ಬ್ಲಾಕ್ ಕಾಫಿ ಥಿಯರಿ ಅಂದ್ರೇನು ಗೊತ್ತಾ?

ಕನ್ನಡಕ್ಕೆ: ಚಿದಂಬರ ನರೇಂದ್ರ

ನಿಮಗೆ Black coffee theory ಯ ಬಗ್ಗೆ ಗೊತ್ತಾ?

ಒಮ್ಮೆ ಒಬ್ಬ ವ್ಯಕ್ತಿ ಒಂದು ಕಾಫೀ ಶಾಪ್ ಗೆ ಬರುತ್ತಾನೆ. “ಸರ್ ಏನು ಬೇಕು ನಿಮಗೆ?, ಏನು ತರಲಿ ನಿಮಗೆ? ” ವೇಟರ್ ಬಂದು ಕೇಳಿದಾಗ, ಆ ವ್ಯಕ್ತಿ ಉತ್ತರಿಸಿತ್ತಾನೆ….

“ನನಗೆ ಬ್ಲ್ಯಾಕ್ ಕಾಫೀ ತೆಗೆದುಕೊಂಡು ಬರಬೇಡ”

“ಸರಿ ಸರ್, ಹಾಗೇ ಆಗಲಿ. ಆದರೆ ನಿಮಗೆ ಏನು ಬೇಕು?” ವೇಟರ್ ಮತ್ತೆ ಪ್ರಶ್ನೆ ಮಾಡುತ್ತಾನೆ.

“ನನಗೆ ಬ್ಲ್ಯಾಕ್ ಕಾಫೀ ತೆಗೆದುಕೊಂಡು ಬರಬೇಡ, ಅಷ್ಟೇ” ಆ ವ್ಯಕ್ತಿ ಮತ್ತೆ ಹೇಳುತ್ತಾನೆ.

“ಖಂಡಿತ ಸರ್,ನಿಮಗೆ ಏನು ಬೇಕು ಹೇಳಿ” ವೇಟರ್ ಮತ್ತೆ ಕೇಳುತ್ತಾನೆ.

“ನನಗೆ ಬ್ಲ್ಯಾಕ್ ಕಾಫೀ ತೆಗೆದುಕೊಂಡು ಬರಬೇಡ” ಆ ವ್ಯಕ್ತಿಯಿಂದ ಮತ್ತೆ ಅದೇ ಉತ್ತರ.

ವೇಟರ್, ಮತ್ತೆ ಹಲವು ಬಾರಿ ನಿಮಗೆ ಏನು ಬೇಕೆಂದು ಕೇಳಿದರೂ, ಆ ವ್ಯಕ್ತಿ ಒಮ್ಮೆ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾನೆ, “ನನಗೆ ಬ್ಲ್ಯಾಕ್ ಕಾಫೀ ತೆಗೆದುಕೊಂಡು ಬರಬೇಡ”

ಕೊನೆಗೆ ನಿರಾಶನಾಗಿ ವೇಟರ್ ಆ ವ್ಯಕ್ತಿಯನ್ನು ನಿರ್ಲಕ್ಷಿಸಿ ಬೇರೊಂದು ಟೇಬಲ್ ಗೆ ಸರ್ವ್ ಮಾಡಲು ಹೋಗುತ್ತಾನೆ.

ಈಗ ಆ ವ್ಯಕ್ತಿಯ ಜಾಗದಲ್ಲಿ ನಿಮ್ಮನ್ನು ಇಟ್ಟು ಮತ್ತು ಆ ವೇಟರ್ ನ ಜಾಗದಲ್ಲಿ ಯೂನಿವರ್ಸ್ ನ ಇಟ್ಟು ನೋಡಿ. ನಾವು ಯೂನಿವರ್ಸ್ ನ ನಮ್ಮ ನೆಗೆಟಿವ್ ವಿಶ್ ಗಳಿಂದ ಎಷ್ಟು ಗೊಂದಲಕ್ಕೆ ದೂಡಿರುತ್ತೇವೆ ಗಮನಿಸಿ. ನಮಗೆ ಏನು ಬೇಕು ಎನ್ನುವುದರ ಬಗ್ಗೆ ನಮ್ಮೊಳಗೆ ಸ್ಪಷ್ಟತೆ ಇರುವುದಿಲ್ಲ. ನಿಮಗೆ ಗೊತ್ತಾ ಯೂನಿವರ್ಸ್ ಗೆ “ಬೇಡ” ( No ) ಎನ್ನುವ ಪದ ಅರ್ಥವಾಗುವುದಿಲ್ಲ. ನೀವು ಯಾವುದರ ಮೇಲೆ ಫೋಕಸ್ ಮಾಡುತ್ತೀರೋ, ಯೂನಿವರ್ಸ್ ಗೆ ಅದು ಮಾತ್ರ ಅರ್ಥ ಆಗುತ್ತದೆ.

“ನನಗೆ ಸಮಸ್ಯೆಗಳು ಬೇಡ” ಎಂದು ನೀವು ಯೂನಿವರ್ಸ್ ಗೆ ಹೇಳಿದರೆ ಅದು ನಿಮಗೆ ಸಮಸ್ಯೆಗಳನ್ನೇ ಕೊಡುತ್ತದೆ. “ಆ ವ್ಯಕ್ತಿ ನನ್ನ ಬಿಟ್ಟು ಹೋಗಬಾರದು” ಎಂದು ನೀವು ಬೇಡಿದರೆ, ಖಂಡಿತ ಆ ವ್ಯಕ್ತಿ ನಿಮ್ಮನ್ನು ಬಿಟ್ಟು ಹೋಗುತ್ತಾರೆ. ನೀವು “ನನಗೆ ಸ್ಟ್ರೆಸ್ ಬೇಡ” ಎಂದರೆ ಬದುಕಿನಲ್ಲಿ ನೀವು ಹೆಚ್ಚು ಸ್ಟ್ರೆಸ್ ನ attract ಮಾಡುತ್ತೀರಿ.

ನಿಜವಾಗಿ ನಿಮಗೆ ಏನಾದರೂ ಬೇಕಿದ್ದರೆ, ನಿಮಗೆ ಏನು ಬೇಕೋ ಅದನ್ನು ಸ್ಪಷ್ಟವಾಗಿ ಕೇಳಿ, ಏನು ಬೇಡ ಅಂತ ಹೇಳಬೇಡಿ. ನಿಮಗೆ ಸ್ಟ್ರೆಸ್ ಬೇಡ ಎಂದು ಕೇಳಬೇಡಿ, ನಿಮಗೆ ಶಾಂತಿ ಬೇಕು ಎಂದು ಕೇಳಿ. ನಿಮಗೆ ನೋವು ಬೇಡ ಎಂದು ಕೇಳಬೇಡಿ, ಬದಲಾಗಿ ನಿಮಗೆ ಸಮಾಧಾನ ಬೇಕು ಎಂದು ಕೇಳಿ. ಯೂನಿವರ್ಸ್ ಗೆ ನಿಮ್ಮ ನಕಾರಾತ್ಮಕತೆ ಅರ್ಥ ಆಗೋದಿಲ್ಲ. ಅದು ನೀವು ಯಾವುದರ ಮೇಲೆ ಫೋಕಸ್ ಮಾಡುತ್ತಿದ್ದೀರೋ ನಿಮಗೆ ಅದನ್ನೇ ಕೊಡುತ್ತದೆ. ಆದ್ದರಿಂದ ಏನು ಬೇಡ ಎಂದು ಕೇಳಬೇಡಿ, ಬದಲಾಗಿ ನಿಮಗೆ ಏನು ಬೇಕೋ ಅದನ್ನು ಕೇಳಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.