ಬೌದ್ಧ ತತ್ವಜ್ಞಾನಿ ನಾಗಾರ್ಜುನ ಒಂದು ಸರಳ ಪ್ರಶ್ನೆಯನ್ನು ಕೇಳುತ್ತ ಈ ಲಾಜಿಕ್ ನ ನಾಶ ಮಾಡಿಬಿಡುತ್ತಾನೆ. ನಾಗಾರ್ಜುನ ನ ಪ್ರಶ್ನೆ ಏನೆಂದರೆ ಈ ವರ್ತಮಾನಕ್ಕೆ ತನ್ನದೇ ಆದ ಅಸ್ತಿತ್ವ ಇದೆಯಾ ಅಥವಾ ಅದು ಭೂತ ಮತ್ತು ಭವಿಷ್ಯದ ಮೇಲೆ ಡಿಪೆಂಡ್ ಆಗಿದೆಯಾ? |ಕನ್ನಡಕ್ಕೆ: ಚಿದಂಬರ ನರೇಂದ್ರ
ಸಮಯ, ನಾವು ಹೇಗೆ ಯೋಚನೆ ಮಾಡುತ್ತೇವೆಯೋ ಹಾಗೆ ಇರುವುದಿಲ್ಲ. ಸಮಯ ಯಾವತ್ತೂ ಮುಂದೆ ಸಾಗುತ್ತದೆ ಎನ್ನುವುದು ನಮ್ಮ ತಿಳುವಳಿಕೆ. ಭೂತ, ವರ್ತಮಾನವಾಗುತ್ತದೆ ಮತ್ತು ವರ್ತಮಾನ ಭವಿಷ್ಯದತ್ತ. ಸಮಯದ ಬಗ್ಗೆ ಬಹಳ ಚೆನ್ನಾಗಿ ತಿಳಿದುಕೊಂಡಿದ್ದೇವೆ ಎನ್ನುವುದು ನಮ್ಮ ಅನಿಸಿಕೆ.
ಆದರೆ ಬೌದ್ಧ ತತ್ವಜ್ಞಾನಿ ನಾಗಾರ್ಜುನ ಒಂದು ಸರಳ ಪ್ರಶ್ನೆಯನ್ನು ಕೇಳುತ್ತ ಈ ಲಾಜಿಕ್ ನ ನಾಶ ಮಾಡಿಬಿಡುತ್ತಾನೆ. ನಾಗಾರ್ಜುನ ನ ಪ್ರಶ್ನೆ ಏನೆಂದರೆ ಈ ವರ್ತಮಾನಕ್ಕೆ ತನ್ನದೇ ಆದ ಅಸ್ತಿತ್ವ ಇದೆಯಾ ಅಥವಾ ಅದು ಭೂತ ಮತ್ತು ಭವಿಷ್ಯದ ಮೇಲೆ ಡಿಪೆಂಡ್ ಆಗಿದೆಯಾ? ಒಮ್ಮೆ ಯೋಚಿಸಿ ನೋಡಿ ನೀವು ವರ್ತಮಾನವನ್ನು ಭೂತ ಮತ್ತು ಭವಿಷ್ಯ ವ ಬಗ್ಗೆ ಹೇಳದೇ ವ್ಯಾಖ್ಯಾನಿಸಬಹುದೆ? ವರ್ತಮಾನ, ಭೂತದ ನಂತರ ಮತ್ತು ಭವಿಷ್ಯಕ್ಕಿಂತ ಮೊದಲು ಸಂಭವಿಸುವ ಸಂಗತಿ. ಹಾಗೆಂದ ಮೇಲೆ ವರ್ತಮಾನ, ಭೂತ ಮತ್ತು ವರ್ತಮಾನವನ್ನು ಅವಲಂಬಿಸಿದೆ ಎಂದಂತಾಯ್ತು. ಹಾಗಾದರೆ ಭೂತ ತನ್ನ ಕಾಲಮೇಲೆ ನಿಂತುಕೊಂಡಿದೆಯಾ? ಇಲ್ಲ . ಭೂತ, ಭೂತವಾಗೋದು ವರ್ತಮಾನ ಬಂದಾಗ ಮಾತ್ರ. ಹಾಗಾಗಿ ವರ್ತಮಾನವಿಲ್ಲದೆ ಭೂತವನ್ನು ಹಿಂದೆ ತಿರುಗಿ ನೋಡುವುದು ಸಾಧ್ಯವಿಲ್ಲ. ಈ ಸಮಸ್ಯೆಯೇ ಭವಿಷ್ಯದ ಜೊತೆಗೂ ಇರುವಂಥದು.
ಭವಿಷ್ಯ, ಭವಿಷ್ಯವಾಗೋದು ವರ್ತಮಾನ ಅದನ್ನು ಕಾಯುತ್ತ ಕುಳಿತಿರುವಾಗ ಮಾತ್ರ. ಆದ್ದರಿಂದ ವರ್ತಮಾನ, ಭೂತದ ಮೇಲೆ ಅವಲಂಬಿತವಾಗಿದ್ದರೆ, ಭೂತ, ವರ್ತಮಾನವನ್ನು ಅವಲಂಬಿಸಿದೆ. ಈ ಮೂರು ಕೂಡ ಒಂದನ್ನೊಂದು ಅವಲಂಬಿಸಿವೆ. ಆದ್ದರಿಂದ ಯಾವುದಕ್ಕೂ ಸ್ವತಂತ್ರ ಅಸ್ತಿತ್ವ ಇಲ್ಲ. ನಾಗಾರ್ಜುನ ಇದನ್ನೇ ಶೂನ್ಯ, ಖಾಲೀತನ ಎಂದು ವಿವರಿಸಿದ. ಸ್ವತಂತ್ರ ವಾಸ್ತವದ ಖಾಲೀತನ.
ಮತ್ತು ಇನ್ನೊಂದು ಸಂಗತಿ, ಸಮಯದ ಅರ್ಥ ಏನು? ಸಮಯದಿಂದ ನೀವು ಸೆಕೆಂಡ್, ನಿಮಿಷ, ಗಂಟೆ, ದಿನವನ್ನ ತೆಗೆದು ಹಾಕಿಬಿಟ್ಟರೆ, ನೀವು ಸಮಯದತ್ತ ಬೆರಳು ಮಾಡಿ ಇದು ಸಮಯ ಎಂದು ಹೇಳುವುದು ನಿಮಗೆ ಸಾಧ್ಯವಾಗುತ್ತದೆಯೇ? ಈ ಮಾಪನಗಳಿಂದ ಸಮಯವನ್ನು ಬೇರೆ ಮಾಡಿ ನೋಡುವುದು ಸಾಧ್ಯವೆ? ಇಲ್ಲ. ಗಡಿಯಾರದ ಹಿಂದೆ ಅಡಗಿರುವ ಸಮಯವನ್ನು ಹುಡುಕುವುದು ಸಾಧ್ಯವಿಲ್ಲ.
ಹಾಗಾದರೆ ಕ್ಷಣಗಳು (moments) ಇರುತ್ತವೆಯಲ್ಲ, ಅವು ಸಮಯವೇ? ಅಥವಾ ಅವು ಕೇವಲ ಘಟನೆಗಳೇ? ಕ್ಷಣಗಳೇ ಸಮಯವೆಂದರೆ, ಸಮಯ ಕೇವಲ ಘಟನೆಗಳು ಎಂದಾಯ್ತು. ಕ್ಷಣಗಳು ಸಮಯವಲ್ಲವಾದರೆ, ಸಮಯ ಯಾವುದು? ನಾವೆಲ್ಲ ಗೊಂದಲಕ್ಕೊಳಗಾದುವುದು ಇಲ್ಲಿಯೇ. ನಾಗಾರ್ಜುನ ನ ಪ್ರಕಾರ ಸಮಯಕ್ಕೆ ಯಾವ ಅರ್ಥ (essence) ಇಲ್ಲ. ಅದಕ್ಕೆ ತನ್ನದೇ ಆದ ಸ್ವಂತ ಅಸ್ತಿತ್ವ ಇಲ್ಲ. ಅದು ಕಾರಣಗಳ ಮೇಲೆ, ಕಂಡೀಷನ್ ಗಳ ಮೇಲೆ, ಮತ್ತು ನಿಮ್ಮ ಮೈಂಡ್ ಹೇಗೆ ಅನುಭವಗಳನ್ನ ಆರ್ಗನೈಸ್ ಮಾಡುತ್ತದೆ ಎನ್ನುವುದರ ಮೇಲೆ ಹುಟ್ಟಿಕೊಳ್ಳುತ್ತದೆ. ಭೂತ, ವರ್ತಮಾನ ಮತ್ತು ಭವಿಷ್ಯ ಎನ್ನುವುದೆಲ್ಲ ಕೇವಲ ಮಾನಸಿಕ ಹಣೆಪಟ್ಟಿಗಳು (mental labels), ನಮ್ಮ ಆಲೋಚನೆಗಳು ಹುಟ್ಟಿಸಿದಂಥವು. ಈ ಯಾವುದಕ್ಕೂ ತನ್ನದೇ ಆದ ಸ್ವತಂತ್ರ ಅಸ್ತಿತ್ವ ಇಲ್ಲ. ಅವು ಖಾಲಿಯಾಗಿ ಇರುವಂಥವು. ಈ ಸಮಯದ ಪರಿಕಲ್ಪನೆಯನ್ನು ಬಿಟ್ಟುಬಿಟ್ಟರೆ ಏನು ಉಳಿದುಕೊಳ್ಳುತ್ತದೆ? ಕೇವಲ ಕಾರಣ ಮತ್ತು ಕಂಡಿಷನ್ಗಳ ಹರಿವು

