರ್ಕ, ಸಂವಾದಗಳಿಂದ ಸರಿ ಮಾಡುವುದು ಅಸಾಧ್ಯ. ಏಕೆಂದರೆ ಆ ವ್ಯಕ್ತಿಯ ಬಳಿ ವಿಷಯ ಜ್ಞಾನದ ಕೊರತೆಯಿಲ್ಲ ಆದರೆ ಅವನು ಅದರ ಸರಿ ಉಪಯೋಗ ಮಾಡಿಕೊಳ್ಳುತ್ತಿಲ್ಲ ಅಷ್ಟೇ. ಅವನ ಲಾಜಿಕ್, ಅವನ ಅಹಂ, ಅವನ ಐಡಿಯಾಲೊಜಿಯನ್ನೇ satisfy ಮಾಡಲು ಶುರು ಮಾಡುತ್ತದೆ. ತನ್ನ ತಪ್ಪು ಒಪ್ಪಿಕೊಂಡರೇ ಎಲ್ಲಿ ತನ್ನ ವ್ಯಕ್ತಿತ್ವವನ್ನೇ ಕಳೆದುಕೊಂಡು ಬಿಡುತ್ತೇನೋ ಎನ್ನುವ ಭಯ ಅವನೊಳಗೆ ಶುರುವಾಗುತ್ತದೆ. ಆಗ ಅವನು ತನ್ನ ಕಂಫರ್ಟ್ ಝೋನ್ ಗೆ ಹೋಗಿ ತನ್ನನ್ನೇ ಡಿಫೆಂಡ್ ಮಾಡಿಕೊಳ್ಳಲು ಶುರು ಮಾಡುತ್ತಾನೆ.

ಪ್ರತಿಯೊಂದು ಕಾಲದಲ್ಲೂ ಅಮೇಥಿಯಾ ಹೊಸ ಚೆಹರೆಯೊಂದಿಗೆ ಆಗಮಿಸುತ್ತದೆ. ಹಿಂದೆ ಜನ ಜಾತಿ ಶ್ರೇಷ್ಠತೆಯ ಹುಸಿ ಆಧಾರದ ಮೇಲೆ ಭೇದ ಭಾವ ಮಾಡುತ್ತಿದ್ದರು, ಈಗಿನ ಕಾಲದಲ್ಲಿ ಜನ internet ಕಾರಣವಾಗಿ ತಮಗೆ ಎಲ್ಲ ಗೊತ್ತು ಎನ್ನುವ ಭ್ರಮೆಯಲ್ಲಿದ್ದಾರೆ, ಅವರಿಗೆ ವಿಷಯ ಜ್ಞಾನವೇನೋ ಇದೆ ಆದರೆ ಸಂಗತಿಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲವಾದ್ದರಿಂದ ಅಪಾಯಕಾರಿ ಸಂಗತಿಗಳಿಗೆ ತಮ್ಮನ್ನು ತೆರೆದುಕೊಂಡಿದ್ದಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.